ಬಿಗ್‌ಬಾಸ್ ಸೀಸನ್ 10 ಮುಗಿದು ಬರೋಬ್ಬರಿ 7 ತಿಂಗಳು ಕಳೆದಿದೆ
ಅಂತು ಇಂತು ಬಂತು ಕಾರ್ತಿಕ್ ಮಹೇಶ್‌ಗೆ ಮಾರುತಿ ಸುಜುಕಿ ಬ್ರೆಝಾ ಕಾರು
ಬಿಗ್‌ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಹೇಳಿದ್ದೇನು?
ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 10 ಮುಗಿಸಿ ಸೀಸನ್ 11ಕ್ಕೆ ತೆರೆಮರೆಯ ತಯಾರಿ ಶುರುವಾಗಿದೆ. ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಸೀಸನ್ 11ರ ಪ್ರೋಮೋ ಶೂಟ್‌ನಲ್ಲಿ ಭಾಗಿಯಾಗಿದ್ದು ಸುದ್ದಿಯಾಗಿತ್ತು. ಇದೀಗ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಅವರು ಬಿಗ್‌ಬಾಸ್ ಬಗ್ಗೆ ಹೊಸ ಅಪ್ಡೇಟ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಹುಟ್ಟು ಹಬ್ಬದ ದಿನವೇ ಹೊಸ ಕಾರು ಖರೀದಿಸಿದ ಬಿಗ್‌ಬಾಸ್ ಸ್ಪರ್ಧಿ ನಮ್ರತಾ ಗೌಡ; ಅದರ ಬೆಲೆ ಎಷ್ಟು?
ಬಿಗ್‌ಬಾಸ್ ಸೀಸನ್ 10ರಲ್ಲಿ ಗೆದ್ದವರಿಗೆ 50 ಲಕ್ಷ ರೂಪಾಯಿ ನಗದು, ವಿನ್ನರ್ ಟ್ರೋಫಿಯನ್ನು ಗಿಫ್ಟ್ ಕೊಡಲಾಗಿತ್ತು. ಇದರ ಜೊತೆಗೆ ಮಾರುತಿ ಸುಜುಕಿ ಬ್ರೆಝಾ ಕಾರು ಮತ್ತು ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿಜೇತರಿಗೆ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಇದೀಗ ಬಿಗ್‌ಬಾಸ್ ತಂಡ ಮಾತು ಕೊಟ್ಟಂತೆ ವಿನ್ನರ್ ಕಾರ್ತಿಕ್ ಮಹೇಶ್ ಅವರಿಗೆ ಮಾರುತಿ ಸುಜುಕಿ ಬ್ರೆಝಾ ಕಾರನ್ನು ಹಸ್ತಾಂತರಿಸಲಾಗಿದೆ.
ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರು ಇಂದು ತಮ್ಮ ಇನ್ಸಾಸ್ಟಾಗ್ರಾಮ್ ಖಾತೆಯಲ್ಲಿ ಅಂತು ಇಂತು ಬಂತು ಬಿಗ್‌ಬಾಸ್ ಕಾರು ಎಂದು ಪೋಸ್ಟ್ ಹಾಕಿದ್ದಾರೆ. 7 ತಿಂಗಳ ಬಳಿಕ ಮಾರುತಿ ಸುಜುಕಿ ಬ್ರೆಝಾ ಕಾರನ್ನು ಗಿಫ್ಟ್ ಆಗಿ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮನೆಗೆ ಬಂದ ಹೊಸ ಅತಿಥಿಯನ್ನು ಮನೆಯವರ ಜೊತೆ ಸೆಲಬ್ರೇಟ್ ಮಾಡಲು ಶುರು ಮಾಡಿದ್ದಾರೆ.
ಇದನ್ನೂ ಓದಿ: BIGG BOSS: ತನ್ನ ತಾಯಿಗಾಗಿ ಮನೆ ಖರೀದಿ ಮಾಡಿದ್ರಾ ಬಿಗ್‌ಬಾಸ್ ವಿನ್ನರ್ ಕಾರ್ತಿಕ್..?
ಬಿಗ್‌ಬಾಸ್ ಸೀಸನ್ 10 ಮುಗಿದು ಬರೋಬ್ಬರಿ 7 ತಿಂಗಳೇ ಕಳೆದಿದೆ. 2023ರ ಅಕ್ಟೋಬರ್ 8ರಂದು ಆರಂಭವಾಗಿದ್ದ ಸೀಸನ್ 10, ಸತತ 112 ದಿನಗಳ ಬಳಿಕ ಅಂದ್ರೆ ಜನವರಿ 28, 2024ರಂದು ಅಂತ್ಯಗೊಂಡಿತ್ತು.
ಇಷ್ಟು ತಡವಾಗಿ ಕಾರು ಬಂದಿದ್ದೇಕೆ?
ಬಿಗ್‌ಬಾಸ್ ಸೀಸನ್ 10 ಮುಗಿದ 7 ತಿಂಗಳ ಬಳಿಕ ವಿನ್ನರ್ ಕಾರ್ತಿಕ್ ಮಹೇಶ್ ಅವರಿಗೆ ಅನೌನ್ಸ್ ಮಾಡಿದಂತೆ ಕಾರು ಹಸ್ತಾಂತರಿಸಲಾಗಿದೆ. ಇಷ್ಟು ದಿನ ಯಾಕೆ ತಡವಾಯ್ತು ಅನ್ನೋ ಪ್ರಶ್ನೆ ಸಹಜವಾಗೇ ಕಾಡುತ್ತಿದೆ. ಈ ಬಗ್ಗೆ ನ್ಯೂಸ್ ಫಸ್ಟ್ ಕಾರ್ತಿಕ್ ಮಹೇಶ್ ಅವರನ್ನು ಕೇಳಿದಾಗ ಅವರು ಉತ್ತರಿಸಿದ್ದಾರೆ.
ಸಾಮಾನ್ಯವಾಗಿ ಹೊಸ ಮಾರುತಿ ಸುಜುಕಿ ಬ್ರೆಝಾ ಕಾರು ಬುಕ್ ಮಾಡಿದ ಮೇಲೆ ಡೆಲಿವರಿ ಮಾಡೋಕೆ 6-7 ತಿಂಗಳು ಬೇಕಾಗುತ್ತೆ. ಬಿಗ್‌ಬಾಸ್ ವಿನ್ನರ್ ಕೊಡುವ ಈ ಕಾರು ಕಳೆದ ಒಂದು ತಿಂಗಳ ಹಿಂದೆಯೇ ಶೋ ರೂಂಗೆ ಬಂದಿತ್ತು. ನಾನು ಇಂದು ಶೋ ರೂಂಗೆ ಹೋಗಿ ಕಾರು ಪಡೆದುಕೊಂಡಿದ್ದೇನೆ ಎಂದು ಕಾರ್ತಿಕ್ ಮಹೇಶ್ ನ್ಯೂಸ್ ಫಸ್ಟ್‌ಗೆ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ