newsfirstkannada.com

ಡ್ರೋನ್ ಪ್ರತಾಪ್ ಕೋಪಕ್ಕೆ ತುತ್ತಾದ ತುಕಾಲಿ ಸಂತೋಷ್‌; ಬಿಗ್‌ಬಾಸ್ ಮನೆಯಲ್ಲಿ ಡಿಶುಂ, ಡಿಶುಂ; ವಿಡಿಯೋ ನೋಡಿ

Share :

24-10-2023

    ವಿಜಯದಶಮಿ ಪ್ರಯುಕ್ತ ಬಿಗ್‌ಬಾಸ್ ಮನೆಗೆ ಸ್ಪೆಷಲ್ ಗೆಸ್ಟ್ ಎಂಟ್ರಿ

    ಬಂಡಲ್ ಬಡಾಯಿ ಹಾಡಿಗೆ ಡ್ಯಾನ್ಸ್‌ ಮಾಡುವಾಗ ಇಬ್ಬರ ಫೈಟಿಂಗ್‌!

    ತುಕಾಲಿ ಸಂತೋಷ್‌ಗೆ ಹೊಡೆಯಲು ಎಷ್ಟು ದಿನದಿಂದ ಕಾಯ್ತಾ ಇದ್ದರು

ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್‌ 2ನೇ ವಾರ ಪೂರೈಸಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ವಿಜಯದಶಮಿ ಪ್ರಯುಕ್ತ ಇಂದು ಬಿಗ್‌ಬಾಸ್ ಮನೆಗೆ ಸ್ಪೆಷಲ್ ಗೆಸ್ಟ್ ಎಂಟ್ರಿ ಕೊಟ್ಟಿದ್ದು, ಸ್ಪರ್ಧಿಗಳಿಗೆ ಫುಲ್ ಮನರಂಜನೆ ನೀಡಲಾಗಿದೆ. ನಟಿ ತಾರಾ ಅನುರಾಧ ಅವರು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದು, ಬಿಗ್‌ಬಾಸ್ ಸ್ಪರ್ಧಿಗಳಲ್ಲಿ ಹೊಸ ರಂಗು ತಂದಿದ್ದಾರೆ.

ವಿಜಯದಶಮಿ ಹಬ್ಬದ ವಿಶೇಷವಾಗಿ ಬಿಗ್‌ಬಾಸ್ ಮನೆಯಲ್ಲಿ ತಾರಮ್ಮ ಎಂಟ್ರಿ ಕೊಟ್ಟಿದ್ದಾರೆ. ತಾರಾ ಅನುರಾಧ ಅವರನ್ನು ನೋಡಿದ ಸ್ಪರ್ಧಿಗಳು ಫುಲ್ ಖುಷಿಯಾಗಿದ್ದು, ಇವತ್ತು ದಸರಾ ಕಣ್ಣಾರೆ ನೋಡಿದ ಹಾಗೇ ಆಯಿತು ಎಂದು ಹೇಳಿದ್ದಾರೆ.

ನಟಿ ತಾರಾ ಅವರು ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟ ಮೇಲೆ ಏನಾದ್ರೂ ಸ್ಪೆಷಲ್ ಇರಲೇಬೇಕು ಅಲ್ವಾ. ಬಿಗ್‌ಬಾಸ್‌ ತಾರಾ ಅವರ ಅನುಪಸ್ಥಿತಿಯಲ್ಲಿ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್‌ ಒಂದನ್ನ ಕೊಡಲಾಗಿದೆ. ಸದ್ಯ ಕಲರ್ಸ್‌ ಕನ್ನಡ ರಿಲೀಸ್ ಮಾಡಿರುವ ಪ್ರೊಮೋದಲ್ಲಿ ಬಿಗ್‌ಬಾಸ್ ಒಂದು ಹಾಡನ್ನು ಪ್ಲೇ ಮಾಡುತ್ತಾರೆ. ಸ್ಪರ್ಧಿಗಳು ಆ ಹಾಡನ್ನು ಯಾರಿಗಾಗಿ ಅರ್ಪಿಸುತ್ತಾರೆ ಎಂದು ತಿಳಿಸಬೇಕು ಎನ್ನಲಾಗಿದೆ.

ಬಿಗ್‌ಬಾಸ್ ಹಾಡಿಗೆ ಸ್ಪರ್ಧಿಗಳು ಡ್ಯಾನ್ಸ್ ಮಾಡುವಾಗ ಎಲ್ಲರೂ ಸಖತ್ ಎಂಜಾಯ್ ಮಾಡಿದ್ದಾರೆ. ಇನ್ನು, ಈ ಬಾರಿಯ ಬಿಗ್‌ಬಾಸ್‌ ಶೋನಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದ್ದ ಡ್ರೋನ್ ಪ್ರತಾಪ್ ಹಾಗೂ ತುಕಾಲಿ ಸಂತೋಷ್ ಅವರಿಗೆ ಸ್ಪೆಷಲ್ ಸಾಂಗ್ ಒಂದನ್ನ ಪ್ಲೇ ಮಾಡಲಾಗಿದೆ. ಬಂಡಲ್ ಬಡಾಯಿ ಮಾದೇವ ಹಾಡಿಗೆ ಡ್ರೋನ್ ಪ್ರತಾಪ್ ಅವರು ತುಕಾಲಿ ಸಂತೋಷ್‌ಗೆ ಡ್ಯಾನ್ಸ್‌ ಮಾಡುವಾಗ ತನ್ನ ಹಳೆ ಕೋಪವನ್ನೆಲ್ಲಾ ತೀರಿಸಿಕೊಂಡಿದ್ದಾರೆ.

ಸ್ಟೇಜ್‌ ಮೇಲೆ ಡಿಶುಂ, ಡಿಶುಂ ಮಾಡುತ್ತಾ ಸಿಕ್ಕ, ಸಿಕ್ಕ ಹಾಗೆ ಗುದ್ದಿದ್ದಾರೆ. ಈ ಫೈಟಿಂಗ್ ಅನ್ನು ಗಮನಿಸಿದ ತಾರಾ ಅವರು ಇವನಿಗೆ ಎಷ್ಟು ದಿನದಿಂದ ಕಾಯ್ತಾ ಇದ್ದೆ ಇವನಿಗೆ ಹೀಗೆ ಹೊಡೆಯೋಕೆ ಅಂತಾ ಕಾಲು ಎಳೆದಿದ್ದಾರೆ. ಇವರಿಬ್ಬರ ಗುದ್ದಾಟ ನೋಡಿದ ಬಿಗ್‌ಬಾಸ್ ಸ್ಪರ್ಧಿಗಳ ಖುಷಿಯಲ್ಲಿ ತೇಲಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ರೋನ್ ಪ್ರತಾಪ್ ಕೋಪಕ್ಕೆ ತುತ್ತಾದ ತುಕಾಲಿ ಸಂತೋಷ್‌; ಬಿಗ್‌ಬಾಸ್ ಮನೆಯಲ್ಲಿ ಡಿಶುಂ, ಡಿಶುಂ; ವಿಡಿಯೋ ನೋಡಿ

https://newsfirstlive.com/wp-content/uploads/2023/10/Drone-Pratap-BiggBoss.jpg

Load More