newsfirstkannada.com

ಮಂಡ್ಯದಲ್ಲಿ ಬೈಕ್​​ ವ್ಹೀಲಿಂಗ್ ಹುಚ್ಚಾಟ; ಕಾರಿಗೆ ಗುದ್ದಿ ಆಸ್ಪತ್ರೆ ಸೇರಿದ ಮೂವರು ಯುವಕರು

Share :

30-07-2023

  ಮಂಡ್ಯದಲ್ಲೂ ಯುವಕರಿಂದ ಬೈಕ್ ವ್ಹೀಲಿಂಗ್ ಹುಚ್ಚಾಟ!

  ಕಾರಿಗೆ ಡಿಕ್ಕಿ ಹೊಡೆದು ಆಸ್ಪತ್ರೆ ಸೇರಿದ ನಾಲ್ವರು​​ ಯುವಕರು

  ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲು

ಮಂಡ್ಯ: ಬೈಕ್ ವ್ಹೀಲಿಂಗ್ ಮೂಲಕ ಹುಚ್ಚಾಟ ಮೆರೆಯುವ ಯುವಕರ ಸಂಖ್ಯೆ ದಿನೇ ದಿನೇ ಹೆಚ್ಚಾಗಿದ್ದು, ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುವ ಜೊತೆಗೆ ಬೇರೆಯವರ ಪ್ರಾಣಕ್ಕೂ ತೊಂದರೆ ಮಾಡಿದ್ದಾರೆ.‌

ಮಂಡ್ಯದಲ್ಲೂ ಬೈಕ್ ವ್ಹೀಲಿಂಗ್ ಮಾಡೋ ಯುವಕರು ಹುಚ್ಚಾಟ ಮಾಡಿ ಇದೀಗ ಆಸ್ಪತ್ರೆ ಸೇರಿದ್ದಾರೆ. ಮದ್ದೂರಿನ ಶಿಂಷಾ ನದಿಯ ಸಮೀಪ ಮೈಸೂರು- ಬೆಂಗಳೂರು ಸರ್ವಿಸ್ ರಸ್ತೆಯಲ್ಲಿ ಎರಡು ಬೈಕ್​ಗಳಲ್ಲಿ ಬಂದ ಸೈಯ್ಯದ್​​ ಶೋಹೆಬ್​​, ಅಯೂಬ್ ಖಾನ್, ಸಲ್ಮಾನ್ ಖಾನ್, ಸೈಯ್ಯದ್​​ ಮಜಾಸ್ ವ್ಹೀಲಿಂಗ್ ಮಾಡುತ್ತಿದ್ದರಂತೆ. ಈ ವೇಳೆ ಬೈಕ್ ಮುಂದೆ ಹೋಗುತ್ತಿದ್ದ ಇನೋವಾ ಕಾರಿಗೆ ಹಿಂಬದಿಯಿಂದ ಸೈಯ್ಯದ್ ಶೋಹೆನ್ ಗುದ್ದಿದ್ದಾನೆ.

ಗುದ್ದಿದ ರಭಸಕ್ಕೆ ಬೈಕ್​ಗೆ ಡ್ಯಾಮೇಜ್ ಆಗಿ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.‌ ಈ ಸಂಬಂಧ ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಬೈಕ್ ವ್ಹೀಲಿಂಗ್ ನಡೆಸಿ ಹುಚ್ಚಾಟ ನಡೆಸುತ್ತಿರುವ ಇಂತಹ ಯುವಕರಿಂದ ಬೇರೆಯವರ ಪ್ರಾಣಕ್ಕೆ ಸಂಚಕಾರ ಆಗುತ್ತಿರುವುದು ಮಾತ್ರ ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯದಲ್ಲಿ ಬೈಕ್​​ ವ್ಹೀಲಿಂಗ್ ಹುಚ್ಚಾಟ; ಕಾರಿಗೆ ಗುದ್ದಿ ಆಸ್ಪತ್ರೆ ಸೇರಿದ ಮೂವರು ಯುವಕರು

https://newsfirstlive.com/wp-content/uploads/2023/07/bike-1-1.jpg

Load More