newsfirstkannada.com

×

ಈ ಬಾರಿ ಇನ್ನೂ ದೊಡ್ಡದು ಕಾದಿದೆ.. ಬಿಗ್​​ಬಾಸ್​​​ ಸೀಸನ್​​ 11 ಬಗ್ಗೆ ಬಿಗ್​ ಅಪ್ಡೇಟ್​​ ಕೊಟ್ಟ ಕಲರ್ಸ್​​ ಕನ್ನಡ ಪ್ರೋಮೋ!

Share :

Published September 10, 2024 at 7:33pm

    ಮತ್ತೊಂದು ಪ್ರೋಮೋ ರಿಲೀಸ್ ಮಾಡಿ​ ಕುತೂಹಲ ಮೂಡಿಸಿದ ಬಿಗ್​ಬಾಸ್​

    ರಿಲೀಸ್​ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಬಗ್ಗೆ ಮಾತಾಡಿದ ಬಿಗ್​ಬಾಸ್​

    ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯದೊಂದಿಗೆ ಬಿಗ್​ಬಾಸ್ 11 ಶುರು

ಅಂತೂ ಇಂತೂ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಬಂದೇ ಬಿಡ್ತು. ಇಷ್ಟು ದಿನ ಇದಕ್ಕಾಗಿಯೇ ಕಾಯುತ್ತಿದ್ದ ವೀಕ್ಷಕರು ಫುಲ್​ ಖುಷ್ ಆಗಿದ್ದಾರೆ. ಬಿಗ್​ಬಾಸ್​ ಸೀಸನ್​ 11ರ ಎರಡನೇ ಪ್ರೋಮೋ ರಿಲೀಸ್ ಆಗಿದೆ.
ಸದ್ಯ ಬಹುನಿರೀಕ್ಷಿತ ಕನ್ನಡದ ಬಿಗ್​ಬಾಸ್ 11 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೊಸ ಸೀಸನ್ ಪ್ರಾರಂಭಕ್ಕೆ ಬಿಗ್​ಬಾಸ್​ ತಂಡ ತೆರೆ ಮರೆ ಹಿಂದೆ ಎಲ್ಲ ರೀತಿಯಲ್ಲೂ ತಯಾರಿ ನಡೆಯುತ್ತಿದೆ. ಈಗ ಕಲರ್ಸ್​ ಕನ್ನಡ ತನ್ನ ಅಧಿಕೃತ ಖಾತೆಯಲ್ಲಿ ಬಿಗ್​ಬಾಸ್​​ ಎರಡನೇ ಪ್ರೋಮೋ ಬಿಡುಗಡೆ ಮಾಡಿದೆ.

ಇದನ್ನೂ ಓದಿ: VIDEO: ಬೆಂಕಿ, ನೀರು ಸಮ್ಮಿಲನದೊಂದಿಗೆ ಬರ್ತಿದೆ ಬಿಗ್​ಬಾಸ್​ ಸೀಸನ್​ 11; ಈ ಬಾರಿಯ ವಿಶೇಷತೆ ಏನು?

ವಿಶೇಷ ಎಂದರೆ ಅದು ಕೂಡ ಸೆಪ್ಟೆಂಬರ್ 1 ಭಾನುವಾರದಂದೇ ಮೊದಲ ಪ್ರೋಮೋ ರೀಲಿಸ್​ ಆಗಿತ್ತು. ಇದೀಗ ಸೆಪ್ಟೆಂಬರ್ 10ರಂದು ಎರಡನೇ ಪ್ರೋಮೋ ರೀಲಿಸ್​ ಆಗಿದೆ. ಹೀಗಾಗಿ ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಅಷ್ಟರ ಮಟ್ಟಗೆ ಬಿಗ್​​ಬಾಸ್​ ಪ್ರೋಮೋ ವೈರಲ್​ ಆಗಿದೆ. ಇನ್ನೂ ಮೊದಲ ಸೀಸನ್​ನಿಂದ ಹಿಡಿದು ಹತ್ತು ಸೀಸನ್​ಗಳು ಯಶಸ್ವಿಯಾಗಿ ಪ್ರಸಾರ ಕಂಡಿದೆ. ಪ್ರತಿ ಸೀಸನ್​ನಲ್ಲಿ ಭಿನ್ನ ವಿಭಿನ್ನವಾಗಿರೋ ಲೋಗೋಗಳು ಅನಾವರಣ ಆಗುತ್ತಲೇ ಇರುತ್ತೆ. ಆದರೆ ಈ ಬಾರಿಯ ಬಿಗ್​​ಬಾಸ್​ ಲೋಗೋದಲ್ಲಿ ಒಂದು ಕಡೆ ಬೆಂಕಿ, ಮತ್ತೊಂದು ಕಡೆ ನೀರು ಇದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಅಂದರೆ ಬಿಗ್​ಬಾಸ್ ಮನೆಯೊಳಗೆ ಸ್ಪರ್ಧಿಗಳ ಆಕ್ರೋಶ, ಜಗಳ, ಕಿತ್ತಾಟ, ಕಣ್ಣೀರು, ಭಾವನಾತ್ಮಕ ನಂಟಿನ ಸಾರವನ್ನು ಹೇಳ್ತಿದೆ.

ಇನ್ನು, ಕಲರ್ಸ್​​ ಕನ್ನಡದಲ್ಲಿ ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ ಅಂತ ಹೇಳಲಾಗಿದೆ. ಜೊತೆಗೆ ಖುದ್ದು ಬಿಗ್​ಬಾಸ್​ ಮಾತಾಡಿದ್ದಾರೆ. ಆದರೆ ಅದರಲ್ಲಿ ಈ ಬಾರಿಯ ಬಿಗ್​ಬಾಸ್​ಗೆ ನಿರೂಪಣೆ ಯಾರು ಮಾಡಲಿದ್ದಾರೆ ಎಂದು ಸಸ್ಪೆನ್ಸ್​ ಇಟ್ಟಿದ್ದಾರೆ. ಸದ್ಯ ಇದೇ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದಷ್ಟು ಬೇಗ ಕಿಚ್ಚ ಸುದೀಪ್​ ಅವರ ದರ್ಶನ ಆಗಲಿ ಅಂತ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ಬಾರಿ ಇನ್ನೂ ದೊಡ್ಡದು ಕಾದಿದೆ.. ಬಿಗ್​​ಬಾಸ್​​​ ಸೀಸನ್​​ 11 ಬಗ್ಗೆ ಬಿಗ್​ ಅಪ್ಡೇಟ್​​ ಕೊಟ್ಟ ಕಲರ್ಸ್​​ ಕನ್ನಡ ಪ್ರೋಮೋ!

https://newsfirstlive.com/wp-content/uploads/2024/09/bigg-boss-2.jpg

Load More