ವೈಲ್ಡ್ ಲೈಪ್ ಆ್ಯಕ್ಟ್ ಅಡಿಯಲ್ಲಿ ವರ್ತೂರ್ ಸಂತೋಷ್ ಬಂಧನ
ಹುಲಿ ಉಗುರಿನ ಪೆಂಡೆಂಟ್ ಧರಿಸೋದು ಶೋಕಿಯಾಗಿದೆ
ರಾಮುಹಳ್ಳಿ ಅರಣ್ಯಾಧಿಕಾರಿಗಳಿಂದ ಬಿಗ್ ಬಾಸ್ ಸ್ಪರ್ಧಿ ಅರೆಸ್ಟ್
ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ತೆರಳುವಾಗ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಕಾರಣ ರಾಮೋಹಳ್ಳಿ ಅರಣ್ಯಾಧಿಕಾರಿಗಳು ಸೆಟ್ಗೆ ತೆರಳಿ ಅರೆಸ್ಟ್ ಮಾಡಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಪ್ರಸಂಗವೊಂದು ನಡೆದಿದೆ.
ವೈಲ್ಡ್ ಲೈಫ್ ಆ್ಯಕ್ಟ್ ಅಡಿಯಲ್ಲಿ ವರ್ತೂರ್ ಸಂತೋಷ್ ಬಂಧನವಾಗಿದೆ. ಈ ಹಿಂದೆ ಹುಚ್ಚ ವೆಂಕಟ್ ಮನೆಯ ಸ್ಪರ್ಧಿಗಳ ಮೇಲೆ ಹಲ್ಲೆ ಮಾಡಿದ್ದ ಕಾರಣ ಮನೆಯಿಂದ ಹೊರಹಾಕಲಾಗಿತ್ತು. ಆದರೀಗ ಕುತ್ತಿಗೆಗೆ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಕಾರಣ ವರ್ತೂರ್ ಸಂತೋಷ್ ಅವರನ್ನ ಬಂಧಿಸಲಾಗಿದೆ. ಈ ವಿಚಾರವಾಗಿ ಪರಿಸರವಾದಿ ಜೋಸೆಫ್ ಹೂವರ್ ಮಾತನಾಡಿದ್ದಾರೆ, ಶೋಕಿಗಾಗಿ ಹುಲಿ ಉಗುರನ್ನು ಹಾಕಿ ಉಲ್ಲಂಘನೆ ಮಾಡಿದ್ದಾರೆ. ಇಂತವರು ಹುಲಿ ಉಗುರನ್ನು ತೆಗೆದುಕೊಳ್ಳುವುದರಿಂದ ಜನರು ಹುಲಿಯನ್ನು ಕೊಲ್ಲಲು ಪ್ರಯತ್ನಿಸುತ್ತಾರೆ. ಈಗ ಹುಲಿ ಉಗುರು ಎಲ್ಲಿ ಸಿಕ್ತು. ಯಾರು ಹುಲಿಯನ್ನ ಕೊಂದಿದ್ದು, ತನಿಖೆ ಆಗುತ್ತೆ. ನಮ್ಮ ಕರ್ನಾಟಕದ ಒಳಗೆ ಫಾರೆಸ್ಟ್ ಸೆಲ್ ಇದೆ ಎಂದಿದ್ದಾರೆ.
ನಂತರ ಮಾತನಾಡಿದ ಅವರು, ಇದು ಶೋಕಿ ಆಗಿದೆ ಜನರಿಗೆ, ಹುಲಿ ಹಲ್ಲು ಸಿಗುತ್ತೆ, ಹುಲಿ ಮೀಸೆ, ಆನೆ ಬಾಲ, ಕೃಷ್ಣ ಮಗದ ಕೊಂಬು ಹೀಗೆ ಇದನ್ನು ಧರಿಸುವುದು ಮತ್ತು ಶೋಕಿಗಾಗಿ ಬಳಸುತ್ತಿದ್ದಾರೆ. ಈ ಫ್ಯಾಷನ್ನಿಂದ ವನ್ಯಜೀವಿಗೆ ಏನು ತೊಂದರೆ ಆಗುತ್ತಿದೆ ಎಂಬುದನ್ನು ಯಾರು ನೋಡುತ್ತಿಲ್ಲ. ಇದು ಒಳ್ಳೆಯ ವಿಚಾರ ಎಂದು ಜೋಸೆಫ್ ಹೂವರ್ ನ್ಯೂಸ್ ಫಸ್ಟ್ಗೆ ತಿಳಿಸಿದ್ದಾರೆ.
ನಿನ್ನೆ ಬಿಗ್ ಬಾಸ್ ಮನೆಯಿಂದ ಪತ್ರಕರ್ತ ಗೌರೀಶ್ ಅಕ್ಕಿ ಎಲಿಮಿನೇಟ್ ಆಗಿದ್ದರು. ಆದರೀಗ ವೈಲ್ಡ್ ಲೈಫ್ ಆ್ಯಕ್ಟ್ ಅಡಿಯಲ್ಲಿ ಹುಲಿ ಉಗುರನ್ನು ಧರಿಸಿದ್ದ ಸ್ಪರ್ಧಿ ವರ್ತೂರ್ ಅವರನ್ನು ರಾಮೋಹಳ್ಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಆ ಮೂಲಕ ಬಿಗ್ ಬಾಸ್ ಕಾರ್ಯಕ್ರಮಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ