‘ಗೋಜಪ್ಪ’ ಎಂದು ಹೇಳಿ ಟ್ರೋಲ್ ಆಗಿದ್ದ ಬಿಗ್ಬಾಸ್ ಸ್ಪರ್ಧಿ ರ‍್ಯಾಪರ್ ಇಶಾನಿ
‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಬದಲು ‘ಎಲ್ಲೋ ಗೋಜಪ್ಪ ಎಂದಿದ್ದೇಕೆ..?
ಎಲ್ಲೋ ಗೋಜಪ್ಪ ಇಷ್ಟೊಂದು ಟ್ರೋಲ್ ಆಗುತ್ತೆ ಅಂತ ನನಗೆ ಗೊತ್ತಿರಲಿಲ್ಲ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀನಸ್ 10ಕ್ಕೆ ಱಪರ್ ಇಶಾನಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು. ಬಿಗ್ಬಾಸ್ ಶುರುವಾಗಿ ಈಗಾಗಲೇ ಆರು ವಾರ ಕಳೆದಿದೆ. ಆರನೇ ವಾರಕ್ಕೆ ಬಿಗ್ಬಾಸ್ ಮನೆಯಿಂದ ಇಶಾನಿ ಆಚೆ ಬಂದಿದ್ದಾರೆ. ಬಿಗ್ ಮನೆಯಲ್ಲಿದ್ದಾಗ ಇಶಾನಿ ಅವರು ಕೆಲವು ಱಪ್ ಸಾಂಗ್ಗಳನ್ನು ಹಾಡಿದ್ದರು. ಆ ಸಾಂಗ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದ್ದವು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಗ್ಬಾಸ್ ಸ್ಪರ್ಧಿಗಳಿಗೆ ಮನರಂಜನೆ ಟಾಸ್ಕ್ವೊಂದನ್ನು ನೀಡಿದ್ದರು. ಇದರ ಅನುಸಾರ ಬಿಗ್ಬಾಸ್ ಪ್ಲೇ ಮಾಡುವ ಹಾಡನ್ನು ಬಲೂನ್‌ನಲ್ಲಿ ತುಂಬಿರುವ ಹೀಲಿಯಂ ಅನಿಲ ಸೇವಿಸಿ ಸ್ಪರ್ಧಿಗಳು ಹಾಡಬೇಕಿತ್ತು. ಹೀಗೆ ಇಶಾನಿ ಅವರು ಹಾಡಿಯೋ ಹಾಡು ಭಾರೀ ವೈರಲ್ ಆಗಿತ್ತು. ಇಶಾನಿ ಹಾಡಿರೋ ಹಾಡು ಸಖತ್ ಟ್ರೋಲ್ ಆಗಿತ್ತು.
ಹೌದು, ಎಲ್ಲೋ ಜೋಗಪ್ಪ ನಿನ್ನ ಅರಮನೆ ಎಂಬ ಹಾಡು ಸ್ಯಾಂಡಲ್ವುಡ್ನ ಜನಪ್ರಿಯ ಜನಪದ ಗೀತೆ. ಈ ಹಾಡನ್ನ ಕೇಳಿದರೆ ಈಗಲೂ ಫ್ಯಾನ್ಸ್ ತಲೆದೂಗುತ್ತಾರೆ. ಆದರೆ ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡನ್ನ ಎಲ್ಲೋ ಗೋಜಪ್ಪ ನಿನ್ನ ಅರಮನೆ ಅಂತ ಹಾಡಿದ್ದಕ್ಕೆ ಇಶಾನಿ ಸಖತ್ ಟ್ರೋಲ್ ಆಗಿದ್ದರು. ಇಶಾನಿ ಹಾಡಿದ ಎಲ್ಲೋ ಗೋಜಪ್ಪ ನಿನ್ನ ಅರಮನೆ ಎಂದು ಕೇಳುತ್ತಿದ್ದಂತೆ ಬಿಗ್ಬಾಸ್ಮನೆ ಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕರು ಕೂಡ ಇಶಾನಿ ಹಾಡಿಗೆ ನಕ್ಕಿದ್ದಾರೆ. ಇದೇ ವಿಚಾರವಾಗಿ ಇಶಾನಿ ಅವರು ನ್ಯೂಸ್ಫಸ್ಟ್ನೊಂದಿಗೆ ಮಾತಾಡಿದ್ದಾರೆ.
ಈ ಬಗ್ಗೆ ಇಶಾನಿ ಹೇಳಿದ್ದೇನು..?
ಬಿಗ್ಬಾಸ್ ಮನೆಯಿಂದ ಆಚೆ ಬಂದ ಮೇಲೆ ಗೊತ್ತಾಯಿತು. ಎಷ್ಟರ ಮಟ್ಟಿಗೆ ನಾನು ಹಾಡಿರೋ ಹಾಡು ಟ್ರೋಲ್ ಆಗಿದೆ ಎಂದು. ಇದರ ಮಜಾ ಎಂದರೆ ಈ ಹಾಡನ್ನು ಹಾಡುವ ಮುಂಚೆ ಕಾರ್ತಿಕ್ ಅವರು ಸರಿಯಾಗಿ ಹೇಳಿಕೊಟ್ಟಿದ್ದರು. ಗೋಜಪ್ಪನಾ ಗೋಜಪ್ಪ ನಾ ಎಂದು ನಾನು ಕೇಳಿದ್ದೆ. ಅದಕ್ಕೆ ಕಾರ್ತಿಕ್ ಗೋಜಪ್ಪ ಅಲ್ಲ ಅದು ಜೋಗಪ್ಪ ಎಂದಿದ್ದರು. ಬಳಿಕ ನನ್ನ ಸರದಿ ಬಂತು ಆಗ ಎಲ್ಲೋ ಗೋಜಪ್ಪ ನಿನ್ನ ಅರಮನೆ ಎಂದು ಹಾಡಿ ಬಿಟ್ಟೆ. ನನಗೆ ಗೊತ್ತೆ ಆಗಲಿಲ್ಲ, ನಾನು ಏನು ಹಾಡುತ್ತಿದ್ದೇನೆ ಎಂದು. ಆಮೇಲೆ ನನ್ನ ಸುತ್ತ ಮುತ್ತ ಇರುವವರು ನನ್ನನ್ನು ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ. ಏಕೆ ಹೀಗೆ ನಗುತ್ತಿದ್ದಾರೆ ಎಂದು ಗೊತ್ತಾಗಲಿಲ್ಲ. ಬಳಿಕ ಕೇಳಿದೆ ಏಕೆ ಇಷ್ಟು ನಗುತ್ತಿದ್ದೀರಿ ಎಂದು. ಆಗ ನನಗೆ ಗೊತ್ತಾಯಿತ್ತು. ಮತ್ತೆ ನಾನು ಜೋಗಪ್ಪ ಬದಲು ಗೋಜಪ್ಪ ಎಂದು ಹಾಡಿದ್ದೇನೆ ಅಂತಾ. ಆದರೆ ಇಷ್ಟು ಟ್ರೋಲ್ ಆಗುತ್ತೆ ಅಂತಾ ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ