ಸಂಗೀತಾ ಶೃಂಗೇರಿ ಜಾಗಕ್ಕೆ ಕುಂದಾಪುರದ ಬ್ರ್ಯಾಂಡ್ ಬರುತ್ತಾ?
ಈ ಬಾರಿಯ ಕನ್ನಡದ ಬಿಗ್ಬಾಸ್ಗೆ ಇವರು ಬರೋದು ಪಕ್ಕಾ
ವರ್ತೂರು ಸಂತೋಷ್ ಜಾಗವನ್ನು ರಿಪ್ಲೇಸ್ ಮಾಡೋದ್ಯಾರು?
ಇಂದು ಕನ್ನಡದ ಬಹು ನಿರೀಕ್ಷಿತ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಓಪನಿಂಗ್ ಇದೆ. ಇಂದು ಸಂಜೆ ಅಧಿಕೃತವಾಗಿ ಈ ಬಾರಿಯ ಬಿಗ್ಬಾಸ್ ಸೀಸನ್ 11ಕ್ಕೆ ಹೋಗುವ 13 ಸ್ಪರ್ಧಿಗಳು ಯಾರು ಅಂತ ಗೊತ್ತಾಗಲಿದೆ. ಹೀಗಾಗಿ ವೀಕ್ಷಕರು ಬಹಳ ಕುತೂಹಲದಿಂದ ಬಿಗ್ಬಾಸ್ ಸೀಸನ್ 11ರ ಮೇಲೆ ಕಣ್ಣು ಇಟ್ಟಿದ್ದಾರೆ.
ಇದನ್ನೂ ಓದಿ: BIGG BOSS ಸೀಸನ್ 11ಕ್ಕೆ ಹೊಸ ಟ್ವಿಸ್ಟ್.. ದೊಡ್ಮನೆಗೆ ಎಂಟ್ರಿ ಕೊಟ್ಟ ಕಂಟೆಸ್ಟಂಟ್‌ಗಳ ಪಕ್ಕಾ ಲಿಸ್ಟ್ ಇಲ್ಲಿದೆ!
ಆದರೆ ಇದೇ ಮೊದಲ ಬಾರಿಗೆ ಬಿಗ್ಬಾಸ್ ಸೀಸನ್ 11ರ ಮನೆಗೆ ಹೋಗುವ ಸ್ಪರ್ಧಿಗಳ ಬಗ್ಗೆ ಗೊತ್ತಾಗಿದೆ. ನಿನ್ನೆ ನಡೆದ ರಾಜಾರಾಣಿ ಗ್ರ್ಯಾಂಡ್ ಫಿನಾಲೆಯ ಮಧ್ಯದಲ್ಲಿ ಬಿಗ್ಬಾಸ್ ಸೀಸನ್ 11ಕ್ಕೆ ಎಂಟ್ರಿ ಕೊಡುವ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿತ್ತು. ಅದರಲ್ಲಿ ನಟಿ ಗೌತಮಿ ಜಾಧವ್, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್ ಒಟ್ಟು 4 ಸ್ಪರ್ಧಿಗಳು ಇದ್ದ ಪ್ರೋಮೋವನ್ನು ರಿಲೀಸ್ ಮಾಡಲಾಗಿತ್ತು. ಹೀಗಾಗಿ ಬಿಗ್ಬಾಸ್ ಮನೆಗೆ ಹೋಗುವ ಸ್ಪರ್ಧಿಗಳ ಹೆಸರುಗಳ ಮೇಲೆ ವೀಕ್ಷಕರು ಗಮನ ಹರಿಸುತ್ತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಸೀಸನ್ 11: ಸ್ವರ್ಗಕ್ಕೆ ಯಾರು? ನರಕದಲ್ಲಿ ನರಳಾಡೋದು ಯಾರು? ಇಲ್ಲಿದೆ ಬಿಗ್ ಅಪ್ಡೇಟ್!
ಆದರೆ, ಕಳೆದ ಸೀಸನ್ನಲ್ಲಿ ಸಖತ್ ಸದ್ದು ಮಾಡಿದ್ದ ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್, ನಮ್ರತಾ ಗೌಡ, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್ ಸೇರಿದಂತೆ ಅವರ ರೀತಿಯಲ್ಲೇ ಈ ಬಾರಿಯ ಬಿಗ್ಬಾಸ್ನಲ್ಲಿ ಯಾರು ಇರಬಹುದು ಅಂತ ವೀಕ್ಷಕರು ಅಂದಾಜಿಸುತ್ತಿದ್ದಾರೆ.
ಸಂಗೀತಾ ಶೃಂಗೇರಿ ಜಾಗದಲ್ಲಿ ಚೈತ್ರಾ ಕುಂದಾಪುರ ಇರಬಹುದು. ಏಕೆಂದರೆ ಅವರು ಸಂಗೀತಾ ಶೃಂಗೇರಿ ರೀತಿಯೇ ಫೈಯರ್ ಬ್ರ್ಯಾಂಡ್. ಹೀಗಾಗಿ ಸಂಗೀತಾ ಅವರು ಬಿಗ್ಬಾಸ್ ಮನೆಯಲ್ಲಿ ಹೇಗೆ ಸಖತ್ ಸೌಂಡ್ ಮಾಡ್ತಾ ಇದ್ದರೇ ಹಾಗೇ ಕುಂದಾಪುರ ಮೂಲದ ಚೈತ್ರಾ ಕೂಡ ಮಿಂಚಬಹುದು ಅಂತ ಅಂದಾಜಿಸಲಾಗಿದೆ.
ವಿನಯ್ ಗೌಡ ಜಾಗಕ್ಕೆ ಕಿರುತೆರೆ ನಟ ತ್ರಿವಿಕ್ರಮ್ ಇರಬಹುದು. ಏಕೆಂದರೆ ಸೇಮ್ ಟು ಸೇಮ್ ವಿನಯ್ ಗೌಡ ಅವರ ಹಾಗೇ ಇದ್ದಾರೆ ನಟ ತ್ರಿವಿಕ್ರಮ್. ಜೊತೆಗೆ ನಟ ತ್ರಿವಿಕ್ರಮ್ ಕೂಡ ವಿನಯ್ ಅವರ ಹಾಗೇ ಸಖತ್ ಜಿಮ್ ಮಾಡುತ್ತಾರೆ. ಹೀಗಾಗಿ ವಿನಯ್ ಗೌಡ ಜಾಗವನ್ನು ತ್ರಿವಿಕ್ರಮ್ ಅವರು ತುಂಬಬಹುದು ಅಂತ ಅಂದಾಜಿಸಲಾಗಿದೆ.
ತುಕಾಲಿ ಸಂತೋಷ್ ಜಾಗಕ್ಕೆ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಧನರಾಜ್ ಆಚಾರ್ಯ ಇರಬಹುದು. ಏಕೆಂದರೆ ಬಿಗ್ಬಾಸ್ ಮನೆಗೆ ಹೋದಾಗ ತುಕಾಲಿ ಸಂತೋಷ್ ಅವರು ತಮ್ಮ ಕಾಮಿಡಿ ಮೂಲಕವೇ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದರು. ಧನರಾಜ್ ಆಚಾರ್ಯ ಅವರು ಅದ್ಭುತ ಕಾಮಿಡಿ ಮ್ಯಾನರಿಸಂ ಹೊಂದಿದ್ದಾರೆ. ತುಕಾಲಿ ಸಂತೋಷ್ ಜಾಗಕ್ಕೆ ಧನರಾಜ್ ಆಚಾರ್ಯ ಮಸ್ತ್ ಮನರಂಜನೆ ನೀಡಬಹುದು ಅಂತ ಹೇಳಲಾಗಿದೆ.
ನಮ್ರತಾ ಗೌಡ ಜಾಗಕ್ಕೆ ಗೀತಾ ಸೀರಿಯಲ್ ನಟಿ ಭವ್ಯಾ ಗೌಡ ಇರಬಹುದು. ಏಕೆಂದರೆ ಭವ್ಯಾ ಗೌಡ ಕೊಂಚ ನಮ್ರತಾ ಗೌಡ ಹಾಗೇ ಸ್ಟ್ರಾಂಗ್ ಆಗಿದ್ದಾರೆ. ಹೀಗಾಗಿ ಅವರ ಜಾಗವನ್ನು ಭವ್ಯಾ ಗೌಡ ಇರಬಹುದು ಅಂತ ಹೇಳಲಾಗಿದೆ.
ಇನ್ನು, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಜಾಗಕ್ಕೆ ಈಗಾಗಲೇ ಅನೌನ್ಸ್ ಆಗಿರೋ ಗೋಲ್ಡ್ ಸುರೇಶ್ ಇರ್ತಾರೆ. ಏಕೆಂದರೆ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ವರ್ತೂರ್ ಸಂತೋಷ್ ಕೂಡ ಹೀಗೆ ಮೈ ಮೇಲೆ ಬಂಗಾರವನ್ನು ಧರಿಸಿಕೊಂಡು ಬಂದಿದ್ದರು. ಹೀಗಾಗಿ ಸೇಮ್ ಟು ಸೇಮ್ ವರ್ತೂರ್ ಸಂತೋಷ್ ರೀತಿಯಲ್ಲೇ ಗೋಲ್ಡ್ ಸುರೇಶ್ ಟಾಸ್ಕ್ ಆಡಬಹುದು ಅಂತ ಅಂದಾಜಿಸಲಾಗಿದೆ.
ಕಾರ್ತಿಕ್ ಮಹೇಶ್ ಜಾಗಕ್ಕೆ ಸ್ಯಾಂಡಲ್ವುಡ್ ನಟ ಧರ್ಮ ಕೀರ್ತಿರಾಜ್ ಬರಬಹುದು ಅಂತ ಊಹಿಸಲಾಗಿದೆ. ಏಕೆಂದರೆ ಕಾರ್ತಿಕ್ ಮಹೇಶ್ ಹಾಗೇ ನಟ ಧರ್ಮ ಕೀರ್ತಿರಾಜ್ ಜಿಮ್ ಬಾಡಿ ಹೊಂದಿದ್ದಾರೆ. ಹೀಗಾಗಿ ಧರ್ಮ ಕೀರ್ತಿರಾಜ್ ಅವರು ಕೂಡ ಟಾಸ್ಕ್ಗಳಲ್ಲಿ ಒಳ್ಳೆ ಕಮಾಲ್ ಮಾಡಬಹುದು ಅಂತ ಅಂದಾಜಿಸಲಾಗಿದೆ.
ಸದ್ಯ ಇಂದು ಸಂಜೆ ಬಿಗ್ಬಾಸ್ ಸೀಸನ್ 11ರ ಗ್ರ್ಯಾಂಡ್ ಓಪನಿಂಗ್ ಇದೆ. ಹೀಗಾಗಿ ಬಿಗ್ಬಾಸ್ ವೀಕ್ಷಕರ ಚಿತ್ತ ಗ್ರ್ಯಾಂಡ್ ಓಪನಿಂಗ್ ಮೇಲಿದೆ. ಇಂದು ಸಂಜೆ ಬಿಗ್ಬಾಸ್ ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳ ಬಗ್ಗೆ ತಿಳಿದು ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ