/newsfirstlive-kannada/media/post_attachments/wp-content/uploads/2024/10/hanumantha1.jpg)
ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಶುರುವಾಗಿ 30 ದಿನ ಕಳೆದಿದೆ. ಈ ಕಳೆದ 30 ದಿನಗಳಲ್ಲಿ ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಬಿಗ್​ಬಾಸ್​ ಶುರುವಾಗಿ ಎರಡೇ ವಾರಕ್ಕೆ ಇಬ್ಬರು ಸ್ಪರ್ಧಿಗಳು ಬಿಗ್​ಬಾಸ್​ ಮನೆಯಿಂದ ಆಚೆ ಹೋಗಿದ್ದರು.
/newsfirstlive-kannada/media/post_attachments/wp-content/uploads/2024/10/HANUMANTHA.jpg)
ಇದಾದ ಬಳಿಕ ಅಚ್ಚರಿಯ ರೀತಿಯಲ್ಲಿ ಬಿಗ್​ಬಾಸ್​ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿತ್ತು. ವೈಲ್ಡ್ ಕಾರ್ಡ್ ಎಂಟ್ರಿ ಆಗಮನವಾಗುತ್ತಿದ್ದಂತೆ ಮನೆಯ ಎಲ್ಲಾ ಸ್ಪರ್ಧಿಗಳು ಶಾಕ್​ ಆಗಿದ್ದರು. ಇದೀಗ ಅದೇ ವೈಲ್ಡ್ ಕಾರ್ಡ್ ಆಟಕ್ಕೆ ಇಡೀ ಮನೆ ದಂಗಾಗಿದೆ. ಜೊತೆಗೆ ವೀಕ್ಷಕರು ಈ ಇಬ್ಬರು ಸ್ನೇಹಕ್ಕೆ ಮನಸೋತಿದ್ದಾರೆ.
/newsfirstlive-kannada/media/post_attachments/wp-content/uploads/2024/10/hanumantha2.jpg)
ಹೌದು, ಬಿಗ್​ಬಾಸ್​ ಮನೆಗೆ ಮೂರನೇ ವಾರಕ್ಕೆ ಬಂದಿದ್ದ ಗಾಯಕ ಹನುಮಂತ ಸದ್ಯ ಬಿಗ್​ಬಾಸ್​ ಮನೆಯ ಕ್ಯಾಪ್ಟನ್​ ಆಗಿ ಹೊರ ಹೊಮ್ಮಿದ್ದಾರೆ. ಬಿಗ್​ಬಾಸ್​ ಕೊಟ್ಟ ಟಾಸ್ಕ್​ ಅನ್ನು ತ್ರಿವಿಕ್ರಮ್​ ಹಾಗೂ ಭವ್ಯಾ ಗೌಡ ಬಿಟ್ಟು ಉಳಿದ ಎಲ್ಲರೂ ಆಡಿದ್ದರು. ಈ ಟಾಸ್ಕ್​ನಲ್ಲಿ ಕೆಲವು ಸ್ಫರ್ಧಿಗಳು ಪ್ಲಾನ್​ ಮಾಡಿಕೊಂಡು ಆಡಿದ್ದರು. ಆದರೆ ಹನುಮಂತ ಹಾಗೂ ಧನರಾಜ್​ ಇಬ್ಬರು ಮಾತಾಡಿಕೊಂಡು ಯಾರೇ ಗೆದ್ದರು ಖುಷಿ ಅಂತ ಹೇಳಿ ಆಟ ಶುರು ಮಾಡಿದ್ದರು. ಈ ಇಬ್ಬರಲ್ಲಿ ಕೊನೆಯ ಕ್ಷಣದಲ್ಲಿ ಹನುಮಂತ ನಾಲ್ಕನೇ ವಾರಕ್ಕೆ ಬಿಗ್​ಬಾಸ್​ ಮನೆಯ ಕ್ಯಾಪ್ಟನ್​ ಆಗಿ ಹೊರ ಹೊಮ್ಮಿದ್ದಾರೆ.
/newsfirstlive-kannada/media/post_attachments/wp-content/uploads/2024/10/hanumantha3.jpg)
ಬಿಗ್​ಬಾಸ್​ ಮನೆಗೆ ಕ್ಯಾಪ್ಟನ್​ಗೆ ಶುಭ ಕೋರುತ್ತಿದ್ದಂತೆ, ಹನುಮಂತ ಸ್ನೇಹಿತ ಧನರಾಜ್​ ಫುಲ್​ ಖುಷಿಪಟ್ಟಿದ್ದಾರೆ. ಈ ಖುಷಿಯಲ್ಲೇ ಹನುಮಂತ ಅವರನ್ನು ಹೆಗಲ ಮೇಲೆ ಎತ್ತಿಕೊಂಡು ಮನೆ ತುಂಬಾ ಓಡಾಡಿದ್ದಾರೆ. ಈ ಸಂಚಿಕೆಯನ್ನು ವೀಕ್ಷಿಸಿದ ವೀಕ್ಷಕರು ಈ ಇಬ್ಬರ ಸ್ನೇಹಕ್ಕೆ ಮನಸೋತಿದ್ದಾರೆ. ಅಲ್ಲದೇ ಇದ್ದರೇ ನಿಮ್ಮ ತರ ಇರಬೇಕು, ಪ್ರಾಮಾಣಿಕತೆಯ ಆಟಕ್ಕೆ ಸಿಕ್ಕ ಜಯ, ಆಟ ಆಡೋಕೆ ಬರಲ್ಲ ಅಂತ ಎಷ್ಟೋ ಜನರ ಬಾಯಿ ಮುಚ್ಚಿಸಿದಿಯ ಹನುಮಂತು, ಹನುಮಂತ ಅಮಾಯಾಕ ಅಲ್ಲಾ. ನಿನ್ನ ಆಟವನ್ನು ನಿಯುತ್ತಾಗಿ ಆಡಿದ್ದೀಯಾ ಅಂತ ಹಾಡಿ ಹೊಗಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us