newsfirstkannada.com

ಕಿಚ್ಚನ ಮಾತಿನಿಂದ ಬದಲಾದ್ರಾ ವಿನಯ್​​ ಗೌಡ; ಬಿಗ್​ಬಾಸ್​ ಮನೆಯಲ್ಲಿ ಗೇಮ್​ ಪ್ಲಾನ್​ ಚೇಂಜ್​ ಮಾಡಿದ್ರಾ..?

Share :

09-11-2023

    ಕಳೆದ ವಾರ ವಿನಯ್ ಮಾತು, ವರ್ತನೆ, ಕೋಪ ಎಲ್ಲ ಹಿನ್ನಡೆಗೆ ಕಾರಣ

    ಎಲ್ಲ ರೀತಿಯಿಂದ ಜನರಿಂದ ಪಾಸಿಟಿವ್​​ ರೆಸ್ಪಾನ್ಸ್​ ಪಡೆದಿದ್ದ ಸಂಗೀತಾ

    ಹೋದ ವಾರ ಎಲ್ಲ ಅತಿರೇಕಕ್ಕೆ ಹೋಗಿದ್ರೆ, ಈ ವಾರ ಹೇಗಿದೆ ಸ್ಪರ್ಧೆ..?

ಬಿಗ್​​ಬಾಸ್​ ಸೀಸನ್- 10 ಈ ಬಾರಿ ಕಲರ್ಸ್​ ಕನ್ನಡ ವಾಹಿನಿಗೆ ಒಂದು ದೊಡ್ಡ ಸಕ್ಸಸ್​ ತಂದು ಕೊಡ್ತಿದೆ ಅಂದ್ರೆ ಸುಳ್ಳಾಗಲ್ಲ. ಟಿಆರ್​ಪಿ ನಂಬರ್ಸ್​ ಕೂಡ ಈ ಶೋಗೆ ಟಾಪ್​ನಲ್ಲೇ ಇದೆ. ಇದಕ್ಕೆಲ್ಲ ಕಾರಣ ಬಿಗ್​​ಬಾಸ್ ಸೀಸನ್- 10ಕ್ಕೆ ಆಯ್ಕೆಯಾಗಿರುವ ಸ್ಪರ್ಧಿಗಳು. ಎಲ್ಲರಲ್ಲೂ ಕೂಡ ಒಳ್ಳೆತನ ಕೆಟ್ಟತನ ಸೇರಿ ಎಲ್ಲವೂ ಇವೆ.

ಹೋದ ವಾರ ಹಳ್ಳಿ ಟಾಸ್ಕ್​ನಲ್ಲಿ ಮನೆಯಲ್ಲಿ ಇಬ್ಬರು ಸದಸ್ಯರು ಭಾರಿ ಸದ್ದು ಮಾಡಿದ್ರು. ಅವರು ಯಾರೆಂಬುದು ನಿಮಗೆಲ್ಲ ಈಗಾಗಲೇ ಗೊತ್ತಾಗಿದೆ. ಆದರೂ ಅವರು ಯಾರೆಂದರೆ ಒಬ್ಬರು ಸಂಗೀತಾ ಇನ್ನೊಬ್ಬರು ವಿನಯ್. ಸಂಗೀತಾಗೆ ಕಳೆದ ವಾರ ಎಲ್ಲ ರೀತಿಯಿಂದಲು ಪಾಸಿಟಿವ್ ಬಂದರೆ, ವಿನಯ್​ಗೆ ಹೆಚ್ಚು ನೆಗೆಟಿವ್ ಬಂದಿತ್ತು. ಇದಕ್ಕೆ ಮುಖ್ಯ ಕಾರಣ ಅವರಾಡಿದ ಕೆಲವೊಂದು ಮಾತುಗಳು, ನಡವಳಿಕೆ, ಟಾಸ್ಕ್​ನ ವಿಚಾರಕ್ಕೆ ಮೂಡಿದ ಮನಸ್ತಾಪ, ಕೋಪ ಇವೆಲ್ಲ ವಿನಯ್​ಗೆ ಹಿನ್ನಡೆ ಆಗುವಂತೆ ಮಾಡಿದ್ದವು.

ವಿನಯ್ ಅವರ ಮಾತಿನ ಮೇಲೆ ನಿಗವಿಲ್ಲದ ಹೇಳಿಕೆಗಳು ರಾಜ್ಯದ ನಾರಿಮಣಿಯರ ಕೆಂಗಣ್ಣಿಗೆ ಗುರಿಯಾಗಿದ್ದವು. ಮನೆಯೊಳಗೆ ಎಲ್ಲಿಯು ಹಳ್ಳಿಯ ಶಾಂತತೆ ಕಾಣದೇ ಯುದ್ಧದ ರೀತಿ ರಣರಂಗವಾಗಿ ಕಾಣಿಸಿತ್ತು. ಇಲ್ಲಿ ವಿನಯ್ ಮಾಡಿದ ತಪ್ಪು ಎಂದರೆ ಒಪನ್ ಗ್ರೂಪಿಸಮ್. ಎದುರಾಳಿ ಗುಂಪಿನ ವಿರುದ್ಧ ತಮ್ಮ ಗುಂಪನ್ನ ಎತ್ತಿ ಕಟ್ಟುತ್ತಿದ್ದರು. ಕಳಪೆ, ಉತ್ತಮ ಎಲ್ಲವು ಬಹಿರಂಗವಾದ ಚರ್ಚೆ, ವಿನಯ್ ಇದೆಲ್ಲವನ್ನು ಮೊದಲನೇ ವಾರದಿಂದ ಮಾಡಿಕೊಂಡು ಬಂದಿದ್ದರು. ಆದ್ರೆ, ಹೋದ ವಾರ ಎಲ್ಲ ಅತಿರೇಕಕ್ಕೆ ಹೋಗಿತ್ತು.

ಬಿಗ್​ಬಾಸ್​ ಮನೆಯಿಂದ ಹೊರಗೆ ವಿನಯ್ ಯಾವ ರೀತಿ ಜನರಿಗೆ ಕಾಣುತ್ತಿದ್ದಾರೆಂದು ಕಿಚ್ಚ ಸುದೀಪ್ ವೀಕೆಂಡ್​ನಲ್ಲಿ ವಿವರಿಸಿ ಹೇಳಿದ್ದಾರೆ. ವಿನಯ್ ಅವರನ್ನು ಸರಿ ದಾರಿಗೆ ತರಲು ಎಲ್ಲ ಪ್ರಯತ್ನಗಳನ್ನ ಕಳೆದ ವಾರ ಕಿಚ್ಚನ ಜೊತೆಯಲ್ಲಿ ನಡೆದಿದ್ದು ವೈಯಕ್ತಿಕವಾಗಿ ಬುದ್ಧಿ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು

ದಾರಿ ತಪ್ಪಿದ್ದೀರಿ, ತಪ್ಪಬೇಡಿ. ಅಭಿಮಾನಿಗಳಿಗೂ ಈ ವಿನಯ್ ಇಷ್ಟವಿಲ್ಲ. ಮಾತಿನ ಮೇಲೆ ಆದಷ್ಟು ನಿಗವಿರಲಿ ಎಂದು ಬಿಸಿ ಮುಟ್ಟಿಸಿದ್ದಾರೆ. ಆ ಬಿಸಿ ಹೇಗಿತ್ತು ಅಂದರೆ, ಮನೆಯವರು ಉಹಿಸಿಕೊಳ್ಳದ ರೀತಿಯಲ್ಲಿ ಬಾಟಮ್ ಟೂ ಸ್ಥಾನಕ್ಕೆ ಮೊದಲ ನಾಮಿನೇಷನ್​​ನಲ್ಲಿ ಬಂದು ನಿಂತಿದ್ದರು. ಕರ್ನಾಟಕದ ವೀಕ್ಷಕರಿಂದಾಗಿ ಬಾಟಮ್ ಟೂನಿಂದ ಸೇವ್ ಆಗಿರುವ ವಿನಯ್ ಈಗ ಬದಲಾಗಿರುವ ಸೂಚನೆ ಕಾಣುತ್ತಿದೆ.

ಮೊದಲೇ ಈ ವಾರ ವಿನಯ್ ಮನೆಯ ನಾಯಕತ್ವ ವಹಿಸಿಕೊಂಡಿದ್ದಾರೆ. ಈ ವಾರ ಬೇರೆಯದ್ದೆ ರೀತಿ ತಮ್ಮ ಗೇಮ್ ಪ್ಲಾನ್ ಚೇಂಜ್ ಮಾಡಿದ್ದಾರೆ. ಮಾತಿನ ಮುಂಚೆ ಒಂದಷ್ಟು ತಾಳ್ಮೆ ತೆಗೆದುಕೊಳ್ಳುತ್ತಿದ್ದಾರೆ. ಮಹಿಳಾ ಸ್ಪರ್ಧಿಗಳನ್ನ ಗೌರವದಿಂದ ಕಾಣುತ್ತಿದ್ದು ಇತ್ತ ಮನೆಯಲ್ಲಿ ಗ್ರೂಪಿಸಮ್, ಮ್ಯಾಚ್ ಫಿಕ್ಸಿಂಗ್ ಎಲ್ಲ ಕಡಿಮೆಯಾಗಿದೆ. ಸ್ವಲ್ಪ ಸೈಲೆಂಟ್ ಆಗಿದ್ದು ಟಾಸ್ಕ್​ನ ಮೇಲೆ ಫೋಕಸ್ ಮಾಡುತ್ತಿದ್ದಾರೆ. ತಮಗೆ ತಾವೇ ಒಂದಷ್ಟು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ವಾರ ವಿನಯ್ ಆರ್ಭಟ ಇರಲಿಲ್ಲ.

ವಿನಯ್ ಅವ್ರು ಮನೆಯ ಇಕ್ವೇಷನ್ಸ್​ನ ತೂಕ ಹಾಕಿ ಎಲ್ಲವನ್ನ ನಿಧಾನಕ್ಕೆ ತೆಗೆದುಕೊಂಡು ಹೋಗ್ತಿದ್ದಾರೆ. ಈ ವಾರದ ವಿನಯ್ ಅವರ ವರ್ತನೆ ಸುಧಾರಿಸಿದೆ. ಇನ್ನೂ ಅವರ ಗೇಮ್ ಪ್ಲಾನ್ ಕೂಡ ಚೇಂಜ್ ಆಗ್ತಿದೆ ಅನ್ನೋದಂತೂ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಚ್ಚನ ಮಾತಿನಿಂದ ಬದಲಾದ್ರಾ ವಿನಯ್​​ ಗೌಡ; ಬಿಗ್​ಬಾಸ್​ ಮನೆಯಲ್ಲಿ ಗೇಮ್​ ಪ್ಲಾನ್​ ಚೇಂಜ್​ ಮಾಡಿದ್ರಾ..?

https://newsfirstlive.com/wp-content/uploads/2023/10/vinay.jpg

Load More