Advertisment

ವಿನಯ್​​ಗೆ ನಾನೇ ಅನ್ನೋ ಓವರ್​​ ಕಾನ್ಫಿಡೆನ್ಸ್​​ ಇತ್ತು.. ಹೀಗಂದಿದ್ಯಾಕೆ ನೀತು ವನಜಾಕ್ಷಿ..?

author-image
Veena Gangani
Updated On
ವಿನಯ್​​ಗೆ ನಾನೇ ಅನ್ನೋ ಓವರ್​​ ಕಾನ್ಫಿಡೆನ್ಸ್​​ ಇತ್ತು.. ಹೀಗಂದಿದ್ಯಾಕೆ ನೀತು ವನಜಾಕ್ಷಿ..?
Advertisment
  • ದೊಡ್ಮನೆಗೆ ಗ್ಯ್ರಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ನೀತು ವನಜಾಕ್ಷಿ ಹೊರಗೆ
  • ಬಿಗ್​​​ಬಾಸ್​​ ಮನೆಯಿಂದ ಹೊರಬಂದ ನೀತು ವನಜಾಕ್ಷಿ ಹೇಳಿದ್ದೇನು?
  • ವೀಕ್ಷಕರಿಂದ ಪತ್ರ ಬಂದ ಮೇಲೆ ಓವರ್ ಕಾನ್ಫಿಡೆನ್ಸ್ ಜಾಸ್ತಿ ಆಯ್ತು..!

ಕನ್ನಡದ ಬಿಗ್​​ ರಿಯಾಲಿಟಿ ಶೋ ಶುರುವಾಗಿ 50ನೇ ವಾರಕ್ಕೆ ಬಿಗ್​ಬಾಸ್​ ಮನೆಯಿಂದ ನೀತು ವನಜಾಕ್ಷಿ ಆಚೆ ಬಂದಿದ್ದಾರೆ. ಬಿಗ್​ಬಾಸ್​ ಮನೆಗೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ನೀತು ಎಲ್ಲಾ ಟಾಸ್ಕ್​​​​ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಈ ಮೂಲಕ 2 ಬಾರಿ ಕ್ಯಾಪ್ಟನ್ಸಿ ಪಟ್ಟವನ್ನು ಪಡೆದರು. ಆದರೆ ಬಿಗ್​ಬಾಸ್​​ ಮನೆಯ 2ನೇ ಬಾರಿ ಕ್ಯಾಪ್ಟನ್​ ಆಗುವ ಅದೃಷ್ಟ ಅವರಿಗೆ ಇರಲಿಲ್ಲ. ಇದೇ ವೇಳೆ ಜನರಿಂದ ಕಡಿಮೆ ವೋಟ್​ ಬಂದ ಕಾರಣ ನೀತು ಅವರು ಬಿಗ್​​ಬಾಸ್​ ಮನೆಯಿಂದ ಆಚೆ ಬಂದಿದ್ದಾರೆ.

Advertisment

publive-image

ಇನ್ನು, ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಬಳಿಕ ನ್ಯೂಸ್​ಫಸ್ಟ್​​ನೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಬಿಗ್​​ಬಾಸ್​​ ಮನೆಯಲ್ಲಿದ್ದ ಸ್ಪರ್ಧಿಗಳ ಬಗ್ಗೆ ಮಾತಾಡಿದ್ದಾರೆ. ಅದರಲ್ಲೂ ವಿನಯ್​​ ಗೌಡ ಹೇಗೆ ಆಟ ಆಡುತ್ತಿದ್ದಾರೆ ಎಂಬುವುದರ ಬಗ್ಗೆ ಮಾತಿಹಿ ಹಂಚಿಕೊಂಡಿದ್ದಾರೆ. ಮೊದ ಮೊದಲು ಎಲ್ಲ ಸ್ಪರ್ಧಿಗಳು ಅರ್ಥ ಮಾಡಿಕೊಳ್ಳುವ ಹಂತದಲ್ಲಿ ಇರುತ್ತಿದ್ದರು. ದಿನ ಕಳೆದಂತೆ ವಿನಯ್​​ ಗೌಡ ಅವರಿಗೆ ವೀಕ್ಷಕರಿಂದ ಆನೆ ಎಂಬ ಪತ್ರ ಕೂಡ ಬಂತು. ಇದೇ ವಿಚಾರಕ್ಕೆ ಅವರಲ್ಲಿ ಓವರ್ ಕಾನ್ಫಿಡೆನ್ಸ್​ ಜಾಸ್ತಿ ಆಯ್ತು. ಅಲ್ಲಿನಿಂದ ಬಿಗ್​​ಬಾಸ್​​ ಮನೆಯಲ್ಲಿ ಕೆಲ ಸ್ಪರ್ಧಿಗಳ ಜೊತೆ ಗಲಾಟೆ ಆಗೋಕೋ ಶುರುವಾಯ್ತು. ಆದರೆ ನಾವು ನಮ್ಮ ಆಟವನ್ನು ಶುರು ಮಾಡಿ ಬಿಟ್ಟಿದ್ವಿ ಎಂದು ಹೇಳಿದ್ದಾರೆ.

ಇನ್ನು, ಕಿಚ್ಚ ಸುದೀಪ್ ಬಿಗ್​ಬಾಸ್​​ ಮನೆಯಿಂದ ಆಚೆ ಹೋಗುವ ಸ್ಪರ್ಧಿ ಹೆಸರು ಹೇಳುತ್ತಿದ್ದಂತೆ ಎಲ್ಲರು ಶಾಕ್​ ಆದರು. ಅದರಲ್ಲೂ  ಡ್ರೋನ್​​ ಪ್ರತಾಪ್​​, ತುಕಾಲಿ ಸಂತೋಷ್​​, ವರ್ತೂರು ಸಂತೋಷ್​​, ತನಿಶಾ ಭಾವುಕರಾದರು. ಜೊತೆಗೆ ಬಿಗ್​ಬಾಸ್​ ಮನೆಯಿಂದ ಆಚೆ ಬಂದ ನೀತು ಉಳಿದ ಸ್ಪರ್ಧಿಗಳಿಗೆ ಎಲ್ಲರಿಗೂ ಆಲ್​ ದಿ ಬೆಸ್ಟ್ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment