ಹನುಮಂತ ಆಯ್ಕೆಯ ಅನುಸಾರ ನೇರ ನಾಮಿನೇಷನ್ ಯಾರಿಗೆ?
ಬಹಳ ವಿಭಿನ್ನವಾಗಿ ನಡೆದ ಬಿಗ್‌ಬಾಸ್ ನಾಮಿನೇಷನ್ ಪ್ರಕ್ರಿಯೆ
ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ಮಾನಸ ಸೇಫ್ ಆಗಿದ್ದು ಯಾರು?
ಈ ಬಾರಿಯ ಕನ್ನಡದ ಬಿಗ್‌ಬಾಸ್ ಸೀಸನ್ 11ರಲ್ಲಿ ಒಂದಲ್ಲಾ ಒಂದು ಬದಲಾವಣೆಗಳು ಆಗುತ್ತಲೇ ಇವೆ. ಪ್ರತಿ ವಾರದಂತೆ ಈ ವಾರ ಕೂಡ ಬಿಗ್‌ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಆದರೆ ಈ ಬಾರಿ ನಡೆದ ನಾಮಿನೇಷನ್ ಕೊಂಚ ಬೇರೆಯಾಗಿತ್ತು.
ಇದನ್ನೂ ಓದಿ: ಮನೆ ಹಿತ್ತಲಲ್ಲಿ ಮಹಿಳೆಯ 6 ತುಂಡು ಕತ್ತರಿಸಿ ಹೂತಿಟ್ಟಿದ್ದ; ಈ ಭಯಾನಕ ಕೃತ್ಯ ಬೆಳಕಿಗೆ ಬಂದಿದ್ದೇ ರೋಚಕ!
ಹೌದು, ಈ ವಾರ ಬಿಗ್‌ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 12 ಮಂದಿ ನಾಮಿನೇಟ್ ಆಗಿದ್ದಾರೆ. ಒಟ್ಟು 14 ಸ್ಪರ್ಧಿಗಳಲ್ಲಿ ಗೌತಮಿ ಮತ್ತು ತ್ರಿವಿಕ್ರಮ್ ಬಿಟ್ಟು ಉಳಿದ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಅದರಲ್ಲೂ ಕ್ಯಾಪ್ಟನ್ ಹನುಮಂತ ಆಯ್ಕೆಯ ಅನುಸಾರ ಗೋಲ್ಡ್ ಸುರೇಶ್ ಅವರು ನೇರ ನಾಮಿನೇಟ್ ಆಗಿದ್ದಾರೆ.
ಅಲ್ಲದೇ ಕಳೆದ ವಾರ ಬಿಗ್‌ಬಾಸ್ ಮನೆಯಿಂದ ಹಂಸಾ ಅವರು ಆಚೆ ಹೋಗುವಾಗ ವಿಶೇಷ ಅಧಿಕಾರವನ್ನ ಬಳಸಿ ಹನುಮಂತ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಉಳಿದಂತೆ ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ತುಕಾಲಿ ಮಾನಸ , ಉಗ್ರಂ ಮಂಜು, ಅನುಷಾ ರೈ , ಧರ್ಮ ಕೀರ್ತಿರಾಜ್ , ಐಶ್ವರ್ಯಾ, ಧನರಾಜ್, ಶಿಶರ್ ಶಾಸ್ತ್ರಿ ನಾಮಿನೇಟ್ ಆಗಿದ್ದಾರೆ.
ಬಿಗ್‌ಬಾಸ್ ಕ್ಯಾಪ್ಟನ್ಗೆ ಕೊಟ್ಟ ಅಧಿಕಾರವೇನು?
ಮೊದಲು ನಾಮಿನೇಷನ್ನಲ್ಲಿ ಯಾರು ಇರಬೇಕೆಂದು ಇಬ್ಬರು ವ್ಯಕ್ತಿಗಳನ್ನು ಬಿಗ್‌ಬಾಸ್ ಆಯ್ಕೆ ಮಾಡಿದ್ದರು. ಆ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರನ್ನು ಮನೆಯವರು ನಾಮಿನೇಟ್ ಮಾಡಬೇಕಿತ್ತು. ಇನ್ನೊಂದು ಕಡೆ ಕನ್ಫೆಷನ್ ರೂಂನಲ್ಲಿದ್ದ ಕ್ಯಾಪ್ಟನ್ ಹನುಮಂತಗೆ ಬಿಗ್‌ಬಾಸ್ ಇಬ್ಬರಲ್ಲಿ ಯಾರನ್ನು ನಾಮಿನೇಟ್ ಮಾಡಿದ್ದೀರಿ ಎಂದು ಹೇಳಿದ್ದರು. ಹೊರಗಡೆ ಅತೀ ಹೆಚ್ಚು ಮೋಟಿಂಗ್ನಲ್ಲಿ ನಾಮಿನೇಟ್ ಆದವರ ಹೆಸರು ಹನುಮಂತ ಹೇಳಿದ್ದರೆ ಅವರಷ್ಟೇ ನಾಮಿನೇಟ್ ಆಗುತ್ತಿದ್ದರು. ಆದರೆ ಕಡಿಮೆ ವೋಟ್ ಪಡೆದರವರ ಹೆಸರು ಹನುಮಂತ ನಾಮಿನೇಟ್ ಮಾಡುತ್ತಿದ್ದರೆ ಬಿಗ್‌ಬಾಸ್ ವೋಟಿಂಗ್ನಲ್ಲಿ ನಿಂತುಕೊಂಡಿದ್ದ ಇಬ್ಬರೂ ಕೂಡ ನಾಮಿನೇಟ್ ಆಗುತ್ತಿದ್ದರು. ಹೀಗಾಗಿ ಮನೆಯಲ್ಲಿ ತ್ರಿವಿಕ್ರಮ್ ಮತ್ತು ಗೌತಮಿ ಬಿಟ್ಟು ಉಳಿದ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಆದರೆ ಈ ವಾರ ಯಾವ ಸ್ಪರ್ಧಿ ಬಿಗ್‌ಬಾಸ್ ಮನೆಯಿಂದ ಆಚೆ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ