newsfirstkannada.com

×

BBK11: ಬಿಗ್​ಬಾಸ್​ ಸ್ಪರ್ಧಿಗಳಿಗೆ ಮೈಚಳಿ ಬಿಡಿಸಿದ ಬಾದ್​ ಷಾ ಸುದೀಪ್​; ಇಲ್ಲಿವೆ ಟಾಪ್​ 10 ಕಿಚ್ಚನ ಪಂಚ್​

Share :

Published October 20, 2024 at 10:42pm

    ರಣಾಂಗಣವಾದ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮ

    ಬಿಗ್​ ವೇದಿಕೆಗೆ ಖಡಕ್​ ಆಗಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್

    ​ಬಿಗ್​ಬಾಸ್​ ಸ್ಪರ್ಧಿಗಳ ಒಂದೇ ಮಾತಲ್ಲಿ ಬೆವರಿಳಿಸಿದ ಕಿಚ್ಚ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಈ ಬಾರಿಯ ಬಿಗ್​ಬಾಸ್​ ಸೀಸನ್​ 11ರ ಮೂರನೇ ವಾರದಲ್ಲಿ ಕಿಚ್ಚ ಸುದೀಪ್​ ಸ್ಪರ್ಧಿಗಳ ವಿರುದ್ಧ ಕೆಂಡಮಂಡಲರಾಗಿ ಮಾತಾಡಿದ್ದಾರೆ.

ಇದನ್ನೂ ಓದಿ: BBK11: ಮನೆಗೆ ಬಂದ ಕೆಲವೇ ಹೊತ್ತಲ್ಲಿ ಹನುಮಂತನಿಗೆ ಖುಲಾಯಿಸದ ಅದೃಷ್ಟ; ಬಿಗ್​ಬಾಸ್​ ನಿರ್ಧಾರಕ್ಕೆ ಮನೆಮಂದಿ ಶಾಕ್

ಜೊತೆಗೆ ಸ್ಪರ್ಧಿಗಳು ಮಾಡುತ್ತಿರೋ ಸರಿ ತಪ್ಪುಗಳ ಬಗ್ಗೆ ಮಾತಾಡಿದ್ದಾರೆ. ಅಲ್ಲದೇ ಕೆಲವು ಸ್ಪರ್ಧಿಗಳಿಗೆ ಕೆಂಡಮಂಡಲವಾಗಿ ಮಾತಾಡಿದ್ದಲ್ಲದೇ ಮೈಚಳಿ ಬಿಡಿಸಿದ್ದಾರೆ. ಹೌದು, ನಿನ್ನೆಯ ಎಪಿಸೋಡ್​ನಲ್ಲಿ ಬಿಗ್​ಬಾಸ್​ ವೇದಿಕೆಗೆ ಬಂದ ಕಿಚ್ಚ ತುಂಬಾ ಸಿಟ್ಟಾಗಿದ್ದರು. ಸಿಟ್ಟಿನಿಂದಲೇ ಶೋ ಶುರು ಮಾಡಿದ ಕಿಚ್ಚ ಮನೆಯಲ್ಲಿರೋ ಸ್ಪರ್ಧಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಈ ವಾರದ ಬಿಗ್​ಬಾಸ್​ ಮನೆ ರಣಾಂಗಣವಾಗಿತ್ತು. ಇನ್ನು ಕಿಚ್ಚ ಸುದೀಪ್​ ಒಬ್ಬೊಬ್ಬ ಸ್ಪರ್ಧಿಗಳಿಗೆ ಅರ್ಥ ಪೂರ್ಣವಾದ ಮಾತನ್ನು ಹೇಳಿದ್ದಾರೆ. ಅದರಲ್ಲಿ ಟಾಪ್​ 10 ಪಂಚ್​ಗಳನ್ನು ಈ ಕೆಳಕಂಡತೆ ನೀಡಲಾಗಿದೆ.

ಕಿಚ್ಚ ಸುದೀಪ್​ ಸ್ಪರ್ಧಿಗಳಿಗೆ ಕೊಟ್ಟ ಟಾಪ್​ 10 ಪಂಚ್ ಇಲ್ಲಿವೆ

1. ತಪ್ಪು ಮಾಡಿದವರು ಹೊರಗಡೆ ಹೋಗಿದ್ದಾರೆ. ಆದರೆ, ನಿಮ್ಮ ಪೈಕಿ ಎಷ್ಟು ಜನರು ಸರಿ ಇದ್ದೀರಿ ಎಂದೇ ಕಿಚ್ಚ ಸುದೀಪ್‌ ಪ್ರಶ್ನೆ ಮಾಡಿದ್ದಾರೆ.

2. ಒಬ್ಬ ವ್ಯಕ್ತಿ ತನ್ನ ಚಪ್ಪಲಿಯನ್ನು ಉಗ್ರಂ ಮಂಜು ಎತ್ತಿ ಬಿಸಾಡುತ್ತಾನೆ. ಅದು ನಿಮಗೆ ಒಕೆನಾ?
ಪ್ರಾಮಾಣಿಕತೆ ಅನ್ನೋ ಶಬ್ದವೇ ಈ ಮನೆಗೆ ಎಂದೂ ಸೂಟ್‌ ಆಗೋದಿಲ್ಲ ಅಂತ ಕಿಡಿಕಿಡಿಯಾಗಿದ್ದಾರೆ.

3. ಮಾತುಗಳಿಂದಲೇ ಒಬ್ಬ ವ್ಯಕ್ತಿ ಮನೆಯಿಂದ ಹೊರಗಡೆ ಹೋದ ಅನ್ನೋದಾಗಿದ್ರೆ, ನೀವು ಮಾತಾಡಿರೋ ಕೆಲವು ತಪ್ಪು ಮಾತುಗಳನ್ನು ಇಟ್ಟುಕೊಂಡು ನಿಮ್ಮನ್ನು ಯಾಕೆ ಮನೆಯಲ್ಲಿ ಇಟ್ಟುಕೊಂಡಿರಬೇಕು ಎಂದು ಮಾನಸಗೆ ನೇರಪ್ರಶ್ನೆ ಮಾಡಿದ್ದಾರೆ.

4. ಹೆಣ್ಣುಮಕ್ಕಳ ಬಗ್ಗೆ ಹಾಗೆಲ್ಲಾ ಮಾತನಾಡಬೇಡಿ ಎಂದು ನೀವು ಹೇಳುತ್ತೀರಿ. ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅಂದ್ರೆ ಅಲ್ಲಿ ಯಾರೂ ಕೂಡ ಅಪ್ಪನಿಗೆ ಬೈತಾ ಇರೋದಿಲ್ಲ. ಅವನು ಅಲ್ಲಿ ತಾಯಿಗೆ ಬೈತಾ ಇರ್ತಾನೆ. ಎಂದು ಸಿಟ್ಟಿನಲ್ಲಿಯೇ ಚೈತ್ರಾಗೆ ತಿರುಗೇಟು ಕೊಟ್ಟಿದ್ದಾರೆ.

5. ಕ್ಯಾಪ್ಟನ್​ ಶಿಶಿರ್​ ಅನುಷಾ ರೈ ಅವರನ್ನು ಮನೆಯಿಂದ ಹೊರಗೆ ಹಾಕಲು ನೇರವಾಗಿ ನಾಮಿನೇಟ್ ಮಾಡಿದ್ದರು. ಇದೇ ಕೋಪದಲ್ಲಿ ನನಗೆ ಬಕೆಟ್ ಹಿಡಿಯೋದಕ್ಕೆ ಬರೋದಿಲ್ಲ ಗುರು ಅಂತ ಕಿಡಿಕಾಡಿದ್ದಾರೆ. ಆದರೆ ಇದನ್ನು ಐಶ್ವರ್ಯಾ ಶಿಶಿರ್​ ನಿಮಗೆ ಹೇಳಿದ್ದು ಅಂತ ಪರೋಷವಾಗಿ ಸನ್ನೆ ಮಾಡಿ ತೋರಿಸಿದ್ದರು. ಈ ವಿಚಾರದ ಬಗ್ಗೆ ಕೂಡ ಕಿಚ್ಚ ಸುದೀಪ್ ಪಂಚಾಯ್ತಿಯಲ್ಲಿ ಬಿಟ್ಟಿದ್ದಾರೆ.

6. ಬಿಗ್​ಬಾಸ್​ ಮನೆಗೆ ತಾವೇ ಅಭಿನಂದನೆ ಬರೆದಿದ್ದ ಕೇಕ್​ ಕಳುಹಿಸಿದ ಕಿಚ್ಚ ಸುದೀಪ್​ ಸ್ಪರ್ಧಿಗಳ ಕೈಯಲ್ಲೇ ಕಟ್​ ಮಾಡಿದ್ದರು. ಇದಕ್ಕೆ ಮುಖ್ಯ ಕಾರಣ ​ಈ ಸೀಸನ್​ ನನಗೆ ಇಷ್ಟವಾಗದ ಕಳೆ ಸೀಸನ್​ ಅನ್ನು ಬಿಟ್​ ಮಾಡುತ್ತೆ ಅಂತ ಎಂದು ಹೇಳಿದ್ದಾರೆ.

7. ನನಗೆ ಯಾರಾದರೂ ಕೇಳಿದ್ರೆ ಯಾವ ಸೀಸನ್​ ಇಷ್ಟ ಇಲ್ಲ ಅಂತ ಕೇಳಿದ್ರೆ ನಾನು 6 ಅಂತ ಹೇಳುತ್ತಿದ್ದೆ. ಆದರೆ ​ಈಗ ಸೀಸನ್​ 11 ಅಂತ ಹೇಳಬೇಕು ಅಂತ ಪಂಚ್​ ಕೊಟ್ಟಿದ್ದಾರೆ.

8. ಹಂಸ ಅವರ ವಿಚಾರವಾಗಿಯೂ ಕಿಚ್ಚ ಸುದೀಪ್​ ಅವರು ಮಾತಾಡಿದ್ದಾರೆ. ಜಗದೀಶ್ ಅವರು ಯಾಕೆ ಸಿಟ್ಟಾಗಿದ್ದರು ಅನ್ನೋ ಸತ್ಯವನ್ನ ಸುರೇಶ್ ತಮ್ಮ ಬಾಯಿಂದ ಹೇಳಿದ್ದಾರೆ. ಕ್ರಶ್ ಆಫ್ ದಿ ಕರ್ನಾಟಕ ಆದ್ಮೇಲೆ ಹಂಸ ಆದ್ಮೇಲೆ ಮನೆಯ ಮಂದಿ ಬದಲಾದ್ರು. ಆ ವಿಚಾರದಲ್ಲಿ ಹಂಸ ಕೂಡ ಬದಲಾಗಿದ್ದರು. ಜಗದೀಶ್ ಅವರನ್ನ ದೂರವೇ ಇಟ್ಟರು ಅಂತ ಹೇಳಿದ್ದಾರೆ. ಇದೇ ವಿಚಾರಕ್ಕೆ ಕಿಚ್ಚ ಸುದೀಪ್​ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

9. ಬಿಗ್​ಬಾಸ್​ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ಜಗದೀಶ್​ ಅವರು ಒಂದು ಕಡೆ ಕುಳಿತುಕೊಂಡಾಗ ತಮಾಷೆ ಮಾಡುತ್ತಿದ್ದರು. ಆಗ ಅನುಷಾ ರೈ ನೀವು ಎದ್ದು ಹೋಗಬೇಕಾಗಿತ್ತು ಅಂತ ಕಿಚ್ಚ ಉದಾಹರಣೆ ಕೊಡುವ ಮೂಲಕವೇ ಕ್ಲಾಸ್​ ತೆಗೆದುಕೊಂಡಿದ್ದಾರೆ. ಜೊತೆಗೆ ಅವರ ವ್ಯಕ್ತಿತ್ವದ ಬಗ್ಗೆ ಕೂಡ ಮಾತಾಡಿದ್ದಾರೆ.

10. ಹೊಸಬರು ನಮ್ಮ ಮನೆ ಬಾಗಿಲಿಗೆ ಬಂದಾಗ ಆಗ ನಾನು ಅವರ ಕೈ ಹಿಡಿದುಕೊಂಡು ಎತ್ತಿ ನಿಂತುಕೊಂಡು ಇರುತ್ತೇವೆ. ಆದರೆ, ಅವರು ನನ್ನ ಪರವಾಗಿಯೇ ನಿಂತಿದ್ದಾರೆ ಅಂತ ನಾನು ಹೇಳಿಲ್ಲ. ಆದರೆ ಇನ್ನೊಬ್ಬರು ತಮಾಷೆ ಮಾಡಬೇಕಾದರೇ ಇಡೀ ಪ್ರಪಂಚ ಅವರ ಬಗ್ಗೆ ಮಾತಾಡುತ್ತಿದ್ದಾಗ ಅವರ ಪಕ್ಕ ಕುಳಿತುಕೊಳ್ತಾರೆ ಅಲ್ವಾ ಮೇಡಂ ಅಲ್ಲಿಗೆ ಅವರು ನನ್ನ ಭಾಗಕ್ಕೆ  ಸತ್ರು ಅಂತ ಲೆಕ್ಕ ಟಾಂಗ್​ ಕೊಟ್ಟಿದ್ದಾರೆ.

ಇನ್ನು, ನಿನ್ನೆಯ ಸಂಚಿಕೆಯ ಮುಂದುವರೆದ ಭಾಗವಾಗಿ ಇಂದು ಪ್ರಸಾರವಾಗಿತ್ತು. ಇಂದಿನ ಎಪಿಸೋಡ್​ನಲ್ಲಿಯೂ ಕಿಚ್ಚ ಸುದೀಪ್​ ಮನೆ ಮಂದಿಯ ವಿರುದ್ಧ ಬ್ಯಾಟ್​ ಬೀಸಿದ್ದಾರೆ. ಸುದೀಪ್‌ ಅವರ ಒಂದೊಂದು ಪ್ರಶ್ನೆಗಳಿಗೂ ಮನೆಯ ಸದಸ್ಯರ ತಲೆ ಕೆಳಗಾಗಿದೆ. ಸ್ಪರ್ಧಿಗಳ ಮುಖಕ್ಕೆ ಹೊಡೆದಂತೆ ಮಾತಾಡಿ ತಮ್ಮ ತಪ್ಪನ್ನು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ಬಿಗ್​ಬಾಸ್​ ಸ್ಪರ್ಧಿಗಳಿಗೆ ಮೈಚಳಿ ಬಿಡಿಸಿದ ಬಾದ್​ ಷಾ ಸುದೀಪ್​; ಇಲ್ಲಿವೆ ಟಾಪ್​ 10 ಕಿಚ್ಚನ ಪಂಚ್​

https://newsfirstlive.com/wp-content/uploads/2024/10/kiccha12.jpg

Load More