newsfirstkannada.com

39ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ಬಾಸ್​ ಬೆಡಗಿ; ನಟಿ ಸಿರಿ ವರಿಸಿರೋ ಹುಡುಗ ಪೊಲೀಸ್​​?

Share :

Published June 14, 2024 at 3:13pm

Update June 14, 2024 at 4:11pm

    ಕಿರುತೆರೆಯಿಂದ ದೂರ ಉಳಿದುಕೊಂಡಿದ್ದ ನಟಿ ಸಿರಿ ಕಡೆಯಿಂದ ಶುಭಸುದ್ದಿ

    ಕಿರುತೆರೆ, ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ ನಟಿ ಸಿರಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ನಟಿ ಮದುವೆ ಫೋಟೋಸ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿರೋ ಸಿರಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ರಂಗೋಲಿ ಸೀರಿಯಲ್​ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರೋ ನಟಿ ಸಿರಿ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೌದು, ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟಿ ತಮ್ಮದೇಯಾದ ಅದ್ಭುತ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು ನಟಿ ಸಿರಿ. ಬಿಗ್​ಬಾಸ್​ ಮನೆಯಲ್ಲಿದ್ದಾಗ ನಟಿ ಸಿರಿ ಅವರಿಗೆ ಯಾಕೆ ನೀವೂ ಮದುವೆಯಾಗಿಲ್ಲ ಎಂಬ ಪ್ರಶ್ನೆಗಳು ಎದುರಾಗುತ್ತಲೇ ಇದ್ದವು. ಆಗ ಅವರು ನನ್ನ ಭಾವನೆಗಳಿಗೆ ಸ್ಪಂದಿಸೋ ಹುಡುಗ ಸಿಕ್ಕರೆ ನಾನು ಖಂಡಿತವಾಗಿ ಮದುವೆ ಆಗುತ್ತೇನೆ ಅಂತ ಹೇಳಿಕೊಂಡಿದ್ದರು. ಆದರೆ ಇದೀಗ ಎಲ್ಲರೂ ಶಾಕ್​ ಆಗುವಂತೆ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ​ಫ್ಯಾನ್ಸ್​​ಗೆ ಗುಡ್​ನ್ಯೂಸ್​; ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್​ಬಾಸ್​ ಬೆಡಗಿ ನಟಿ ಸಿರಿ​

ಇನ್ನು, ನಟಿ ಸಿರಿ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಈ ಫೋಟೋ ನೋಡಿದ ಅಭಿಮಾನಿಗಳು ಫುಲ್​ ಶಾಕ್ ಆಗಿದ್ದಾರೆ. ನಟಿ ಸಿರಿ ಅವರು ನಿನ್ನೆ ಎಂದರೆ, ಜೂನ್​ 13ರಂದು ಚಿಕ್ಕಬಳ್ಳಾಪುರದ ನಂದಿ ಗ್ರಾಮದ ದೇವಸ್ಥಾನವೊಂದರಲ್ಲಿ ತುಂಬಾ ಸರಳವಾಗಿ ಮದುವೆಯಾಗಿದ್ದಾರೆ. ನಟಿ ಸಿರಿ ಅವರ ಮದುವೆಗೆ ಕುಟುಂಬಸ್ಥರು ಹಾಗೂ ಕೆಲವೇ ಕೆಲವು ಸಂಬಂಧಿಕರು ಭಾಗವಹಿಸಿದ್ದರು.

ಇದನ್ನೂ ಓದಿ: ಸರಿ ಎಂದು ವಿವಾಹವಾದ ಬಿಗ್​ ಬಾಸ್​​ ಸಿರಿ! ಸದ್ದಿಲ್ಲದೆ ಹಸೆಮಣೆ ಏರಿದ ಸೀರಿಯಲ್ ​ನಟಿ

ನಟಿ ಸಿರಿ ಅವರನ್ನು ಮದುವೆಯಾಗಿರುವ ಹುಡುಗನ ಹೆಸರು ಪ್ರಭಾಕರ್ ಬೋರೇಗೌಡ. ಈ ಇವರಿಬ್ಬರಿಗೂ ಮೊದಲೇ ಪರಿಚಯ ಇತ್ತು ಎನ್ನಲಾಗಿದೆ. ಮಂಡ್ಯ ಮೂಲದ ಪ್ರಭಾಕರ್ ಕಲಾವಿದ, ಉದ್ಯಮಿ, ರೈತರಾಗಿದ್ದಾರೆ. ರುದ್ರ ಗರುಡ ಪುರಾಣ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಪ್ರಭಾಕರ್ ಅವರು ನಟಿಸಿದ್ದಾರೆ. ಸದ್ಯ ನಟಿ ಸಿರಿ ಹಾಗೂ ಪ್ರಭಾಕರ್ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಈ ಫೋಟೋ ನೋಡಿದ ಅಭಿಮಾನಿಗಳು ನಟಿ ಸಿರಿ ಅವರಿಗೆ ಮದುವೆಗೆ ಶುಭ ಹಾರೈಸಿದ್ದಾರೆ. ಪ್ರಭಾಕರ ಬೋರೇಗೌಡ ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಌಕ್ಟಿವ್​ ಆಗಿದ್ದಾರೆ. ಬಿಗ್​ಬಾಸ್​ ಶೋ ನಡೆಯುತ್ತಿದ್ದ ಸಂದರ್ಭದಲ್ಲೂ ಸಿರಿ ಅವರಿಗೆ ಪ್ರಭಾಕರ ಬೋರೇಗೌಡ ಅವರು ಸರ್ಪೋರ್ಟ್ ಮಾಡಿದ್ದರು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

39ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ಬಾಸ್​ ಬೆಡಗಿ; ನಟಿ ಸಿರಿ ವರಿಸಿರೋ ಹುಡುಗ ಪೊಲೀಸ್​​?

https://newsfirstlive.com/wp-content/uploads/2024/06/bigg-boss-seri.jpg

Load More