ಎಲ್ಲೆಡೆ ಬಿಗ್ಬಾಸ್ ಸೀಸನ್ 10ರ ಹೊಸ, ಹೊಸ ಸ್ಪರ್ಧಿಗಳ ಬಗ್ಗೆ ಚರ್ಚೆ
ಬಿಗ್ಬಾಸ್ ಪ್ರೋಮೋ ರಿಲೀಸ್; ನಾನಾ ಸೆಲೆಬ್ರಿಟಿ ಹೆಸರುಗಳು ವೈರಲ್
ಬಿಗ್ಬಾಸ್ ಕಂಟೆಸ್ಟೆಂಟ್ಸ್ಗಳ ಸೆಲೆಕ್ಷನ್ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?
ಕನ್ನಡ ಕಿರುತೆರೆಯಲ್ಲಿ ಮೋಸ್ಟ್ ಅವೈಟೆಡ್ ಶೋ ಎಂದರೆ ಅದು ಬಿಗ್ಬಾಸ್. ಅದರಲ್ಲೂ ಈ ಬಾರಿ ಬಿಗ್ ಬಾಸ್ ಸೀಸನ್ 10 ಆಗಿರೋ ಕಾರಣ ಈ ಸೀಸನ್ ತುಂಬಾನೆ ಸ್ಪೆಷಲ್ ಆಗಿರೋದಂತೂ ಸುಳ್ಳಲ್ಲ. ಈಗಾಗಲೇ ವೀಕ್ಷಕರು ಅವರದ್ದೇ ಆದ ಊಹೆಗಳಲ್ಲಿ ಬಿಗ್ಬಾಸ್ ಸ್ಪರ್ಧಿಗಳ ಲಿಸ್ಟ್ನ ಪಟ್ಟಿ ಮಾಡುತ್ತಿದ್ದಾರೆ. ಆದರೆ ಈ 10ನೇ ಸೀಸನ್ಗೆ ಯಾರಪ್ಪ ಬರಲಿದ್ದಾರೆ ಅಂತ ನೋಡ್ತಾ ಹೋದಾಗ ಒಂದಷ್ಟು ಕಿರುತೆರೆ ಹಾಗೂ ಹಿರಿತೆರೆ ಸೆಲೆಬ್ರಿಟಿ ಹೆಸರುಗಳ ತಾಳೆ ಹಾಕುತ್ತಿದ್ದಾರೆ.
ಬಿಗ್ಬಾಸ್ ಸೀಸನ್ 10ಕ್ಕೆ ನಟಿ ನಮ್ರತಾ ಗೌಡ ಅವರ ಹೆಸರು ಬಾರಿ ಸದ್ದು ಮಾಡುತ್ತಿದೆ. ಯಾಕಂದ್ರೆ, ನಾಗಿಣಿ 2ಧಾರಾವಾಹಿಯ ಮುಕ್ತಾಯದ ನಂತರ ಯಾವ ಪ್ರಾಜೆಕ್ಟನ್ನು ಸಹ ಕೈಗೆತ್ತಿಕೊಂಡಿಲ್ಲ ನಮ್ರತಾ. ಹಾಗಾಗಿನೇ ನಮ್ರತಾ ಗೌಡ ಬರೋ ಚಾನ್ಸಸ್ ಇದೆ. ಜೊತೆಗೆ ನಿನಾದ್ ಹರಿತ್ಸ ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಇನ್ನೂ, ಸ್ಯಾಂಡಲ್ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಈ ಬಾರಿಯ ಬಿಗ್ಬಾಸ್ಗೆ ಬರಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ ಎಕ್ಸ್ಕ್ಯೂಸ್ಮಿ ಖ್ಯಾತಿಯ ನಟ ಸುನೀಲ್ ರಾವ್, ಕನ್ನಡದ ಫಿಮೇಲ್ ರಾಪರ್ ಇಶಾನಿ, ಹುಚ್ಚ ಸಿನಿಮಾದ ಖ್ಯಾತ ನಟಿ ರೇಖಾ ಹಾಗೂ ರಾಬರ್ಟ್ ಸಿನಿಮಾದ ಖ್ಯಾತ ನಟಿ ಆಶಾ ಭಟ್.
ಇದನ್ನು ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್; ಬಿಗ್ಬಾಸ್ ಸೀಸನ್ 10 ಯಾವಾಗ? ಈ ಬಾರಿ ಸಮ್ಥಿಂಗ್ ಸ್ಪೆಷಲ್!
ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಸುದ್ದಿಯಲ್ಲಿರೋ ರೀಲ್ಸ್ ಕ್ವೀನ್ ಭೂಮಿಕಾ ಬಸವರಾಜ್. ಇವರು ಕೂಡ ಈ ಬಾರಿಯ ಸೀಸನ್ನಲ್ಲಿ ಭಾಗಿಯಾಗೋ ಚಾನ್ಸಸ್ ಇದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಬಿಗ್ಬಾಸ್ ಸೀಸನ್ 10ರ ಬಗ್ಗೆ ಅಂತೆ ಕಂತೆಗಳು ಹರಿದಾಡ್ತಿದ್ದು, ಸ್ಫರ್ಧಿಗಳ ಲಿಸ್ಟ್ ಇನ್ನೂ ಫೈನಲ್ ಆಗಿಲ್ಲ. ಸದ್ಯ ಕಂಟೆಸ್ಟೆಂಟ್ಸ್ಗಳ ಸೆಲೆಕ್ಷನ್ ಪ್ರೋಸೆಸ್ ಜೋರಾಗಿ ನಡೆಯುತ್ತಿದೆ. ಇತ್ತ ಕಿಚ್ಚ ಸುದೀಪ್ ಅವರೊಟ್ಟಿಗೆ ಪ್ರೋಮೋ ಶೂಟ್ಗೆ ಕ್ಷಣಗಣನೆ ಆರಂಭವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ