newsfirstkannada.com

ಬಿಗ್​​ಬಾಸ್​​ ಮನೆಯಲ್ಲಿ ಮಾರಾಮಾರಿ.. ಹೆಂಡತಿ ಬಗ್ಗೆ ಮಾತಾಡಿದ್ದಕ್ಕೆ ಮುಖಕ್ಕೆ ಗುದ್ದಿದ್ದ ಸ್ಪರ್ಧಿ!

Share :

Published July 8, 2024 at 10:27pm

Update July 8, 2024 at 10:37pm

  ವಿವಾದಕ್ಕೆ ಗುರಿಯಾದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಒಟಿಟಿ ಸೀಸನ್ 3

  ಇಬ್ಬರು ಹೆಂಡತಿಯರ ಜೊತೆ ಬಿಗ್​​ ಮನೆಗೆ ಎಂಟ್ರಿ ಕೊಟ್ಟಿದ್ದ ಅರ್ಮಾನ್ ಮಲಿಕ್​

  ಅಷ್ಟಕ್ಕೂ ಅರ್ಮಾನ್ ಮಲಿಕ್ ಪತ್ನಿ ಬಗ್ಗೆ ವಿಶಾಲ್ ಪಾಂಡೆ ಹೇಳಿದ್ದೇನು ಗೊತ್ತಾ?

ಹಿಂದಿಯ ಬಿಗ್​ ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿ ಸೀಸನ್ 3 ಆರಂಭವಾದಾಗಿನಿಂದ ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಹೌದು, ಬಿಗ್​ಬಾಸ್​ ಪ್ರೋಮೋ ರಿಲೀಸ್​ ಆದಾಗಿನಿಂದಲೂ ಭಾರೀ ಸುದ್ದಿಯಲ್ಲಿತ್ತು. ಆದರೆ ಇದೀಗ ಬಿಗ್​ಬಾಸ್​ ಒಟಿಟಿ ಸೀಸನ್​ 3ರ ಸ್ಪರ್ಧಿಯಾಗಿರೋ ಯುಟ್ಯೂಬರ್ ಅರ್ಮಾನ್ ಮಲಿಕ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಬಿಗ್​ಬಾಸ್​ ಮನೆಗೆ ಇಬ್ಬರು ಹೆಂಡತಿಯರ ಜೊತೆ ಎಂಟ್ರಿ ಕೊಟ್ಟ ಮುದ್ದಿನ ಗಂಡ; ಉಳಿದ ಸ್ಪರ್ಧಿಗಳು ಯಾರು?

ಹೌದು, ಅರ್ಮಾನ್ ಮಲಿಕ್ ಇಬ್ಬರು ಪತ್ನಿಯರ ಜೊತೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಈಗ ಅರ್ಮಾನ್ ಮಲಿಕ್ ಅವರ ಎರಡನೇ ಪತ್ನಿಗೆ ಸಹ ಸ್ಪರ್ಧಿಯೋರ್ವ ಅತ್ತಿಗೆ ಬಹಳ ಸುಂದರವಾಗಿ ಕಾಣುತ್ತಾರೆ ಅಂತ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಪತಿ ವಿಶಾಲ್ ಪಾಂಡೆ ಮೇಲೆ ಕೈ ಮಾಡಿದ್ದಾರೆ. ಇದೇ ವಿಚಾರವಾಗಿ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದೆ. ನಾನು ಬೇರೆ ಅರ್ಥದಲ್ಲಿ ಹೇಳಿಲ್ಲ. ಒಳ್ಳೆಯ ಅರ್ಥದಲ್ಲಿ ಅತ್ತಿಗೆ ನೋಡಲು ಸುಂದರವಾಗಿದ್ದಾರೆ ಎಂದಿದ್ದೇನೆ ಅಂತ ವಿಶಾಲ್ ಪಾಂಡೆ ಹೇಳಿದ್ದಾರೆ.

ಆದರೆ ಬಿಗ್​ಬಾಸ್​ ನಿಯಮದ ಪ್ರಕಾರ ಯಾವ ಸ್ಪರ್ಧಿಯು ಮತ್ತೊಬ್ಬ ಸ್ಪರ್ಧಿಯ ಮೇಲೆ ಕೈ ಮಾಡುವುದು ಅಥವಾ ದೈಹಿಕವಾಗಿ ಹಲ್ಲೆ ಮಾಡುವುದು ನಿಷೇಧಿಸಲಾಗಿದೆ. ಆಕಸ್ಮಿಕವಾಗಿ ಹಾಗೇನಾದರೂ ಹಲ್ಲೆ ಮಾಡಿದ್ದೇ ಆದಲ್ಲಿ ಅವರನ್ನು ದೊಡ್ಮನೆಯಿಂದ ಆಚೆ ಹಾಕುತ್ತಾರೆ. ಇಲ್ಲಿಯೂ ಕೂಡ ಅರ್ಮಾನ್​ ಮಲ್ಲಿಕ್​​ ವಿಶಾಲ್ ಪಾಂಡೆಗೆ ಹೊಡೆದಿದ್ದಾರೆ. ಇನ್ನೂ ವಿಶಾಲ್ ಪಾಂಡೆ ಮೇಲೆ ಅರ್ಮಾನ್ ಮಲಿಕ್ ಕೈ ಮಾಡಿದ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದೇ ವಿಡಿಯೋವನ್ನು ನೋಡಿದ ನೆಟ್ಟಿಗರು ಹಾಗೂ ಬಾಲಿವುಡ್​ ಮಂದಿ ಅರ್ಮಾನ್​ನನ್ನು ಈ ಕೂಡಲೇ ಬಿಗ್​ಬಾಸ್ ಮನೆಯಿಂದ ಆಚೆ ಹಾಕಬೇಕು ಅಂತ ಒತ್ತಾಯ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​​ಬಾಸ್​​ ಮನೆಯಲ್ಲಿ ಮಾರಾಮಾರಿ.. ಹೆಂಡತಿ ಬಗ್ಗೆ ಮಾತಾಡಿದ್ದಕ್ಕೆ ಮುಖಕ್ಕೆ ಗುದ್ದಿದ್ದ ಸ್ಪರ್ಧಿ!

https://newsfirstlive.com/wp-content/uploads/2024/07/hindi-bigg-boss.jpg

Load More