newsfirstkannada.com

ಕನ್ನಡಿಗರಿಗೆ ಗುಡ್​​ನ್ಯೂಸ್​​.. ಈ ಬಾರಿ ಬಿಗ್​​ಬಾಸ್​​ ನಡೆಸಿಕೊಡೋದು ಯಾರು..? ಯಾವಾಗಿನಿಂದ ಶುರು..?

Share :

21-06-2023

    ಬಿಗ್​​ಬಾಸ್ ಓಟಿಟಿ ಸೀಸನ್​​ 2 ಶೋ ಪ್ರೊಡಕ್ಷನ್ ಕೆಲಸ ಶುರು!

    ಆಗಸ್ಟ್​ ಹೊತ್ತಿಗೆ ಓಟಿಟಿ ಸೀಸನ್​ 2 ಪ್ರಸಾರ ಮಾಡಲು ತಯಾರಿ

    ಈ ಬಾರಿಯ ಬಿಗ್​​ಬಾಸ್ ಓಟಿಟಿ ಸೀಸನ್​​ 2 ಌಂಕರ್​ ಯಾರು?

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​​​ ಓಟಿಟಿ ಸೀಸನ್​​ 2 ಲಗ್ಗೆ ಇಡಲು ಸಜ್ಜಾಗ್ತಿದೆ. ಪ್ರೀ ಪ್ರೊಡಕ್ಷನ್​ ಕೆಲಸಗಳು ಶುರುವಾಗಿವೆ. ಇದರ ಬೆನ್ನಲ್ಲೆ ಹೊಸ ಸುದ್ದಿಯೊಂದು ಬಿಗ್​ ಮನೆಯಿಂದ ಮುನ್ನಲೆಗೆ ಬಂದಿದೆ. ಸಾವಿರಾರು ನೆನಪುಗಳನ್ನ ಅಡಗಿಸಿಕೊಂಡಿರೋ ಬಿಗ್​ ಬಾಸ್​ ಮನೆ ಸ್ಥಳವನ್ನು ಬದಲಾಯಿಸುತ್ತದೆ.​ ಹೌದು, ಇನೋವೇಟಿವ್​ ಫಿಲ್ಮ್​​ ಸಿಟಿ ಸೆಂಟರ್​ ಆಫ್​ ಅಟ್ರ್ಯಾಕ್ಷನ್​ ಆಗಿದ್ದ ಬಿಗ್​ ಬಾಸ್​ ಮನೆ ಸ್ಥಳಾಂತರವಾಗುತ್ತಿರೋ ಸುದ್ದಿ ಎಲ್ಲೆಡೆ ಹರಿದಾಡ್ತಿದೆ.

ಮೂಲಗಳ ಪ್ರಕಾರ ಈಗಾಗಲೇ ಬಿಗ್​ ಬಾಸ್​ ಓಟಿಟಿಗೆ ತಂಡ ತಯಾರಿ ಮಾಡಿಕೊಳ್ಳುತ್ತಿದೆ. ಬಿಗ್​​ಬಾಸ್​​ ತಂಡದವರು ಹೊಸ ಜಾಗದ ಹುಡುಕಾಟದಲ್ಲಿದ್ದಾರಂತೆ. ಆಗಸ್ಟ್​ ಹೊತ್ತಿಗೆ ಓಟಿಟಿ ಸೀಸನ್​ 2 ಪ್ರಸಾರ ಮಾಡಲು ತಯಾರಿ ಮಾಡಿಕೊಳ್ತಿದೆಯಂತೆ ತಂಡ. ಇಷ್ಟು ವರ್ಷ ಬಿಗ್​ ಬಾಸ್​ ಮನೆ ನಿರ್ಮಾಣ ಆಗ್ತಿದ್ದು ರಾಮನಗರ ಜಿಲ್ಲೆ ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ. ಇದಕ್ಕೂ ಮೊದಲು ಬಿಗ್​ಬಾಸ್​ ಕನ್ನಡ ಶುರುವಿನ ಎರಡ್ಮೂರು ಸೀಸನ್​ಗಳು ಪುಣೆಯ ಲೂನೋವಾದಲ್ಲಿ ನಡೆದಿದ್ದವು. ನಂತರ ಕರುನಾಡಿಗೆ ಶಿಫ್ಟ್​ ಆಯ್ತು ದೊಡ್ಮನೆ. ಬಳಿಕ ಇನೋವೇಟಿವ್​ ಫಿಲ್ಮ್​​ ಸಿಟಿ ಅಂದ್ರೆ ಬಿಗ್​ ಬಾಸ್ ಮನೆ ಎನ್ನುವ ಮಟ್ಟಿಗೆ ಪ್ರಸಿದ್ಧಿ ಪಡೆಯಿತು ಈ ಸ್ಥಳ.

ಸದ್ಯ, ಬೆಂಗಳೂರು ದಕ್ಷಿಣ ಭಾಗದಲ್ಲಿರೋ ದೊಡ್ಡ ಆಲದಮರದ ಬಳಿ ಬಿಗ್​ ಬಾಸ್ ಮನೆ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆಯಂತೆ.​ ಓಟಿಟಿ ಸೀಸನ್​ 2 ಈ ಹೊಸ ಜಾಗದಲ್ಲಿ ನಡೆಯಲಿದೆಯಂತೆ. ಈ ಬಗ್ಗೆ ತಂಡ ಇನ್ನು ಯಾವುದೇ ಗುಟ್ಟುಬಿಟ್ಟು ಕೊಟ್ಟಿಲ್ಲ. ಒಟ್ಟಿನಲ್ಲಿ ಹಿಂದಿಯಲ್ಲಿ ಬಿಗ್​ ಬಾಸ್​ ಓಟಿಟಿ ಸೀಸನ್​ 2 ಶುರುವಾಗಿದ್ದು, ಕನ್ನಡ ಬಿಗ್​ ಬಾಸ್​ ಪ್ರೀಯರಿಗೆ ಶೀಘ್ರದಲ್ಲೆ ಹೊಸ ಸೀಸನ್​ ನೋಡೋ ಭಾಗ್ಯ ಅಂತೂ ಪಕ್ಕಾ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ 

ಕನ್ನಡಿಗರಿಗೆ ಗುಡ್​​ನ್ಯೂಸ್​​.. ಈ ಬಾರಿ ಬಿಗ್​​ಬಾಸ್​​ ನಡೆಸಿಕೊಡೋದು ಯಾರು..? ಯಾವಾಗಿನಿಂದ ಶುರು..?

https://newsfirstlive.com/wp-content/uploads/2023/06/kichha.jpg

Load More