newsfirstkannada.com

×

ಸತ್ಯ ಸೀರಿಯಲ್​ ನಟಿ ಗೌತಮಿ ಜಾಧವ್‌ ಸ್ವರ್ಗಕ್ಕಾ? ನರಕಕ್ಕಾ? ಬಿಗ್ ಬಾಸ್‌ ಮನೆಯಲ್ಲಿ ಮತ್ತೆ ಟ್ವಿಸ್ಟ್‌!

Share :

Published September 29, 2024 at 7:15pm

Update September 29, 2024 at 7:20pm

    ಸಖತ್ ಹ್ಯಾಪಿ ಮೂಡ್​ನಲ್ಲಿದ್ದಾರೆ ಸತ್ಯ ಸೀರಿಯಲ್​ನ ಲೇಡಿ ಸಿಂಗಂ ​

    ಸತ್ಯ ಸೀರಿಯಲ್​ ಮೂಲಕ ಅಭಿಮಾನಿಗಳನ್ನು ಗಳಿಸಿಕೊಂಡ ನಟಿ

    ​ಸತ್ಯಳ ವಿಭಿನ್ನ ಲುಕ್​ಗೆ ಫಿದಾ ಆಗಿದ್ದರು ಸಾಕಷ್ಟು ಕನ್ನಡ ವೀಕ್ಷಕರು

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಶುರುವಾಗಿದೆ.  ಬಿಗ್​ಬಾಸ್​ ಇತಿಹಾಸದಲ್ಲೇ ಮೊದಲು ಗ್ರ್ಯಾಂಡ್​ ಓಪನಿಂಗ್ ಮುನ್ನವೇ ಸ್ಪರ್ಧಿಗಳ ಹೆಸರನ್ನು ರಿವೀಲ್​ ಮಾಡಲಾಗಿತ್ತು. ಅದರಲ್ಲಿ ಮೊದಲ ಹೆಸರು ಬಂದಿದ್ದು ನಟಿ ಗೌತಮಿ ಜಾಧವ್​.

ಇದನ್ನೂ ಓದಿ: ಬಿಗ್‌ ಬಾಸ್ ಸೀಸನ್ 11: ಸ್ವರ್ಗಕ್ಕೆ ಯಾರು? ನರಕದಲ್ಲಿ ನರಳಾಡೋದು ಯಾರು? ಇಲ್ಲಿದೆ ಬಿಗ್ ಅಪ್ಡೇಟ್‌!

ಹೌದು, ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್ ಅವರು ಎಂಟ್ರಿ ಕೊಟ್ಟಿದ್ದಾರೆ. ನಟಿ ಗೌತಮಿ ಜಾಧವ್ ಒಂದೇ ಸೀರಿಯಲ್​ ಮೂಲಕ ಸಾಕಷ್ಟು ಸುದ್ದಿಯಾಗಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಇದೀಗ ನಟಿ ಗೌತಮಿ ಜಾಧವ್ ಬಿಗ್​ಬಾಸ್​ ಸೀಸನ್​11ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಏನಂದ್ರೆ ನಟಿ ಗೌತಮಿ ಜಾಧವ್ ಅವರು ಸತ್ಯ ಗೆಟಪ್​ ಮೂಲಕವೇ ಬಿಗ್ ಬಾಸ್‌​ ವೇದಿಕೆಗೆ ಬಂದಿದ್ದಾರೆ.

ಮೊದಲ ಎರಡು ಸ್ಪರ್ಧಿಗಳಾದ ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ಅವರು ಗೌತಮಿ ಜಾಧವ್ ಅವರನ್ನು ನರಕಕ್ಕೆ ಕಳುಹಿಸಲು ನಿರ್ಧಾರ ಮಾಡಿದ್ದರು. ಆದರೆ ಬಿಗ್ ಬಾಸ್ ವೀಕ್ಷಕರ ವೋಟಿಂಗ್ ಆಧಾರದಲ್ಲಿ ನಟಿ ಗೌತಮಿ ಜಾಧವ್ ಅವರು ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಗೌತಮಿ ಜಾಧವ್ ಅವರು ಸ್ಪರ್ಗಕ್ಕೆ ಹೋಗಬೇಕು ಅಂತ 1 ಲಕ್ಷ 16 ಸಾವಿರ ವೀಕ್ಷಕರು ವೋಟ್ ಮಾಡಿದ್ದಾರೆ.

ಸತ್ಯಳ ವಿಭಿನ್ನ ಲುಕ್​, ಮಾತು ಎಲ್ಲವೂ ವೀಕ್ಷಕರ ಮನಸ್ಸಲ್ಲಿ ಅಚ್ಚಳಿಯದ ಛಾಪು ಮೂಡಿಸಿತ್ತು. ವಿಶೇಷವಾಗಿ ಮಕ್ಕಳಿಗೂ ಸತ್ಯ ಸಿಕ್ಕಾಪಟ್ಟೆ ಫೇವರಿಟ್ ಆಗಿಬಿಟ್ಟಿದ್ದರು​. ಸತ್ಯ ಪಾತ್ರವನ್ನ ಅದ್ಭುತವಾಗಿ ನಿಭಾಯಿಸಿದ್ದ ನಟಿ ಗೌತಮಿ ಜಾಧವ್ ಅವರು ಕೂಡ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಇದೀಗ ಸತ್ಯ ನಟಿ ಬಿಗ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸತ್ಯ ಸೀರಿಯಲ್​ ನಟಿ ಗೌತಮಿ ಜಾಧವ್‌ ಸ್ವರ್ಗಕ್ಕಾ? ನರಕಕ್ಕಾ? ಬಿಗ್ ಬಾಸ್‌ ಮನೆಯಲ್ಲಿ ಮತ್ತೆ ಟ್ವಿಸ್ಟ್‌!

https://newsfirstlive.com/wp-content/uploads/2024/09/sathya.jpg

Load More