ಗೋಲ್ಡ್ ಸುರೇಶ್ ಎಂಟ್ರಿ ಕೊಟ್ಟ ಮೇಲೂ ಬೇಜಾನ್ ಟ್ರೋಲ್!
ಕೇವಲ 50 ಲಕ್ಷ ರೂಪಾಯಿ ಗೆಲ್ಲೋಕೆ ಬಿಗ್ ಬಾಸ್ ಮನೆಗೆ ಬಂದ್ರಾ?
ಸಾಕು ನಾಯಿಗೆ 45 ಗ್ರಾಂ ತೂಕದ ಚಿನ್ನದ ಸರ ಹಾಕಿದ್ದ ಗೋಲ್ಡ್ ಸುರೇಶ್
ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಅದ್ಧೂರಿಯಾಗಿ ಆರಂಭವಾಗಿದೆ. ಹೊಸ ಮನೆಗೆ 17 ಹೊಸ ಕಂಟೆಸ್ಟೆಂಟ್‌ಗಳು ಎಂಟ್ರಿ ಕೊಟ್ಟಿದ್ದಾರೆ. 17 ಸ್ಪರ್ಧಿಗಳಲ್ಲಿ ಒಬ್ಬೊಬ್ಬರದ್ದು ಒಂದೊಂದು ಇಂಟ್ರೆಸ್ಟಿಂಗ್ ಹಿನ್ನೆಲೆಯಿದೆ. ಒಬ್ಬೊಬ್ಬರಿಗೆ ಸೀಸನ್ 11ರ ವಿನ್ನರ್ ನಾನೇ ಆಗಬೇಕು ಅನ್ನೋ ಕಿಚ್ಚು ಇದೆ.
ಇದನ್ನೂ ಓದಿ: ಬಿಗ್ಬಾಸ್ ವೇದಿಕೆ ಮೇಲೆ ದರ್ಶನ್ ಹೆಸರು ಹೇಳಿದ ಸ್ಪರ್ಧಿ; ಸುದೀಪ್ ರಿಯಾಕ್ಷನ್ ಹೇಗಿತ್ತು?
ಬಿಗ್ ಬಾಸ್ ಸೀಸನ್ 11ಕ್ಕೆ ಗೋಲ್ಡ್ ಸುರೇಶ್ ಎಂಟ್ರಿ ಕೊಟ್ಟ ಮೇಲೂ ಬೇಜಾನ್ ಟ್ರೋಲ್ ಆಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಂಗಾರದ ಮನುಷ್ಯನ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ತಮ್ಮ ಮೈ ಮೇಲಿನ ಬಂಗಾರದಿಂದಲೇ ಸುರೇಶ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬಿಗ್ ಬಾಸ್ ವೀಕ್ಷಕರು, ಅಭಿಮಾನಿಗಳು ಒಂದೇ ಒಂದು ಪ್ರಶ್ನೆ ಕೇಳುತ್ತಿದ್ದಾರೆ. ಕೋಟಿ, ಕೋಟಿ ಚಿನ್ನವನ್ನು ಮೈಮೇಲೆ ಹಾಕ್ಕೊಂಡಿರುವ ನಿನಗೆ ಅದ್ಯಾಕತಪ್ಪ ಕೇವಲ 50 ಲಕ್ಷ ರೂಪಾಯಿ ಗೆಲ್ಲೋಕೆ ದೊಡ್ಮನೆಗೆ ಬಂದೆ ಎನ್ನುತ್ತಿದ್ದಾರೆ.
ಈ ಗೋಲ್ಡನ್ ಮ್ಯಾನ್ ಯಾರು?
ಸುರೇಶ್ ಅಥವಾ ಗೋಲ್ಡ್ ಸುರೇಶ್ ಲೈಫ್ ಜರ್ನಿಯೇ ರೋಚಕವಾಗಿದೆ. ಉತ್ತರ ಕರ್ನಾಟಕ ಮೂಲದವರಾದ ಸುರೇಶ್, ಮೂಲತಃ ರೈತನ ಮಗ. 10ನೇ ತರಗತಿವರೆಗೂ ಓದಿರುವ ಸುರೇಶ್ ಆಮೇಲೆ ತಮ್ಮ ಹುಟ್ಟೂರು ಬಿಟ್ಟು ಓಡಿ ಬಂದಿದ್ದಾರೆ. ಏನಾದರೂ ಸಾಧಿಸಬೇಕು ಎನ್ನುವ ಛಲದಿಂದ ಹುಟ್ಟಿದ ಊರು ಬಿಟ್ಟು ಓಡಿ ಬಂದ ಸುರೇಶ್ ಮುಂದೆ ತಮ್ಮದೇ ಸಂಸ್ಥೆ ಸ್ಥಾಪಿಸಿ ಸಾಕಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮಾಜಿ ಸ್ಪರ್ಧಿ ಸಮೀರ್ ಆಚಾರ್ಯ ಕೇಸ್‌ಗೆ ಹೊಸ ಟ್ವಿಸ್ಟ್.. ಪತ್ನಿ ಮೇಲೆ ಕೈ ಎತ್ತಿದ್ದು ನಿಜಾನಾ?
ಸುರೇಶ್ ಅವರು RSS ಸಂಘಟನೆಯ ಕಾರ್ಯಕರ್ತ ಸಹ ಹೌದು. ಈ ಹಿಂದೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಅವರು ಆ ಕೆಲಸ ಬಿಟ್ಟು ಕ್ರಿಯೇಟಿವ್ ಇಂಟೀರಿಯರ್ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ. ಸುರೇಶ್ ಅವರ ಸಾಧನೆಗೆ ಜೀ ನ್ಯೂಸ್ ಯುವರತ್ನ ಅವಾರ್ಡ್ ಸಿಕ್ಕಿದೆ.
ಸದಾ ಮೈ ಮೇಲೆ ಚಿನ್ನ ಹಾಕಿಕೊಂಡು ಸುರೇಶ್ ಓಡಾಡುತ್ತಾರೆ. ಇದೇ ಕಾರಣಕ್ಕೆ ಗೋಲ್ಡ್ ಸುರೇಶ್ ಅಂತಲೇ ಇವ್ರು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಖ್ಯಾತಿಗಳಿಸಿರೋ ಸುರೇಶ್ ಅವರು ಇನ್ಸ್ಟಾದಲ್ಲಿ ಸಾಕಷ್ಟು ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ.
ಸದಾ ಮೈಮೇಲೆ ಚಿನ್ನ ಹಾಕಿಕೊಂಡು ಸುರೇಶ್ ಓಡಾಡುತ್ತಾರೆ. ಕುತ್ತಿಗೆಯಲ್ಲಿ ಚಿನ್ನದ ಸರಗಳು, ಕೈಯಲ್ಲಿ ಚಿನ್ನದ ಬ್ರೇಸ್‌ಲೈಟ್, ಉಂಗುರಗಳು ಹೀಗೆ ಚಿನ್ನ ಅಂದ್ರೆ ಬಹಳ ಅಚ್ಚುಮೆಚ್ಚು. ಅದೇ ಕಾರಣಕ್ಕೋ ಏನೋ ಅವರನ್ನು ಗೋಲ್ಡ್ ಸುರೇಶ್ ಎಂದೇ ಕೆಲವರು ಕರೆಯುತ್ತಾರೆ. ಅದೇ ಹೆಸರಿನಲ್ಲಿ ಅವರು ಗುರ್ತಿಸಿಕೊಂಡಿದ್ದಾರೆ. ಗೋಲ್ಡ್ ಸುರೇಶ್ ಎನ್ನುವ ಹೆಸರಿನಲ್ಲೇ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಿವೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ರೀಲ್ಸ್ ವೀಡಿಯೋಗಳನ್ನು ಗೋಲ್ಡ್ ಸುರೇಶ್ ಹಂಚಿಕೊಂಡಿದ್ದಾರೆ.
ಗೋಲ್ಡ್ ಸುರೇಶ್ ಅವರು ತುಂಬಾ ಪ್ರೀತಿಯಿಂದ ನಾಯಿಯೊಂದನ್ನ ಸಾಕಿದ್ದರು. ಅದಕ್ಕೆ ಕ್ಯಾಪ್ಟನ್ ಅಂತ ಹೆಸರಿಟ್ಟಿದ್ದರು. ಸಾಕು ನಾಯಿಗೆ 45 ಗ್ರಾಂ ತೂಕದ ಚಿನ್ನದ ಸರ ಹಾಕಿ ಫೋಟೋ ಪೋಸ್ ಕೊಟ್ಟು ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ.
ಇದನ್ನೂ ಓದಿ: BBK11: ಗೋಲ್ಡ್ ಸುರೇಶ್ ಮಾತಿಗೆ ಬೆಚ್ಚಿಬಿದ್ದ ಕಿಚ್ಚ ಸುದೀಪ್; ಚಿನ್ನದ ಸರದಾರ ಹೇಳಿದ್ದೇನು?
ಸುರೇಶ್‌ಗೆ ಸಿಕ್ಕಾಪಟ್ಟೆ ಕಾರು ಕ್ರೇಜ್!
ಬಿಗ್ ಬಾಸ್ ಸೀಸನ್ 11ರ ಪ್ರೋಮೋನಲ್ಲಿ ಹೇಳಿರುವಂತೆ ಗೋಲ್ಡ್ ಸುರೇಶ್ ಸಣ್ಣವರಿದ್ದಾಗ ಬಹಳ ತರ್ಲೆಯಾಗಿದ್ದ ಸುರೇಶ್ ಅವರನ್ನು ಊರಿಂದ ದೂರ ಇಟ್ಟು ಓದಿಸಲು ಪ್ರಾರಂಭಿಸಿದರಂತೆ. ಹತ್ತನೇ ತರಗತಿ ವರೆಗೂ ಓದಿದ ಸುರೇಶ್ ಆ ನಂತರ ಊರು ಬಿಟ್ಟು ಓಡಿ ಹೋಗಿದ್ದರಂತೆ. ಆ ನಂತರ ಅಲ್ಲಲ್ಲಿ ಕೆಲಸ ಮಾಡಿದ್ದಾರೆ. ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ, ಕನ್ಸ್ಟ್ರಕ್ಷನ್ ಸೂಪರ್ವೈಸರ್ ಆಗಿದ್ದಾರೆ. ಈಗ ಭಾರಿ ಶ್ರೀಮಂತರು ಆಗಿರುವುದಾಗಿ ಹೇಳಿಕೊಂಡಿರುವ ಸುರೇಶ್, ಸಣ್ಣ ವಯಸ್ಸಿನಲ್ಲಿ ಕಾರುಗಳ ಬಗ್ಗೆ ವಿಶೇಷ ಪ್ರೀತಿ ಇತ್ತು. ಈಗ ಹಲವು ಕಾರುಗಳನ್ನು ಇಟ್ಟುಕೊಂಡಿದ್ದೇನೆ. ಚಿನ್ನದ ಬಗ್ಗೆ ನನಗೆ ವಿಶೇಷ ಪ್ರೀತಿ, ಒಂದು ಸಣ್ಣ ಲಕ್ಷ್ಮಿ ಡಾಲರ್ ಅನ್ನು ಧರಿಸಲು ಪ್ರಾರಂಭ ಮಾಡಿದೆ. ಈಗ ಎಲ್ಲ ರೀತಿಯ ಡಿಸೈನ್ನ ಚಿನ್ನ ನನ್ನ ಬಳಿ ಇದೆ ಎಂದಿದ್ದಾರೆ.
ಕಿಚ್ಚ ಸುದೀಪ್ ಶಾಕ್!
ಕೋಟ್ಯಾಂತರ ರೂಪಾಯಿ ಮೌಲ್ಯದ ಒಡವೆ ಧರಿಸಿಕೊಂಡು ಓಡಾಡುವ ಗೋಲ್ಡ್ ಸುರೇಶ್, ಸೆಕ್ಯೂರಿಟಿ ಸಲುವಾಗಿ 5-6 ಬಾಡಿಗಾರ್ಡ್ಸ್, ಗನ್ ಮ್ಯಾನ್ ಹೊಂದಿದ್ದಾರೆ. ಬಿಗ್ಬಾಸ್ ಮನೆಗೆ 4ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸುರೇಶ್ರನ್ನ ಕಂಡೊಡನೇ ಖುದ್ದು ಕಿಚ್ಚ ಸುದೀಪ್ ಶಾಕ್ ಆಗಿ ಹೋದರು. ಬಿಗ್ ಬಾಸ್ ಮನೆಯ ನರಕಕ್ಕೆ ಕಾಲಿಟ್ಟಿರುವ ಗೋಲ್ಡ್ ಸುರೇಶ್ ಅವರ 50 ಲಕ್ಷದ ಬಹುಮಾನಕ್ಕಿಂತ ವಿನ್ನರ್ ಟ್ರೋಫಿ ಗೆಲ್ಲೋ ಮಹದಾಸೆಯನ್ನು ಹೊಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ