newsfirstkannada.com

ಬಿಗ್​ಬಾಸ್ ಸೀಸನ್​ 10ರ ಸ್ಪರ್ಧಿಗಳ ಸಮಾಗಮ; ಸಂಗೀತಾ ಶೃಂಗೇರಿ ಯಾಕೆ ಬರ್ಲಿಲ್ಲ?

Share :

Published July 9, 2024 at 4:13pm

    ಬಿಗ್​ಬಾಸ್​ ಮನೆಯಲ್ಲಿ ಅಕ್ಕನ ರೀತಿ ಎಲ್ಲರಿಗೂ ಖುಷಿ ಹಂಚಿದ ನಟಿ ಸಿರಿ

    ಕಾರ್ತಿಕ್​ ಗೌಡ, ವಿನಯ್​ ಗೌಡ, ಸ್ನೇಹಿತ್ ಗೌಡ, ನಮ್ರತಾ ಗೌಡ ಭಾಗಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ಸ್ಪರ್ಧಿಗಳ ಫೋಟೋಸ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಿಗ್​ಬಾಸ್​ ಮುಗಿದ ಬಳಿಕ ಸ್ಪರ್ಧಿಗಳು ಆಗಾಗ ಭೇಟಿಯಾಗುತ್ತಲೇ ಇರುತ್ತಿದ್ದರು. ಆದರೆ ಈ ಬಾರಿ ಎಲ್ಲಾ ಸ್ಪರ್ಧಿಗಳು ಭೇಟಿಯಾಗಿದ್ದು ತುಂಬಾನೇ ಸ್ಪೆಷಲ್ ಆಗಿತ್ತು.

ಇದನ್ನೂ ಓದಿ: ದೇವರು ಇಚ್ಛಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ.. ನಾಯಕತ್ವದ ಬಗ್ಗೆ ಸೂರ್ಯ ಕುಮಾರ್ ಏನಂದ್ರು ಗೊತ್ತಾ?

ಹೌದು, ಬಿಗ್​ಬಾಸ್​​ ​ಖ್ಯಾತಿಯ ನಟಿ ಸಿರಿ ಅವರು ಇತ್ತೀಚೆಗೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಚಿಕ್ಕಬಳ್ಳಾಪುರದ ನಂದಿ ಗ್ರಾಮದ ದೇವಸ್ಥಾನದಲ್ಲಿ ಕುಟುಂಬ ಹಾಗೂ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಜೂನ್​ 13 ರಂದು ಸಪ್ತಪದಿ ತುಳಿದಿದ್ದರು ಸಿರಿ. ನಟಿ ಸಿರಿ ಹಾಗೂ ಪ್ರಭಾಕರ್ ಬೋರೆಗೌಡ ದಂಪತಿಗೆ ಶುಭಾಶಯಗಳು ಮಾಹಾಪೂರವೇ ಹರಿದು ಬಂದಿತ್ತು. ಜೊತೆಗೆ ನಟಿ ಅವರು ವರಿಸಿದ್ದ ವಧು ಯಾರು ಎಂಬೆಲ್ಲಾ ಪ್ರಶ್ನೆಗಳು ಮೂಡಿ ಬಂದಿದ್ದವು. ಹೀಗಾಗಿ ಬಿಗ್​ಬಾಸ್​ ಸ್ಪರ್ಧಿಗಳಿಗಾಗಿಯೇ ನಟಿ ಸಿರಿ ಪ್ರಭಾಕರ್​ ಅವರು ಪಾರ್ಟಿವೊಂದನ್ನು ಅರೆಂಜ್​ ಮಾಡಿದ್ದರು.​ ಬೆಂಗಳೂರಿನ ಹಾಲ್​​​ವೊಂದರಲ್ಲಿ ಬಿಗ್​ಬಾಸ್ ಮಾಜಿ ಸ್ಪರ್ಧಿಗಳು ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ಇನ್ನು, ನವ ಜೋಡಿಗೆ ಶುಭಕೋರಲು ಬಿಗ್​ಬಾಸ್​ನ ಆಲ್​ಮೋಸ್ಟ್​ ಎಲ್ಲಾ ಸ್ಪರ್ಧಿಗಳು ಪಾರ್ಟಿ ಹಾಲ್​ನಲ್ಲಿ ಹಾಜರಾಗಿದ್ದರು. ಕಾರ್ತಿಕ್​ ಗೌಡ, ವಿನಯ್​ ಗೌಡ, ನೀತು ವನಜಾಕ್ಷಿ, ಪವಿ, ಸ್ನೇಹಿತ್​ ಗೌಡ, ನಮ್ರತಾ ಗೌಡ, ತನಿಷಾ ಕುಪ್ಪಂಡ. ಆದರೆ ಸಂಗೀತಾ ಶೃಂಗೇರಿ ಬದಲು ಅವರ ಅಣ್ಣ ಹಾಗೂ ಅತ್ತಿಗೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಒಟ್ಟಿನಲ್ಲಿ ಬಿಗ್​ಬಾಸ್​ ಮನೆಯಲ್ಲಿ ಅಕ್ಕನ ರೀತಿ ಎಲ್ಲರಿಗೂ ಖುಷಿ ಹಂಚಿದ ಸಿರಿ ಅಕ್ಕನ ಮದುವೆ ಪಾರ್ಟಿನ ಸಖತ್​ ಆಗಿಯೇ ಎಂಜಾಯ್​ ಮಾಡಿದ್ದಾರೆ ಬಿಗ್​ ಮಂದಿ. ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಒಂದೇ ಕಡೆ ಬಿಗ್​ಬಾಸ್​ ಸ್ಪರ್ಧಿಗಳನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್ ಸೀಸನ್​ 10ರ ಸ್ಪರ್ಧಿಗಳ ಸಮಾಗಮ; ಸಂಗೀತಾ ಶೃಂಗೇರಿ ಯಾಕೆ ಬರ್ಲಿಲ್ಲ?

https://newsfirstlive.com/wp-content/uploads/2024/07/bigg-boss2.jpg

Load More