ಅಭಿಮಾನಿಗಳ ಆಸೆಯಂತೆ ಈ ಬಾರಿ ಕೂಡ ಕಿಚ್ಚನದ್ದೇ ಹವಾ
ಬಿಗ್ಬಾಸ್ 11 ಪ್ರಿಯರಿಗೆ ಇದಾಗಿದೆ ಸಂಭ್ರಮಿಸೋ ಸುದ್ದಿ
ಈ ಬಾರಿಯ ಬಿಗ್ಬಾಸ್ಗೆ ಯಾರೆಲ್ಲಾ ಬರಬಹುದು ಗೊತ್ತಾ?
ಕನ್ನಡದ ಜನಪ್ರಿಯ ಶೋ ಬಿಗ್ಬಾಸ್ ಪ್ರಿಯರು ಸಂಭ್ರಮಿಸೋ ಸುದ್ದಿ ಇದು. ಇಷ್ಟು ದಿನ ಕುತೂಹಲದಿಂದ ಕಾಯುತ್ತಿದ್ದ ಕಣ್ಣುಗಳಿಗೆ ನಿಜಕ್ಕೂ ರೋಚಕ ಅನುಭವ ನೀಡಿದೆ ಹೊಸ ಪ್ರೋಮೋ. ಶೋ ಬಗ್ಗೆ ಹೊತ್ತಿದ ಕಿಚ್ಚಿಗೆ ಕೊನೆಗೂ ಉತ್ತರ ಸಿಕ್ಕಂತೆ ಆಗಿದೆ.
ಇದನ್ನೂ ಓದಿ: ಇಬ್ಬರಲ್ಲೂ ಒಳ್ಳೆಯ ಕೆಮಿಸ್ಟ್ರಿ ಇದೆ ಆದರೆ.. ಜಸ್ವಂತ್, ಆಕ್ರಿತಿ ಲವ್ ಬಗ್ಗೆ ಪೋಷಕರು ಹೇಳಿದ್ದೇನು?
ಕೊನೆಗೂ ಅಭಿಮಾನಿಗಳ ಆಸೆಯಂತೆ ಬಿಗ್ಬಾಸ್ ರಣರಂಗಕ್ಕೆ ಸಾರಥಿಯಾಗಿ ಕಿಚ್ಚ ಸುದೀಪ್ ಎಂಟ್ರಿಯಾಗಿದ್ದಾರೆ. ಅವರು ಬರ್ತಾರ? ಇವ್ರು ಬರ್ತಾರ? ಎಂಬ ಅಂತೆ ಕಂತೆಗಳ ನಡುವೆ ನ್ಯೂಸ್ಫಸ್ಟ್ ನಿಮಗೆ ಸಣ್ಣ ಸುಳಿವನ್ನು ಕೊಟ್ಟಿತ್ತು. ಈಗಾಗಲೇ ಅಧಿಕೃತವಾದ ಬಿಗ್ಬಾಸ್ ಪ್ರೋಮೋ ರಿಲೀಸ್ ಆಗಿದ್ದು, ಕಿಚ್ಚನ ಅಭಿಮಾನಿಗಳು ಪ್ರೋಮೋನ ಸೆಲೆಬ್ರೆಟ್ ಮಾಡುತ್ತಿದ್ದಾರೆ. ಈ ಹಿಂದೆ ಬಿಗ್ಬಾಸ್ ಸೀಸನ್ 11ರ ಪ್ರೋಮೋವನ್ನು ಹೈದರಾಬಾದ್ನಲ್ಲಿ ಶೂಟ್ ಆಗಿತ್ತು.
ಗಿಚ್ಚಿ ಗಿಲಿಗಿಲಿ ಫಿನಾಲೆ ಎಪಿಸೋಡ್ ಪ್ರಸಾರದ ಟೈಮ್ನಲ್ಲಿ ಬಿಗ್ಬಾಸ್ ಪ್ರೋಮೋ ರಿಲೀಸ್ ಮಾಡಲಾಯ್ತು. ಪ್ರೋಮೋದಲ್ಲಿ ಇಷ್ಟು ದಿನ ಒಂದು ಲೆಕ್ಕ ಇನ್ಮೇಲೆ ಬೇರೆಯದ್ದೇ ಲೆಕ್ಕ ಹೊಸ ಅಧ್ಯಾಯ ಶುರು ಎಂದಿದ್ದಾರೆ ಕಿಚ್ಚ ಸುದೀಪ್. ಈ ಹಿಂದೆ ಬರ್ತ್ ಡೇ ಟೈಮ್ನಲ್ಲಿ ಕಿಚ್ಚ ಸುದೀಪ್ ಕೂಡ ಹೊಸಬರು ಬಂದರೆ ನನಗೂ ಖುಷಿ ಎಂದಿದ್ದರು. ಹೀಗಾಗಿ ಈ ಬಾರಿಯ ಆ್ಯಂಕರ್ ಯಾರು ಅನ್ನೋ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿದ್ದು. ಅಷ್ಟೇಯಲ್ಲ ಕಳೆದ ಸೀಸನ್ ಅನಾರೋಗ್ಯದ ಸಂದರ್ಭದಲ್ಲೂ ಹೋಸ್ಟ್ ಮಾಡಿದ್ದನ್ನ ಉಲ್ಲೇಖಿಸಿದ್ರು. ಸಿನಿಮಾ ಕಡೆ ಗಮನ ಕೊಡೋಕೆ ಆಗ್ತಿಲ್ಲ ಅಂತಾನೂ ಹೇಳಿದ್ರು.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಮ್ಯಾರೇಜ್.. ಅದಿತಿ ರಾವ್ ಹೈದರಿ ಮೊದಲ ಗಂಡ ಯಾರು? ಸಿದ್ದಾರ್ಥ್ ಮೊದಲ ಪತ್ನಿ ಯಾರು ಗೊತ್ತಾ?
ಈ ಎಲ್ಲಾ ಕಾರಣಗಳಿಂದ ಬಿಗ್ಬಾಸ್ ಸೀಸನ್ 11ರ ಸಾರಥಿ ಬಗ್ಗೆ ಡೌಟ್ ಶುರುವಾಗಿದ್ದು. ಕಿಚ್ಚ ಇರಲ್ಲ ಅನ್ನೋ ಸುದ್ದಿ ಹರಡಿದ್ದು . ಇದೇ ಸೆಪ್ಟೆಂಬರ್ 29ರಿಂದ ಬಿಗ್ ಬಾಸ್ ಸೀಸನ್ 11 ಶುರುವಾಗಲಿದೆ. ಈ ಬಗ್ಗೆ ಮಾಹಿತಿ ನೀಡಲು ಇದೇ 23ರಂದು ಬಿಗ್ಬಾಸ್ ಟೀಮ್ನಿಂದ ಪ್ರೆಸ್ ಮೀಟ್ ಮಾಡಲಾಗ್ತಿದೆ. ಪ್ರೆಸ್ ಮೀಟ್ಗೆ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ. ಈ ಬಾರಿಯ ಬಿಗ್ಬಾಸ್ಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಅಂತ ಕಾದು ನೋಡಬೇಕಿದೆ. ಬಿಗ್ ಬಾಸ್ ಸೀಸನ್ 11 ಸಾಕಷ್ಟು ವಿಶೇಷತೆಗಳಿಂದ ಕೂಡಿರೋದಂತೂ ಪಕ್ಕಾ. ಕಿಚ್ಚ ಸುದೀಪ್ ಅವ್ರೇ ಇರ್ತಾರೆ ಅನ್ನೋದಕ್ಕೂ ಕ್ಲಾರಿಟಿ ಸಿಕ್ಕಿದೆ. ಈಗ ಬಿಗ್ಬಾಸ್ ಸ್ಪರ್ಧಿಗಳು ಯಾರ್ಯಾರು ಎಂಬುದರ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ