Advertisment

ಸಮೀರ್ ಆಚಾರ್ಯ ದಂಪತಿ ಗಲಾಟೆಗೆ ಹೊಸ ಟ್ವಿಸ್ಟ್.. ಠಾಣೆ ಮೆಟ್ಟಿಲೇರಿದ ಮೇಲೆ ಅಸಲಿ ವಿಷ್ಯ ಬಹಿರಂಗ; ಏನಾಯ್ತು?

author-image
admin
Updated On
ಸಮೀರ್ ಆಚಾರ್ಯ ದಂಪತಿ ಗಲಾಟೆಗೆ ಹೊಸ ಟ್ವಿಸ್ಟ್.. ಠಾಣೆ ಮೆಟ್ಟಿಲೇರಿದ ಮೇಲೆ ಅಸಲಿ ವಿಷ್ಯ ಬಹಿರಂಗ; ಏನಾಯ್ತು?
Advertisment
  • ಸಮೀರ್ ಆಚಾರ್ಯ ಅವರ ವಿರುದ್ಧ ಪತ್ನಿ ಶ್ರಾವಣಿ ಆರೋಪ
  • ಫೋನ್ ಒಡೆದು ಹಾಕಿ, ಕೈ - ಮುಖಕ್ಕೆ ಹಲ್ಲೆ ಮಾಡಿದ್ರಾ ಸಮೀರ್‌?
  • ಸೊಸೆ ವಿರುದ್ಧ ದೂರು ನೀಡಲು ಮುಂದಾದ ಸಮೀರ್ ಫೋಷಕರು

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಮಾಜಿ ಸ್ಪರ್ಧಿ ಸಮೀರ್ ಆಚಾರ್ಯ ಅವರು ಮತ್ತೆ ಸುದ್ದಿಯಾಗಿದ್ದಾರೆ. ಸಮೀರ್ ಅವರ ದಾಂಪತ್ಯದಲ್ಲಿ ಕಹಿ ಘಟನೆಯೊಂದು ನಡೆದಿದ್ದು, ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಸಮೀರ್ ಆಚಾರ್ಯ ಅವರ ವಿರುದ್ಧ ಅವರ ಪತ್ನಿ ಶ್ರಾವಣಿ ಅವರು ಗಂಭೀರ ಆರೋಪ ಮಾಡಿದ್ದಾರೆ.

Advertisment

ಪತ್ನಿ ಮೇಲೆ ಹಲ್ಲೆ ಮಾಡಿದ್ರಾ ಸಮೀರ್ ಆಚಾರ್ಯ?
ಬಿಗ್ ಬಾಸ್ ಮಾಜಿ ಸ್ಪರ್ಧಿ ಸಮೀರ್ ಆಚಾರ್ಯ ಅವರು ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಸಮೀರ್ ಆಚಾರ್ಯ ತಂದೆ-ತಾಯಿ ಜೊತೆ ಸೇರಿ ಪತ್ನಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪದಲ್ಲಿ ಪತ್ನಿ ಶ್ರಾವಣಿ ಅವರು ನ್ಯಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

publive-image

ಸಮೀರ್​ ಸಂಸಾರ ಸಮರ ಯಾಕೆ?
ಸದ್ಯದ ಮಾಹಿತಿ ಪ್ರಕಾರ ಸಮೀರ್ ಆಚಾರ್ಯ ಅವರ ಮಗಳನ್ನು ಶ್ರಾವಣಿ ಬೆದರಿಸಿದ್ದ ಕಾರಣಕ್ಕೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಮನೆಯಲ್ಲಿ ಆರಂಭವಾಗಿದ್ದ ಈ ಜಗಳ ವಿಕೋಪಕ್ಕೆ ತಿರುಗಿದೆ. ಸಮೀರ್ ಅವರು ಅತ್ತೆ, ಮಾವ ಸೇರಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಶ್ರಾವಣಿ ಅವರು ಇನ್​​​ಸ್ಟಾಗ್ರಾಮ್​ನಲ್ಲಿ ಲೈವ್ ಮಾಡಲು ಹೋಗಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ ಮನೆಗೆ ಬಂದ ಕುಂದಾಪುರದ ಫೈರ್ ಬ್ರಾಂಡ್; ಚೈತ್ರಾ ಹೋಗಿದ್ದು ಇದಕ್ಕಾ? 

Advertisment

ಲೈವ್ ವಿಡಿಯೋ ಮಾಡುವಾಗ ಸಮೀರ್ ಆಚಾರ್ಯ ಅವರು ಪತ್ನಿ ಶ್ರಾವಣಿ ಅವರ ಫೋನ್ ಒಡೆದು ಹಾಕಿ, ಕೈ - ಮುಖಕ್ಕೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಈ ಗಲಾಟೆಯಲ್ಲಿ ಸಮೀರ್ ತಂದೆ ರಾಘವೇಂದ್ರ ಅವರ ತಲೆಗೂ ಗಾಯಗಳಾಗಿದೆ.

ಸಮೀರ್ ಆಚಾರ್ಯ ಕುಟುಂಬದ ವಿರುದ್ಧ ಶ್ರಾವಣಿ ಅವರು ನ್ಯಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದರು. ಆಗ ಸೊಸೆ ವಿರುದ್ಧ ದೂರು ನೀಡಲು ಸಮೀರ್ ಅವರ ಫೋಷಕರು ಮುಂದಾಗಿದ್ದಾರೆ. ಕೊನೆಗೆ ಮಹಿಳಾ ಠಾಣೆ ಅಧಿಕಾರಿಗಳು ಕೌನ್ಸ್‌ಲಿಂಗ್ ಮೂಲಕ ದಂಪತಿಯನ್ನ ಒಂದು ಮಾಡಿದ್ದಾರೆ. ಕೊಟ್ಟ ಕಂಪ್ಲೇಂಟ್‌ ವಾಪಸ್ ಪಡೆದು ಮತ್ತೊಮ್ಮೆ ಹೀಗೆ ಮಾಡದಂತೆ ಅರ್ಜಿ ಬರೆದುಕೊಟ್ಟು ವಾಪಸ್ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ. ಸಮೀರ್ ಆಚಾರ್ಯ ಅವರ ಈ ನಡೆ ಅವರನ್ನು ಬಿಗ್‌ ಬಾಸ್ ಹಾಗೂ ಕನ್ನಡ ಕೋಟ್ಯಾಧಿಪತಿಯಲ್ಲಿ ನೋಡಿದ್ದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment