newsfirstkannada.com

ಬಿಗ್‌ಬಾಸ್‌ ಮನೆಯಲ್ಲಿ ಮತ್ತೆ ಹೆಚ್ಚು-ಕಡಿಮೆಯಾದ ಮಾತಿನ ವರಸೆ; ವಿನಯ್‌- ತನಿಶಾ ಮಧ್ಯೆ ಮೆಗಾ ಫೈಟ್‌!

Share :

07-11-2023

  5ನೇ ವಾರಕ್ಕೆ ಕಾಲಿಡುತ್ತಿದ್ದಂತೆ ಬಿಗ್‌ಬಾಸ್ ಮನೆಯಲ್ಲಿ ಹೊಸ ರಗಳೆ

  ಮನೆಯ ರೂಲ್ಸ್ ಫಾಲೋ ಮಾಡೋದ್ರಲ್ಲಿ ಮಾತಿನ ಚಕಮಕಿ

  ಸ್ಟ್ರಾಂಗ್ ಒಪಿನಿಯನ್​​ ನೀಡಿದ ಸಂಗೀತಾ, ವಿನಯ್, ತನಿಶಾ

ಕನ್ನಡ ಕಿರುತೆರೆಯ ಬಿಗ್​ಬಾಸ್​​ ಸೀಸನ್ 10 ಈಗ ಐದನೇ ವಾರಕ್ಕೆ ಕಾಲಿಟ್ಟಿದೆ. ಐದನೇ ವಾರದ ಆರಂಭದಲ್ಲಿ ಬಿಗ್​ಬಾಸ್​​ ಸ್ಪರ್ಧಿಗಳ ಅಸಲಿ ಮುಖಗಳು ಒಂದೊಂದಾಗಿ ಹೊರ ಬರುತ್ತಿವೆ. ನಿನ್ನೆ ಬಿಗ್​ಬಾಸ್​​ ಮನೆಯ ಸ್ಪರ್ಧಿಗಳಿಗೆ ಟಾಸ್ಕ್​​ವೊಂದನ್ನು ನೀಡಿದ್ದರು. ​​ಧೈರ್ಯವಾಗಿ ಅಭಿಪ್ರಾಯ ನೀಡುವ ಸದಸ್ಯರು ಹಾಗೂ ಅಭಿಪ್ರಾಯಗಳನ್ನು ನೀಡಲು ಹೆದರುವ ಸದಸ್ಯರುಗಳನ್ನು ಅತಿ ಹೆಚ್ಚಿನ ಹಾಗೂ ಕಡಿಮೆ ಇರುವ ಬೋರ್ಡ್​ನಲ್ಲಿ ನಿಲ್ಲಬೇಕು ಎಂಬ ಸೂಚನೆ ನೀಡುತ್ತಾರೆ. ಬಿಗ್​ಬಾಸ್​​ ಕೊಟ್ಟ ಟಾಸ್ಕ್​​ಗೆ ಅನುಗುಣವಾಗಿ ಮನೆಯ ಎಲ್ಲಾ ಸದಸ್ಯರ ಒಮ್ಮತ ನಿರ್ಧಾರದಿಂದ ಸಂಗೀತಾ, ವಿನಯ್, ನಮ್ರತಾ ಹಾಗೂ ತನಿಶಾ ಸ್ಟ್ರಾಂಗ್ ಒಪಿನಿಯನ್ ನೀಡುತ್ತಾರೆ ಎಂದು ಅತಿ ಹೆಚ್ಚಿನ ಕಡೆಗೆ ಸಾಲಾಗಿ ಕುಳಿತುಕೊಳ್ತಾರೆ. ಇತ್ತ ಅತಿ ಕಡಿಮೆ ಸಾಲಿನಲ್ಲಿ ತುಕಾಲಿ ಸಂತೋಷ್​, ಇಶಾನಿ, ಪ್ರತಾಪ್, ವರ್ತೂರು ಸಂತೋಷ್ ಕುಳಿತುಕೊಳ್ತಾರೆ.

ಅಭಿಪ್ರಾಯವನ್ನು ವ್ಯಕ್ತಪಡಿಸಲು ಬಿಗ್​ಬಾಸ್​ ಅತಿ ಕಡಿಮೆ ಕಡೆ ನಿಂತುಕೊಂಡ ಸದಸ್ಯರಿಗೆ ಅವಕಾಶ ನೀಡುತ್ತಾರೆ. ಸ್ನೇಹಿತ್ ಅವರಿಗೆ ಇಷ್ಟವಾದ ಅಭಿಪ್ರಾಯದಲ್ಲಿ ಅತ್ಯಂತ ಪ್ರೀತಿ ಪಾತ್ರ ಹೆಸರು ಬರುತ್ತದೆ. ಆಗ ಆ ಪಾತ್ರದ ಅನುಗುಣವಾಗಿ ಅತಿ ಹೆಚ್ಚಿನ ಸಾಲಿನಲ್ಲಿ ನಮ್ರತಾ, ವಿನಯ್, ಸಿರಿ, ಮೈಕಲ್​ರನ್ನು ನಿಲ್ಲಿಸುತ್ತಾರೆ. ಇತ್ತ ಅತಿ ಕಡಿಮೆ ಸಾಲಿನಲ್ಲಿ ತನಿಶಾ, ಸಂಗೀತಾ ಪ್ರತಾಪ್ ಅವರನ್ನು ನಿಲ್ಲಿಸಿದ್ದಾರೆ. ಇದೇ ವಿಚಾರವಾಗಿ ಹಾಗೂ ಸ್ನೇಹಿತ್, ಸಂಗೀತಾ ಮಧ್ಯೆ ಮಾತಿನ ಚಕಮಕಿ ಶುರುವಾಗೇ ಬಿಟ್ಟಿದೆ. ಸ್ನೇಹಿತ್ ತನಿಶಾ ಹಾಗೂ ಸಂಗೀತಾಗೆ ಬಿಗ್​ಬಾಸ್​ ಮನೆಗೆ ನಿಮ್ಮನ್ನು ನೀವೇ ಲೀಡರ್ ಅನ್ಕೊಂಡಿದ್ದೀರಾ? ಮಾನಿಟರ್ ಆಫ್ ದಿ ಹೌಸ್ ಅನ್ಕೊಂಡದ್ದೀರಾ? ಲೈಟ್ ಆಫ್ ಆದ್ಮೇಲೆ ಮಲಗಲೇಬೇಕು. ಡೋರ್ ಹಾಕಿಲ್ಲಾ ಅಂತಲ್ಲೇ ಪ್ರಶ್ನೆ ಕೇಳ್ತೀರಿ. ಇಲ್ಲಿ ನಮ್ಮನ್ನು ಬಿಗ್​ಬಾಸ್​ ಕಂಟೆಸ್ಟೆಂಟ್ಸ್​ ಅಂತಾ ಕರೆಸಿರೋದು. ಈ ರೀತಿ ಆರ್ಡರ್ ಮಾಡುವುದು ಸರಿ ಅಲ್ಲ ಅಂತ ಸ್ನೇಹಿತ್ ಹೇಳಿದ್ದಾರೆ.

ಸ್ನೇಹಿತ್ ಪ್ರಶ್ನೆಗೆ ಉತ್ತರ ಕೊಟ್ಟ ತನಿಶಾ ಕೇಳುತ್ತೇವೆ ಅದರಲ್ಲಿ ತಪ್ಪೇನು? ನೀವ್ಯಾಕೆ ಮಾನಿಟರ್​ ತರ ಯೋಚನೆ ಮಾಡುತ್ತಿಲ್ಲ. ಅದೊಂದು ಬಿಗ್ ಮನೆಯ ರೂಲ್ಸ್ ನೀವು ಕೂಡ ಫಾಲೋ ಮಾಡಬೇಕು ಅಂತಾ ಹೇಳ್ತಾರೆ, ಅದಕ್ಕೆ ಸ್ನೇಹಿತ್ ಇಲ್ಲಿ ಬಿಸಿನೆಸ್ ಮಾಡೋಕೆ ಬಂದಿಲ್ಲ. ಇಲ್ಲಿ ನಾವ್ಯಾರು ನಿಮಗೆ ಎಂಪ್ಲಾಯ್ಸ್​ಗಳಲ್ಲಾ ಆಯ್ತಾ ಅಂತ ತನಿಶಾ ಮೇಲೆ ಗರಂ ಆಗ್ತಾರೆ. ಅದಕ್ಕೆ ತನಿಶಾ ಸಂಗೀತಾ ಇಬ್ಬರು ನೀವು ನಮ್ಮ ಎಂಪ್ಲಾಯ್ಸ್​ಗಳು ಅಂತ ನಾವು ಎಲ್ಲಿ ಹೇಳಿದ್ದೇವೆ ಅಂತ ಒಬ್ಬೊರಿಗೊಬ್ಬರು ಮಾತಿನ ಚಕಮಕಿ ನಡೆಸಿದ್ದಾರೆ. ಇದೇ ವಿಚಾರಕ್ಕೆ ಮಧ್ಯೆ ವಿನಯ್ ಹಾಗೂ ಮೈಕಲ್ ರೂಲ್ಸ್ ಬ್ರೇಕ್ ಮಾಡಿದ ಎಕ್ಸಾಂಪಲ್​ವೊಂದನ್ನು ತನಿಶಾ ನೀಡ್ತಾರೆ. ಆಗ ಎಲ್ಲದಕ್ಕೂ ಅಲ್ಲಾ ರೂಲ್ಸ್​​ಗೆ ಮಾಡುತ್ತಾ ಅಂತ ಮಾತಿನ ಮಧ್ಯೆ ಮಾತಾಡಿದ್ದಾರೆ. ಇದಕ್ಕೆ ತನಿಶಾ ನಾನು ಸ್ನೇಹತ್ ಹತ್ತಿರ ಮಾತಾಡುತ್ತಿದ್ದೇನೆ.

ಫಸ್ಟ್ ಇಲ್ಲಿ ಕ್ಲಿಯರ್ ಮಾಡ್ತೀನಿ ಅಂತ ವಿನಯ್ ಅವರನ್ನು ಸುಮ್ಮನಿರಿಸುತ್ತಾರೆ. ತದ ನಂತರ ಚಟುವಟಿಕೆ ಮುಕ್ತಾಯದ ಬಳಿಕ ವಿನಯ್ ಎಲ್ಲದಕ್ಕೂ ಅಲ್ಲಾ ರೂಲ್ಸ್​ಗೆ ಮಾತ್ರ ಹೇಳಿರೋದು ಅಂತ ವಿಷಯದ ಬಗ್ಗೆ ಮಾತಾಡುತ್ತಾರೆ. ಅದಕ್ಕೆ ರಿಪ್ಲೈ ಕೋಡೋಕೆ ಹೋದ ತನಿಶಾ ಅವರಿಗೆ ನಾನು ನಿಮಗೆ ಹೇಳಿಲ್ಲ. ಅಲ್ಲಿರೋ ಹುಳಕ್ಕೆ ಹೇಳಿದ್ದು. ಅಂತ ಪದೇ ಪದೇ ಅದನ್ನು ಒತ್ತಿ ಒತ್ತಿ ಹೇಳುತ್ತಾರೆ. ಇತ್ತ ಸಿಟ್ಟಿಗೆದ್ದ ತನಿಶಾ ಮಾತು ಕರೆಕ್ಟ್ ಆಗಿರಲಿ ಇತರಹ ಎಲ್ಲಾ ಮಾತಾಡಿದರೆ ಏನಾಗುತ್ತೆ ಅಂತ ನಿಮಗೂ ಗೊತ್ತಿದೆ. ನಿಗಾ ಇರಲಿ ಅಂತಾರೆ. ನೀವೇ ಈ ರೂಲ್ಸ್ ಆಗಾಗ ಹೇಳ್ತಾ ಇರ್ತೀರಾ. ನೀವೇ ಬ್ರೇಕ್ ಮಾಡ್ತಿದ್ದೀರಾ ಅಂದ ಮೇಲೆ ಯಾಕೆ ರೂಲ್ಸ್ ಮಾಡ್ತೀರಾ. ನಾನು ಸ್ನೇಹಿತ್ ಹತ್ತಿರ ಮಾತಾಡುತ್ತಿದ್ದೆ ಎಂದಿದ್ದಾರೆ.

ನೀವು ಮಾಡಿರೋ ರೂಲ್ಸ್​ನ ನಿಮಗೆ ಮೈಂಟೈನ್ ಮಾಡೋದಕ್ಕೆ ಬಂದಿಲ್ಲ ಅಂದ್ಮೇಲೆ ಯಾವ ಸೀಮೆ ರೂಲ್ಸ್ ಇದು ಅಂತ ಕೇಳಿದ್ದಾರೆ. ಇದಕ್ಕೆ ವಿನಯ್ ಈಗ ಏಕೆ ಬಂದು ಮಾತಾಡ್ತಿದ್ದೀಯಾ. ನಿನ್ನ ಹತ್ತಿರ ಮಾತಾಡೋದು ಪಾಯಿಂಟ್ ಲೆಸ್ ಅಂತ ಪದೇ ಪದೇ ಪಾಯಿಂಟ್ ಅನ್ನೋ ಪದ ಉಪಯೋಗಿಸಿ ತನಿಶಾ ಅವರ ಮಾತನ್ನು ತಳ್ಳಿ ಹಾಕುತ್ತಾರೆ. ಒಟ್ಟಿನಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಚಿಕ್ಕ ವಿಷಯ ದೊಡ್ಡದಾಗಿ ಬೆಳೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬಿಗ್‌ಬಾಸ್‌ ಮನೆಯಲ್ಲಿ ಮತ್ತೆ ಹೆಚ್ಚು-ಕಡಿಮೆಯಾದ ಮಾತಿನ ವರಸೆ; ವಿನಯ್‌- ತನಿಶಾ ಮಧ್ಯೆ ಮೆಗಾ ಫೈಟ್‌!

https://newsfirstlive.com/wp-content/uploads/2023/11/bigg-boss-8.jpg

Load More