newsfirstkannada.com

ಕೊನೆಗೂ ಒಳ್ಳೆ ಹುಡುಗ ಪ್ರಥಮ್​ಗೆ ಬಂತು ಮದುವೆ ಭಾಗ್ಯ.. ಹುಡ್ಗಿ ಮಾತ್ರ ಇವರೇ ಫಿಕ್ಸ್​ ಮಾಡಿದ್ದಂತೆ!

Share :

13-06-2023

    ಬಿಗ್ ಬಾಸ್ ವಿನ್ನರ್ ಪ್ರಥಮ್ ಕೈ ಹಿಡಿಯೋ ಆ ವಧು ಯಾರು..?

    ನಟ ಭಯಂಕರನ ಜೊತೆ ಮಂಡ್ಯ ಹುಡ್ಗಿಯ ಮ್ಯಾರೇಜ್ ಫಿಕ್ಸ್

    ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ಒಳ್ಳೆ ಹುಡ್ಗ ಪ್ರಥಮ್

ಯಾವಾಗ ಸಾರ್ ಮದುವೆ? ಯಾವಾಗ ಮೇಡಂ ಮದುವೆ? ಯಾವಾಗ? ಯಾವಾಗ? ಈ ರೀತಿ ಯಾವಾಗ ಮದುವೆ ಅನ್ನೋ ಪ್ರಶ್ನೆಗಳು ಬ್ಯಾಚುಲರ್ ಸೆಲೆಬ್ರಿಟಿಗಳಿಗೆ ಬರುತ್ತಲೇ ಇರುತ್ತವೆ. ಅದರಂತೆ ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡ್ಗ ಖ್ಯಾತಿಯ ಪ್ರಥಮ್​​ಗೂ ಕೂಡ ಯಾವಾಗ ಮದುವೆ ಪ್ರಥಮ್ ಅನ್ನೋ ಪ್ರಶ್ನೆಗಳು ಎದುರಾಗುತ್ತಲೇ ಇದ್ದವು. ಅದಕ್ಕೆ ಒಳ್ಳೆ ಹುಡ್ಗ ಪ್ರಥಮ್ ಆದ್ರಾಯಿತು ಬಿಡಿ. ಏನಾದ್ರೂ ಸಾಧಿಸಿ ಮದುವೆ ಆಗೋಣ ಅಂತಿದ್ರು. ಈಗ ಕೊನೆಗೂ ಪ್ರಥಮ್ ಮದುಮಗನಾಗಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಬಿಗ್ ಬಾಸ್ ವಿನ್ನರ್ ಪ್ರಥಮ್ ಸಂಸಾರ ನೌಕೆಯನ್ನ ಏರಲು ಸಜ್ಜಾಗಿದ್ದಾರೆ. ಅಪ್ಪ ಅಮ್ಮ ಗುರು ಹಿರಿಯರು ನಿಶ್ಚಯ ಮಾಡಿದ್ದ ಹುಡ್ಗಿಯನ್ನೇ ಮದುವೆಯಾಗಲು ಮುಂದಾಗಿದ್ದಾರೆ. ಇಂದು ನಟ ಕಮ್ ನಿರ್ದೇಶಕ ಪ್ರಥಮ್ ಅವರು ಭಾನುಶ್ರೀ ಎಂಬುವರ ಜೊತೆ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಟ ಭಯಂಕರ ಸಿನಿಮಾ ರಿಲೀಸ್​​ಗೆ ಕಾದಿದ್ದ ಪ್ರಥಮ್ ಈಗ ಮದುವೆಗೆ ಸಜ್ಜಾಗಿದ್ದಾರೆ. ಆರೇಳು ತಿಂಗಳ ಹಿಂದೆ ಪ್ರಥಮ್ ಅವರ ಮನೆಯಲ್ಲಿ ಮಂಡ್ಯ ಮೂಲದ ಭಾನುಶ್ರೀ ಎಂಬುವರ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಆದ್ರೆ ಪ್ರಥಮ್ ನಟನೆ ಪ್ಲಸ್ ನಿರ್ದೇಶನದ ‘ನಟಭಯಂಕರ’ ಸಿನಿಮಾ ರಿಲೀಸ್ ಇದ್ದ ಕಾರಣ ಮದುವೆ ವಿಚಾರವನ್ನ ಕೊಂಚ ದೂರ ಇಟ್ಟಿತ್ತು ಫ್ಯಾಮಿಲಿ. ಈಗ ಮದುವೆ ಮಾಡಲು ಮುಂದಾಗಿರುವ ಪ್ರಥಮ್ ಫ್ಯಾಮಿಲಿ ಭಾನುಶ್ರೀ ಜೊತೆ ಮದುವೆ ಫಿಕ್ಸ್ ಮಾಡಿದೆ.

ಇದನ್ನು ಓದಿ: http://ಸದ್ದಿಲ್ಲದೆ ಸಿಂಪಲ್ಲಾಗಿ ಎಂಗೇಜ್​ ಆದ ಒಳ್ಳೆ ಹುಡುಗ ಪ್ರಥಮ್​; ಹುಡುಗಿ ಯಾರು ಗೊತ್ತಾ?

ಪ್ರಥಮ್ ಅವರನ್ನ ಕೈ ಹಿಡಿಯುತ್ತಿರುವ ಭಾನುಶ್ರೀ ಅವರು ಮಂಡ್ಯದ ಗ್ರಾಮವೊಂದರ ನಿವಾಸಿಯಾಗಿದ್ದು, MA ವ್ಯಾಸಂಗ ಮಾಡ್ತಾ ಇದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಆಷಾಢ ಮಾಸ ಶುರುವಾಗೋದ್ರಿಂದ ಬೇಗನೆ ನಿಶ್ಚಿತಾರ್ಥ ಮಾಡಿರುವ 2 ಕುಟುಂಬದವರು ಆಷಾಢ ಮುಗಿದ ನಂತರ ಒಂದೊಳ್ಳೆ ಡೇಟ್ ಫಿಕ್ಸ್ ಮಾಡಿ ಮದುವೆ ಮಾಡೋ ಪ್ಲಾನ್​​ನಲ್ಲಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕೊನೆಗೂ ಒಳ್ಳೆ ಹುಡುಗ ಪ್ರಥಮ್​ಗೆ ಬಂತು ಮದುವೆ ಭಾಗ್ಯ.. ಹುಡ್ಗಿ ಮಾತ್ರ ಇವರೇ ಫಿಕ್ಸ್​ ಮಾಡಿದ್ದಂತೆ!

https://newsfirstlive.com/wp-content/uploads/2023/06/PRATHAM_WEDDING_FIX.jpg

Load More