newsfirstkannada.com

×

BBK11: ಉಗ್ರಂ ಮಂಜು ಮಾಡಿದ ತಪ್ಪಿಗೆ ಕಿಚ್ಚನ ರೌದ್ರಾವತಾರ.. ಬಿಗ್​ಬಾಸ್‌ ಮನೆ ಫುಲ್ ಶೇಕ್‌!

Share :

Published October 19, 2024 at 5:57pm

    ರಣಾಂಗಣವಾದ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮ

    ಬಿಗ್​ ವೇದಿಕೆಗೆ ಖಡಕ್​ ಆಗಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್

    ಬಿಗ್​ಬಾಸ್​ ಸ್ಪರ್ಧಿಗಳ ಬೆವರಿಳಿಸಿದ ಬಾದ್​ ಷಾ ಕಿಚ್ಚ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮ ರಣಾಂಗಣವಾಗಿದೆ. ಬಿಗ್​ಬಾಸ್​ ವೇದಿಕೆಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಮನೆಯಲ್ಲಿರೋ ಎಲ್ಲ ಸ್ಪರ್ಧಿಗಳಿಗೆ ಬೆವರಿಳಿಸಿದ್ದಾರೆ.

ಕಲರ್ಸ್​ ಕನ್ನಡದಲ್ಲಿ ರಿಲೀಸ್​ ಆಗಿರೋ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಸ್ಪರ್ಧಿಗಳ ವಿರುದ್ಧ ಕೆಂಡ ಕಾರಿದ್ದಾರೆ. ಅದರಲ್ಲೂ ಪ್ರಮುಖವಾಗಿ ಉಗ್ರಂ ಮಂಜು, ಮಾನಸ ತುಕಾಲಿ ಹಾಗೂ ಚೈತ್ರಾ ಕುಂದಾಪುರ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಬ್ಬರು ಮತ್ತೊಬ್ಬ ಸ್ಪರ್ಧಿ ಮುಂದೆ ಚಪ್ಪಲ್ ಎತ್ತಿ ಬಿಸಾಡುತ್ತಾರೆ ಎಂದರೆ ಅದು ಸರೀನಾ? ಅಂತ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: BBK11: ಜಗದೀಶ್ ಎಲಿಮಿನೇಟ್‌.. ಬಿಗ್ ಬಾಸ್ ಮೇಲೆ ಕಂಪ್ಲೇಂಟ್‌; ಕಿಚ್ಚ ಸುದೀಪ್ ಖಡಕ್ ಮಾತು; ಏನಂದ್ರು?

ಮೊನ್ನೆಯ ಎಪಿಸೋಡ್​ನಲ್ಲಿ ಬಿಗ್​ಬಾಸ್​ ಮನೆಯಿಂದ ಲಾಯರ್ ಜಗದೀಶ್​ ಹಾಗೂ ರಂಜಿತ್​ ಆಚೆ ಬಂದಿದ್ದರು. ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ ಮನೆಯ ಎಲ್ಲ ಸ್ಪರ್ಧಿಗಳು ಸೇರಿಕೊಂಡು ಜಗದೀಶ್‌ ಅವರನ್ನು ಟಾರ್ಗೆಟ್‌ ಮಾಡಿದ್ದರು. ಇದರಿಂದ ಸಿಟ್ಟಾಗಿದ್ದ ಜಗದೀಶ್‌ ಮನೆಮಂದಿಗೆಲ್ಲಾ, ಕೊನೆಗೆ ಬಿಗ್‌ಬಾಸ್‌ಗೂ ಬಾಯಿಗೆ ಬಂದ ಹಾಗೆ ಬೈದಿದ್ದರು. ಮನೆಯಲ್ಲಿದ್ದ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಈ ವೇಳೆ ಉಗ್ರಂ ಮಂಜು ಅವರು ಲಾಯರ್​ ಜಗದೀಶ್​ ಅವರ ಮುಂದೆ ಚಪ್ಪಲಿಯನ್ನು ಎಸೆದು ಅವಮಾನ ಮಾಡಿದ್ದರು.

ಮನೆಯಲ್ಲಿದ್ದ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕಾರಣಕ್ಕೆ ಬಿಗ್‌ ಬಾಸ್‌ ಜಗದೀಶ್‌ ಅವರನ್ನು ಮನೆಯಿಂದ ಹೊರಹಾಕಿದ್ದಾರೆ. ಇನ್ನು ಜಗದೀಶ್‌ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ ಕಾರಣಕ್ಕೆ ಕಿರುತೆರೆ ನಟ ರಂಜಿತ್‌ ಅವರನ್ನು ಮನೆಯೊಂದ ಹೊರಕ್ಕೆ ಕಳುಹಿಸಲಾಗಿತ್ತು. ಇದೇ ವಿಚಾರವಾಗಿ ಕಿಚ್ಚ ಸುದೀಪ್​ ಬಿಗ್​ಬಾಸ್​ ಮನೆಯ ಎಲ್ಲ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ಉಗ್ರಂ ಮಂಜು ಮಾಡಿದ ತಪ್ಪಿಗೆ ಕಿಚ್ಚನ ರೌದ್ರಾವತಾರ.. ಬಿಗ್​ಬಾಸ್‌ ಮನೆ ಫುಲ್ ಶೇಕ್‌!

https://newsfirstlive.com/wp-content/uploads/2024/10/bigg-boss42.jpg

Load More