newsfirstkannada.com

ಬಿಗ್​ಬಾಸ್​ ಕಿಚ್ಚನ ಕಾಸ್ಟ್ಯೂಮ್‌ ಡಿಸೈನ್ ಹಿಂದಿರೋದು ಯಾರು? ಸುದೀಪ್‌ ಬಟ್ಟೆ ಹೊಲಿಯೋಕೆ ಎಷ್ಟು ದಿನ ಬೇಕು!

Share :

10-11-2023

    ಬಿಗ್​ಬಾಸ್​ ವೇದಿಕೆಯ ರಂಗು ಹೆಚ್ಚಿಸಿದ ಕಿಚ್ಚನ ಕಾಸ್ಟ್ಯೂಮ್‌ಗಳು

    ಕಿಚ್ಚ ಸುದೀಪ್​ ಅಭಿಮಾನಿಗಳಲ್ಲಿ ಅವರು ಧರಿಸೋ ಬಟ್ಟೆ ಬಗ್ಗೆ ಮಾತು

    ಕಿಚ್ಚ ಸುದೀಪ್​ ಧರಿಸುವ ಬಟ್ಟೆ ಫೈನಲ್​ ಆಗಲು ಎಷ್ಟು ದಿನ ಬೇಕು?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 9ರ ತನಕ ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಈಗ ಬಿಗ್​​ಬಾಸ್​ ಸೀಸನ್​ 10ಕ್ಕೂ ಕೂಡ ಅವರೇ ನಿರೂಪಣೆ ಮಾಡುತ್ತಿದ್ದಾರೆ. ಬಿಗ್​ಬಾಸ್‌ನಲ್ಲಿ ವೀಕ್ಷಕರಿಗೆ ಹಲವು ವಿಚಾರಗಳು ಮನರಂಜನೆ ನೀಡುತ್ತವೆ.

ಸುದೀಪ್‌ ನಿರೂಪಣೆಯಿಂದಾಗಿ ಕಾರ್ಯಕ್ರಮದ ರಂಗು ಹೆಚ್ಚಾಗುತ್ತದೆ. ಅದು ಮಾತ್ರವಲ್ಲದೇ ಕಿಚ್ಚ ಸುದೀಪ್​ ಅವರು ಧರಿಸುವ ಭಿನ್ನ ವಿಭಿನ್ನ ಕಾಸ್ಟ್ಯೂಮ್‌ಗಳು ಕೂಡ ಇಡೀ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುತ್ತದೆ ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್​ನಲ್ಲಿ ಸುದೀಪ್‌ ಯಾವ ರೀತಿ ಬಟ್ಟೆ ಧರಿಸಿ ಬರುತ್ತಾರೆ ಎಂಬ ಕುತೂಹಲವೂ ಅವರ ಅಭಿಮಾನಿಗಳಿಗೆ ಇರುತ್ತದೆ. ಇನ್ನೂ ಫ್ಯಾಷನ್‌ ವಿಚಾರದಲ್ಲಿ ಅವರನ್ನು ಅನುಕರಣೆ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ಈವರೆಗೂ ಬಿಗ್‌ ಬಾಸ್‌ ವೇದಿಕೆಯ ರಂಗು ಹೆಚ್ಚಿಸಿದ ಕಿಚ್ಚನ ಕಾಸ್ಟ್ಯೂಮ್‌ಗಳ ಬಗ್ಗೆ ಮಾಹಿತಿಯೊಂದು ಸಿಕ್ಕಿದೆ.

ಇನ್ನೂ ಕಿಚ್ಚ ಸುದೀಪ್​ ಹಾಕಿಕೊಳ್ಳುವ ಬಟ್ಟೆಯನ್ನು ಭರತ್​ ಸಾಗರ್​ ಎಂಬುವವರು ಹೊಲಿಯುತ್ತಾರೆ. ಈ ಬಗ್ಗೆ ನ್ಯೂಸ್​​ ಫಸ್ಟ್​ನೊಂದಿಗೆ ಭರತ್​ ಸಾಗರ್​ ಅವರೇ ಮಾತಾಡಿದ್ದಾರೆ. ಕಿಚ್ಚ ಸುದೀಪ್​ ಅವರು ಧರಿಸುವ ಬಟ್ಟೆ ಫೈನಲ್​ ಆಗಲು ಒಂದು ವಾರ ಬೇಕಾಗುತ್ತದೆ. ಅದರಲ್ಲೂ ಕಾಸ್ಟ್ಯೂಮ್​ನಲ್ಲಿ ತುಂಬಾ ಬದಲಾವಣೆ ಮಾಡಬೇಕಾಗುತ್ತದೆ. ಆ ಬಟ್ಟೆಗಳನ್ನು ಹೊಲಿಯಲು ಸುಮಾರು 7 ರಿಂದ 8 ದಿನ ಬೇಕಾಗುತ್ತದೆ. ಫ್ಯಾಬ್ರಿಕ್​​ ಅನ್ನು ಹುಡುಕಲು 4ರಿಂದ 5 ದಿನ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್​ ಕಿಚ್ಚನ ಕಾಸ್ಟ್ಯೂಮ್‌ ಡಿಸೈನ್ ಹಿಂದಿರೋದು ಯಾರು? ಸುದೀಪ್‌ ಬಟ್ಟೆ ಹೊಲಿಯೋಕೆ ಎಷ್ಟು ದಿನ ಬೇಕು!

https://newsfirstlive.com/wp-content/uploads/2023/11/kiccha-1.jpg

Load More