newsfirstkannada.com

ಬಿಗ್​ಬಾಸ್ ಸೀಸನ್​ 10ಕ್ಕೆ ಕ್ಷಣಗಣನೆ.. ಈ ಬಾರಿ ಗೆಸ್‌ ಮಾಡೋದು ಸುಲಭವಲ್ಲ; ಏನಿದು ಕಿಚ್ಚನ ಕಥೆ ನಿಮ್ಮ ಜೊತೆ?

Share :

14-08-2023

    ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದ ಬಿಗ್​ಬಾಸ್​​ ಸೀಸನ್​​ 10

    ಮತ್ತೆ ಶುರುವಾಯ್ತು ಕಿರುತೆರೆಯ ಬಿಗ್​ಬಾಸ್ ಅಸಲಿ ಆಟ

    ಬಿಗ್​​ಬಾಸ್​​ ಸೀಸನ್​ 10ರಲ್ಲಿ ಯಾರೆಲ್ಲಾ ಸ್ಪರ್ಧಿಗಳು ಇರ್ತಾರೆ?

ಕನ್ನಡ ರಿಯಾಲಿಟಿ ಶೋಗಳಲ್ಲಿ ಹೊಸ ಸಂಚಲನ ಮೂಡಿಸಿದ ಶೋ ಅಂದರೆ ಅದು ಬಿಗ್​ಬಾಸ್. ಇದೀಗ ಆ ಬಿಗ್​ಬಾಸ್​ ಮೇನಿಯಾ ಮತ್ತೆ ಶುರುವಾಗಿದೆ. ಕನ್ನಡದಲ್ಲಿ ಬಿಗ್‌ಬಾಸ್‌ ಹೊಸ ಸೀಸನ್​ಗೆ ತಯಾರಿ ನಡೆಯುತ್ತಿದೆ. ಬಿಗ್​ಬಾಸ್​ ಸೀಸನ್​-10ಗೆ ಹೊಸ ಪ್ಲಾನ್​ ಮಾಡುತ್ತಿದೆ ತಂಡ. ​​ ಇನೋವೇಟಿವ್​ ಸಿಟಿಯಲ್ಲಿದ್ದ ಬಿಗ್​ಬಾಸ್​ ಮನೆ ಈಗ ದೊಡ್ಡ ಆಲದ ಮರಕ್ಕೆ ಶಿಫ್ಟ್​ ಆಗಿದೆ. ಅಲ್ಲಿ ಸೀಸನ್​ 10ಕ್ಕೆ ವಿನೂತನ ಮನೆ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಹೊಸ ವಿಷಯ ಎಂದರೆ ಈ ಬಾರಿ ಮೊದಲು ಮೇನ್​ ಸೀಸನ್​ ಶುರುವಾಗಲಿದೆಯಂತೆ. ನಂತರ ಒಟಿಟಿಗೆ ಪ್ಲಾನ್​ ಮಾಡುತ್ತಿದೆಯಂತೆ ಟೀಮ್​. ಹೌದು, ಹಿಂದಿಯಲ್ಲಿ ಮೊದಲು ಮೇನ್​ ಸೀಸನ್​ ಮಾಡಲಾಗಿತ್ತು. ನಂತರ ಒಟಿಟಿ ಶುರುವಾಯ್ತು.

ಸದ್ಯ ಹಿಂದಿಯಲ್ಲಿ ಒಟಿಟಿ ಸೀಸನ್​ ಫಿನಾಲೆ ಹಂತ ತಲುಪಿದ್ದು, ಇಂದು ಗ್ರ್ಯಾಂಡ್​ ಫಿನಾಲೆ ನಡೆಯುತ್ತಿದೆ. ಇದೇ ಮಾದರಿಯಲ್ಲಿ ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಕೂಡ ಶುರುವಾಗಲಿದೆ. ಬಿಗ್​ ಹೌಸ್​ ಕೂಡ ಹಿಂದಿ ಮಾದರಿಯಲ್ಲಿ ನಿರ್ಮಾಣ ಮಾಡಲಾಗ್ತಿದೆ. ಇನ್ನು, ಇದೇ ಸೆಪ್ಟಂಬರ್​ ಕೊನೆಯ ವಾರದಲ್ಲಿ ಬಿಗ್​ ಬಾಸ್​ ಸೀಸನ್​ 10 ಆರಂಭವಾಗಲಿದೆ. ಇದರ ನಂತರ ಒಟಿಟಿ ಸೀಸನ್​ 2 ಶುರುವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಯಾವ ರೀತಿಯ ಸ್ಪರ್ಧಿಗಳನ್ನ ಆಯ್ಕೆ ಮಾಡಲಾಗ್ತಿದೆ ಎಂಬುದರ ಬಗ್ಗೆ ತಂಡ ಸುಳಿವು ಬಿಟ್ಟು ಕೊಟ್ಟಿಲ್ಲ.

ಇನ್ನು, ವೂಟ್​​​​ ಈಗ ಜಿಯೋ ಸಿನಿಮಾ ಆಗಿ ಬದಲಾಗಿದ್ದು, ಇಷ್ಟು ದಿನ ಬಿಗ್​ಬಾಸ್​ನ ಮಾಸ್ಟರ್​ ಮೈಂಡ್​ ಆಗಿದ್ದ ಪರಮೇಶ್ವರ್​ ಗುಂಡ್ಕಲ್​ ಅವರು ಕಲರ್ಸ್​ನಿಂದ ಜಿಯೋ ಕಡೆ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಈ ಸೀಸನ್‌ನ ಟಿವಿ ಶೋ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ ಹತ್ತು ಹಲವು ಬದಲಾವಣೆಗಳೊಂದಿಗೆ ಬಿಗ್​ ಸೀಸನ್ 10ನೇ ಬರಲು ತಯಾರಿ ನಡೆಸಿದೆ​. ಇದರ ಬೆನ್ನಲ್ಲೇ ಒಟಿಟಿ ಸೀಸನ್​ 2 ಕೂಡ ಬರುತ್ತಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್ ಸೀಸನ್​ 10ಕ್ಕೆ ಕ್ಷಣಗಣನೆ.. ಈ ಬಾರಿ ಗೆಸ್‌ ಮಾಡೋದು ಸುಲಭವಲ್ಲ; ಏನಿದು ಕಿಚ್ಚನ ಕಥೆ ನಿಮ್ಮ ಜೊತೆ?

https://newsfirstlive.com/wp-content/uploads/2023/08/BIGG-BOSS-2.jpg

Load More