newsfirstkannada.com

ದಿವ್ಯಾ ಉರುಡುಗ ಕೈಯಲ್ಲಿ ಮೂಡಿದ ‘ಟೋಬಿ’ ಚಿತ್ರದ ಅದ್ಭುತ ಕಲಾಕೃತಿ: ಹೇಗಿದೆ ನೀವೇ ನೋಡಿ..!

Share :

27-08-2023

    ದಿವ್ಯಾ ಉರುಡುಗ ಟ್ಯಾಲೆಂಟ್​ಗೆ ಅದೆಷ್ಟೋ ಜನರು ಫಿದಾ

    ಮೂರನೇ ದಿನ ಟೋಬಿ ಸಿನಿಮಾ ಕಲೆಕ್ಷನ್​ ಎಷ್ಟು ಗೊತ್ತಾ?

    ಮಲ್ಟಿ ಟ್ಯಾಲೆಂಟೆಡ್ DU ಅಕ್ಕಾ.. ಎಂದ ಅಭಿಮಾನಿಗಳು!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​​ 8 ಮತ್ತು 9ರಲ್ಲಿ ನಟಿ ದಿವ್ಯಾ ಉರುಡುಗ ಭಾಗವಹಿಸಿದ್ದರು. ಬಿಗ್​​​​​ಬಾಸ್​​ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಅವರ ಮಾತು, ಟ್ಯಾಲೆಂಟ್​ಗೆ ಅದೆಷ್ಟೋ ಜನರು ಫಿದಾ ಆಗಿದ್ದಾರೆ. ಇದೀಗ ತಮ್ಮಲ್ಲಿರುವ ಮತ್ತೊಂದು ಕಲೆಯನ್ನು ಹೊರ ಹಾಕಿದ್ದಾರೆ.

ನಟನೆಯ ಟೋಬಿ ಚಿತ್ರದ ಪೋಸ್ಟರ್​ನಲ್ಲಿ ಕಾಣಿಸಿಕೊಂಡ ನಟ ರಾಜ್​ ಬಿ ಶೆಟ್ಟಿಯ ಚಿತ್ರವನ್ನು ಬಿಡಿಸಿದ್ದಾರೆ ನಟಿ ದಿವ್ಯಾ ಉರುಡುಗ. ಈ ಚಿತ್ರವು ಡ್ರಾಮಾ -ಥ್ರಿಲ್ಲರ್​ ಕಥಾಹಂದರವನ್ನು ಹೊಂದಿದೆ. ಬಸಿಲ್​ ಅಲ್ಚಕ್ಕಲ್​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಸಿನಿಮಾ ರಿಲೀಸ್​​ಗೊಂಡು ಬಾಕ್ಸ್​ ಆಫೀಸಿನಲ್ಲಿ ಮೊದಲ ದಿನ ರಾಜ್ಯಾದ್ಯಂತ 1.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎರಡನೇ ದಿನ 1.24 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು ಮೂರನೇ ದಿನ 1.30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಾಕ್ಸ್​ ಆಫೀಸ್​ನಲ್ಲಿ​​ ಕಮಾಲ್​ ಮಾಡುತ್ತಿದೆ.

ಸದ್ಯ ಈ ಚಿತ್ರದಲ್ಲಿ ನಟ ರಾಜ್​ ಬಿ ಶೆಟ್ಟಿ ಕಾಣಿಸಿಕೊಂಡ ಲುಕ್​ ಅನ್ನು ಸೇಮ್​ ಟು ಸೇಮ್​ ಚಿತ್ರ ಬಿಡಿಸಿದ್ದಾರೆ. ದಿವ್ಯಾ ಉರುಡುಗ ಬಿಡಿಸಿರೋ ಈ ಚಿತ್ರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ವಾವ್​​ ಎಷ್ಟು ಚಂದವಾಗಿ ಬಿಡಿಸಿದ್ದೀರಿ ಅಕ್ಕ, ಮಲ್ಟಿ ಟ್ಯಾಲೆಂಟೆಡ್ DU ಎಂದು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಿವ್ಯಾ ಉರುಡುಗ ಕೈಯಲ್ಲಿ ಮೂಡಿದ ‘ಟೋಬಿ’ ಚಿತ್ರದ ಅದ್ಭುತ ಕಲಾಕೃತಿ: ಹೇಗಿದೆ ನೀವೇ ನೋಡಿ..!

https://newsfirstlive.com/wp-content/uploads/2023/08/divya.jpg

Load More