newsfirstkannada.com

BIGG BOSS: ಬಿಕ್ಕಿ, ಬಿಕ್ಕಿ ಅತ್ತ ಸ್ಪರ್ಧಿಗಳು.. ಬಿಗ್‌ಬಾಸ್ ಮನೆಯಲ್ಲಿ ದೀಪಾವಳಿ ಹಬ್ಬದ ಖುಷಿಗೆ ಕಣ್ಣೀರಿನ ಟ್ವಿಸ್ಟ್‌!

Share :

Published November 14, 2023 at 7:28am

    ದೀಪಾವಳಿ ಹಬ್ಬದ ಖುಷಿಯ ಜೊತೆ ಮನೆಯ ಸ್ಪರ್ಧಿಗಳು ಭಾವುಕ

    ಅಮ್ಮನನ್ನು ನೆನಪಿಸಿಕೊಂಡು ಗಳ ಗಳನೇ ಅತ್ತ ನಮ್ರತಾ, ತನಿಶಾ!

    ಮನೆಯಿಂದ ಬಂದ ತಿಂಡಿ ನೋಡಿ ಕಣ್ಣೀರಿಟ್ಟ ಬಿಗ್​ಬಾಸ್​ ಸ್ಪರ್ಧಿಗಳು

ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್​​ಬಾಸ್‌ ಮನೆಯಲ್ಲಿ ದೀಪಾವಳಿ ಹಬ್ಬ ಜೋರಾಗಿತ್ತು. ಬಿಗ್​ಬಾಸ್​​ ಮನೆಯ ಎಲ್ಲ ಸ್ಪರ್ಧಿಗಳು ಗ್ರ್ಯಾಂಡ್ ಆಗಿ ಬೆಳಕಿನ ಹಬ್ಬ ದೀಪಾವಳಿಯನ್ನು ಸೆಲೆಬ್ರೇಟ್ ಮಾಡಿದ್ದಾರೆ. ಇನ್ನೂ ದೀಪಾವಳಿ ಹಬ್ಬದ ಖುಷಿಯ ಜೊತೆ ಮನೆಯ ಎಲ್ಲ ಸ್ಪರ್ಧಿಗಳು ಭಾವುಕರಾಗಿದ್ದಾರೆ.

ಹೌದು, ಬಿಗ್​ಬಾಸ್​​ ಸೀಸನ್​​ ಶುರುವಾಗಿ ಐದು ವಾರ ಕಳೆದಿದೆ. ಈ ಐದು ವಾರದಲ್ಲಿ ಬಿಗ್​ಬಾಸ್​ ಮನೆಯ ಸ್ಪರ್ಧಿಗಳು ಒಂದಿಷ್ಟು ಖುಷಿ, ದುಃಖ, ಬೇಸರ, ನೋವು ಎಲ್ಲವನ್ನು ಅನುಭವಿಸಿದ್ದಾರೆ. ಇನ್ನೂ ದೊಡ್ಮನೆಗೆ ಎಂಟ್ರಿಕೊಟ್ಟ ಸದಸ್ಯರು ತಮ್ಮ ತಮ್ಮ ಕುಟುಂಬಸ್ಥರನ್ನು ಮಿಸ್​ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ದೀಪಾವಳಿಯ ಗಿಫ್ಟ್​​ ಆಗಿ ಬಿಗ್​ಬಾಸ್​ ಮನೆಯ ಎಲ್ಲ ಸ್ಪರ್ಧಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.

ಬಿಗ್​​ಬಾಸ್​​ ಮನೆಯಲ್ಲಿದ್ದ ಎಲ್ಲ ಸ್ಪರ್ಧಿಗಳಿಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಅವರವರ ಮನೆಯವರು ಮಾಡಿಕೊಟ್ಟ ಸಿಹಿ ತಿಂಡಿಯನ್ನು ಕೊಟ್ಟಿದ್ದಾರೆ. ಇನ್​​​ಸ್ಟಾಗ್ರಾಮ್​ ಖಾತೆಯಲ್ಲಿ ಪ್ರೋಮೋವೊಂದನ್ನ ರಿಲೀಸ್​ ಮಾಡಲಾಗಿದೆ. ರಿಲೀಸ್​ ಮಾಡಲಾದ ಪ್ರೋಮೋದಲ್ಲಿ ಬಿಗ್​​ಬಾಸ್​​ ಮನೆಯ ಡೈನಿಂಗ್ ಟೇಬಲ್ ಮೇಲೆ ಒಂದು ದೊಡ್ಡ ಗಿಫ್ಟ್​​ ಬಾಕ್ಸ್​​ ಅನ್ನು ಇಟ್ಟಿರುತ್ತಾರೆ.

ಇದನ್ನು ನೋಡ ನೋಡುತ್ತಿದ್ದಂತೆ ಎಲ್ಲ ಸ್ಪರ್ಧಿಗಳು ಡೈನಿಂಗ್ ಟೇಬಲ್ ಬಳಿ ಬಂದು ಗಿಫ್ಟ್​ ಬಾಕ್ಸ್​​ ಅನ್ನು ಓಪನ್​ ಮಾಡುತ್ತಾರೆ. ಆಗ ಒಂದೊಂದು ಬಾಕ್ಸ್​​ ಮೇಲು ಒಬ್ಬೊಬ್ಬರ ಹೆಸರನ್ನು ಬರೆಯಲಾಗಿತ್ತು. ಬಳಿಕ ಮನೆಯಿಂದ ಬಂದ ಗಿಫ್ಟ್​ಗಳನ್ನು ನೋಡಿದ ಎಲ್ಲರೂ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಮ್ಮ ನಿಮ್ಮನ್ನು ತುಂಬಾ ಮಿಸ್​​ ಮಾಡಿಕೊಳ್ಳುತ್ತಿದ್ದೇನೆ. ತಿಂಡಿ ಕಳುಹಿಸಿದ್ದಕ್ಕೆ ತುಂಬಾ ಥ್ಯಾಂಕ್ಯೂ ಅಮ್ಮ ಎಂದು ಹೇಳುತ್ತಾ ಭಾವುಕರಾಗಿದ್ದಾರೆ. ತನಿಶಾ, ನಮ್ರತಾ, ಕಾರ್ತಿಕ್,​​ ಸಿರಿ, ಇಶಾನಿ, ಸಂಗೀತಾ ಗಿಫ್ಟ್​​ ನೋಡಿ ಅಮ್ಮನನ್ನು ನೆನಪಿಸಿಕೊಂಡು ಅತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಬಿಕ್ಕಿ, ಬಿಕ್ಕಿ ಅತ್ತ ಸ್ಪರ್ಧಿಗಳು.. ಬಿಗ್‌ಬಾಸ್ ಮನೆಯಲ್ಲಿ ದೀಪಾವಳಿ ಹಬ್ಬದ ಖುಷಿಗೆ ಕಣ್ಣೀರಿನ ಟ್ವಿಸ್ಟ್‌!

https://newsfirstlive.com/wp-content/uploads/2023/11/bigg-boss-2023-11-14T064731.378.jpg

Load More