newsfirstkannada.com

×

BBK11: ಬಿಗ್​ಬಾಸ್​ ಮನೆಗೆ ಲಾಯರ್​ ಜಗದೀಶ್​ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರಾ? ಗುಟ್ಟು ಬಿಚ್ಚಿಟ್ಟ ಹಂಸಾ

Share :

Published October 29, 2024 at 4:39pm

Update October 29, 2024 at 4:45pm

    ಕೊನೆಯ ಕ್ಷಣದಲ್ಲಿ ದೊಡ್ಮನೆಯಿಂದ ಔಟ್ ಆದ ಕಿರುತೆರೆ ನಟಿ ಹಂಸಾ

    ಈ ಬಾರಿಯ ಬಿಗ್​ಬಾಸ್​ ಸೀಸನ್​ 11ರ ವಿನ್ನರ್​ ಇವರೇ ಆಗ್ತಾರಾ?

    ನ್ಯೂಸ್​ಫಸ್ಟ್​ಗೆ ಕೊಟ್ಟ ಸಂದರ್ಶನದಲ್ಲಿ ಹಂಸಾ ಹೇಳಿದ್ದೇನು ಗೊತ್ತಾ?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11ರಿಂದ ನಾಲ್ಕನೇ ಸ್ಪರ್ಧಿಯಾಗಿ ಹಂಸಾ ಅವರು ಆಚೆ ಬಂದಿದ್ದಾರೆ. ನಾಲ್ಕು ವಾರಗಳವರೆಗೆ ಬಿಗ್​ಬಾಸ್​ ಮನೆಯಲ್ಲಿ ಕಾಲ ಕಳೆದ ಹಂಸಾ ಅವರು ಕೊನೆಯ ಕ್ಷಣದಲ್ಲಿ ದೊಡ್ಮನೆಯಿಂದ ಔಟ್ ಆಗಿದ್ದಾರೆ.

ಇದನ್ನೂ ಓದಿ: ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ; ಏನಿದರ ರಹಸ್ಯ?

ಇನ್ನು, ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಕೂಡಲೇ ಸ್ಪರ್ಧಿಗಳ ಬಗ್ಗೆ ಅದರಲ್ಲೂ ಲಾಯರ್ ಜಗದೀಶ್​ ಅವರ ಬಗ್ಗೆ ಕೆಲವೊಂದು ವಿಚಾರದ ಬಗ್ಗೆ ಮಾತಾಡಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿದ್ದಾಗ ಹಂಸಾ ಹಾಗೂ ಲಾಯರ್ ಜಗದೀಶ್​ ಒಳ್ಳೆಯ ಸ್ನೇಹಿತರಾಗಿದ್ದರು. ಗಲಾಟೆ ಮಾಡುತ್ತಾ ಮಾಡುತ್ತಾ ಒಳ್ಳೆಯ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಕಿಚ್ಚ ಸುದೀಪ್​ ಮುಂದೆಯೂ ಈ ಇಬ್ಬರು ಡ್ಯಾನ್ಸ್​ ಮಾಡಿ ವೀಕ್ಷಕರ ಮೂಖದಲ್ಲಿ ನಗು ಹುಟ್ಟಿಸಿದ್ದರು.

ಆದರೆ ಅದು ಜಾಸ್ತಿ ದಿನಗಳ ಕಾಲ ಉಳಿಯಲಿಲ್ಲ. ಲಾಯರ್ ಜಗದೀಶ್​ ಅವರು ಮಹಿಳಾ ಸ್ಪರ್ಧಿಗಳಿಗೆ ಬೈದಿದ್ದಕ್ಕೆ ಬಿಗ್​ಬಾಸ್​ ಮನೆಯಿಂದ ಔಟ್​ ಆಗಿದ್ದರು. ಅಲ್ಲದೇ ಲಾಯರ್​ ಜಗದೀಶ್ ಅವರನ್ನು ತಳ್ಳಿದ ಕಾರಣಕ್ಕೆ ರಂಜಿತ್​ ಅವರನ್ನು ಆಚೆ ಕಳುಹಿಸಲಾಗಿತ್ತು. ಇನ್ನೂ ನ್ಯೂಸ್​ಫಸ್ಟ್​ ಸಂದರ್ಶನದಲ್ಲಿ ಈ ಬಗ್ಗೆ ಮಾತಾಡಿದ ಹಂಸ ಅವರು ಲಾಯರ್ ಜಗದೀಶ್​ ಅವರ ಮತ್ತೆ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಡಬೇಕು ಅಂತ ಹೇಳಿದ್ದಾರೆ.

ನನಗೆ ಬಿಗ್​ಬಾಸ್​ ಮನೆಯಲ್ಲಿ ಅವರ ಜೊತೆಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಈಗ ಆಚೆ ಬಂದಿದ್ದೀನಿ. ಅವರು ಮನೆಗೆ ಹೋಗ್ತೀನಿ. ಜಗದೀಶ್​ ಅವರ ಜೊತೆಗೆ ಮಾತಾಡಬೇಕು. ಯಾಕೆ ನನ್ನ ಬಗ್ಗೆ ಹಾಗೇ ಹೇಳಿದ್ರಿ ಅಂತ ಪ್ರಶ್ನೆ ಮಾಡ್ತೀನಿ. ಬಿಗ್​ಬಾಸ್​ ಮನೆಗೆ ಜಗದೀಶ್​ ಅವರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಗೆಲ್ಲುತ್ತಾರೆ. ಜಗದೀಶ್​ ಅವರು ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟು ಬಂದ್ರೆ ಸಖತ್​ ಮಜಾ ಇರುತ್ತೆ. ನನಗೆ ಅನಿಸುತ್ತೆ ಜಗದೀಶ್​ ಅವರು ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರೆ. ಮಾತಲ್ಲಿ ಸ್ವಲ್ಪ ಹಿಡಿತವಿದ್ದರೆ ಜಗದೀಶ್​ ಅವರೇ ಬಿಗ್​ಬಾಸ್ ವಿನ್ನರ್​ ಆಗ್ತಾರೆ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ಬಿಗ್​ಬಾಸ್​ ಮನೆಗೆ ಲಾಯರ್​ ಜಗದೀಶ್​ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರಾ? ಗುಟ್ಟು ಬಿಚ್ಚಿಟ್ಟ ಹಂಸಾ

https://newsfirstlive.com/wp-content/uploads/2024/10/bbk115-1.jpg

Load More