ರ‍್ಯಾಪರ್ ಇಶಾನಿ ಆರನೇ ವಾರಕ್ಕೆ ತಮ್ಮ ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದೇಕೆ?
ಕಿಚ್ಚ ಸುದೀಪ್ ಮಾತಿಗೆ ತಾನಾಗೇ ಎದ್ದು ನಿಂತುಕೊಂಡಿದ್ದ ರ‍್ಯಾಪರ್ ಇಶಾನಿ
ಬಿಗ್ಬಾಸ್ ಮನೆಯಲ್ಲಿ ಎಲ್ಲರ ಮುಂದೆ ಕಿರುಚಾಡಿ ಕಿರುಚಾಡಿ ಸುಸ್ತಾಯಿತು
ಕನ್ನಡದ ಬಿಗ್ಬಾಸ್ ಸೀನಸ್ 10ರ ಸ್ಪರ್ಧಿ ರ‍್ಯಾಪರ್ ಇಶಾನಿ ಮೂಲತಃ ಮೈಸೂರಿನವರು. ಆರನೇ ವಾರಕ್ಕೆ ಬಿಗ್ಬಾಸ್ ಮನೆಯಿಂದ ಇಶಾನಿ ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಿಂದ ಹೊರ ಬಂದ ಬಳಿಕ ಕಿಚ್ಚ ಸುದೀಪ್ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನನಗೆ ಇನ್ನೊಮ್ಮೆ ಬಿಗ್ಬಾಸ್ ಅವಕಾಶ ಬೇಕು ಎಂದು ಸಿಟ್ಟಿನಲ್ಲಿ ಮಾತಾಡಿದ್ದರು. ಬಿಗ್ಬಾಸ್ ಸೀನಸ್ 10ಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ಇಶಾನಿ ಅವರು ಆರನೇ ವಾರಕ್ಕೆ ತಮ್ಮ ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಇದೀಗ ಬಿಗ್ಬಾಸ್ ಮನೆಯಲ್ಲಿ ಆದ ಅನುಭವವನ್ನು ಇಶಾನಿ ಅವರು ನ್ಯೂಸ್ಫಸ್ಟ್ನೊಂದಿಗೆ ಹಂಚಿಕೊಂಡಿದ್ದಾರೆ. ಈ ವೇಳೆ ನನಗೆ ಸಪೋರ್ಟ್ ಮಾಡುತ್ತಿದ್ದವರೇ ದ್ರೋಹ ಮಾಡಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ನನಗೆ ಸಪೋರ್ಟ್ ಮಾಡುತ್ತಿದ್ದವರು ನನ್ನ ಕನ್ಸಿಡರ್ ಮಾಡಬೇಕಾಗಿತ್ತು. ಎಲ್ಲರ ಜೊತೆ ನಾನು ಚೆನ್ನಾಗಿ ಮಾತಾಡುತ್ತಿದ್ದೆ. ಆದರೆ ನಾನು ಎಷ್ಟು ಸಾರಿ ಹೇಳಿಕೊಂಡರು ಅವರು ನನ್ನನ್ನು ಕನ್ಸಿಡರ್ ಮಾಡುತ್ತಿರಲಿಲ್ಲ. ನಾನು ಮನೆಯಿಂದ ಹೊರ ಬರುವ ಎರಡು ದಿನ ಮುಂಚೆ ಏಕೆ ನನ್ನ ನೀವು ಗಂಭೀರವಾಗಿ ಕನ್ಸಿಡರ್ ಮಾಡುತ್ತಿರಲಿಲ್ಲ ಎಂದು ಕೇಳಿದೆ. ನನಗೆ ಟಾಸ್ಕ್ ಆಡಲು ಬಿಡಿ ಅಂತಾ, ಆದರೂ ಅವರು ಯಾರು ನನ್ನ ಮಾತನ್ನು ಕೇಳಿಸಿಕೊಳ್ಳುತ್ತಿರಲಿಲ್ಲ. ಅದರಲ್ಲೂ ನಮ್ರತಾ, ವಿನಯ್, ಮೈಕಲ್ ಎಲ್ಲರೂ ನನ್ನ ಸಪೋರ್ಟ್ ಮಾಡುತ್ತಿದ್ದರು. ಆದರೂ ಕೂಡ ಟಾಸ್ಕ್ ವಿಚಾರಕ್ಕೆ ನನ್ನ ಸ್ಪಲ್ಪ ದೂರ ಇಟ್ಟಿದ್ದರು ಎಂದು ಬೇಸರವನ್ನು ಹೊರ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ