newsfirstkannada.com

ಕ್ರೀಡಾ ಜಗತ್ತಿನಲ್ಲಿ ಹೆಸರು ಮಾಡಬೇಕು ಎಂದಿದ್ದ ಕನ್ನಡಿಗ; ಬೈಕ್​​ ರೇಸ್​ನಲ್ಲೇ ದುರಂತ ಅಂತ್ಯ ಕಂಡ!

Share :

07-08-2023

    6ನೇ ವಯಸ್ಸಿನಲ್ಲೇ ಬೈಕ್‌ ಓಡಿಸುವುದನ್ನು ಆರಂಭಿಸಿದ್ದ ಶ್ರೇಯಸ್​

    ಪ್ರತಿಭಾನ್ವಿತ ಯುವ ರೇಸರ್‌ ಶ್ರೇಯಸ್​ಗೆ ಒಲಿದಿವೆ ಹಲವು ಪ್ರಶಸ್ತಿ

    2022ರಲ್ಲಿ ಮೊದಲ ಬಾರಿ ಶ್ರೇಯಸ್‌ ರಾಷ್ಟ್ರೀಯ ಮಟ್ಟದಲ್ಲಿ ಸದ್ದು

ಬೆಂಗಳೂರು: ಭಾರತೀಯ ಮೋಟಾರ್‌ ಸ್ಪೋರ್ಟ್ಸ್‌ ಜಗತ್ತಿನಲ್ಲಿ ಭವಿಷ್ಯದ ತಾರೆ ಎನಿಸಿದ್ದ ಶ್ರೇಯಸ್‌ ಹರೀಶ್‌, ಚೆನ್ನೈನಲ್ಲಿ ನಡೆದ ಬೈಕ್ ರೇಸ್​​ನಲ್ಲಿ ದುರಂತ ಅಂತ್ಯ ಕಂಡಿದ್ದಾನೆ. ಮದರಾಸ್‌ ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ನ ಮದರಾಸ್‌ ರೇಸ್‌ ಸರ್ಕಿಟ್‌ನಲ್ಲಿ ನಡೆದ ಎಫ್‌ಎಂಎಸ್‌ಸಿಐ ಇಂಡಿಯನ್‌ ನ್ಯಾಷನಲ್ ಮೋಟಾರ್‌ ಸೈಕಲ್‌ ರೇಸಿಂಗ್‌ ಚಾಂಪಿಯನ್‌ಷಿಪ್‌ ಸ್ಪರ್ಧೆಯಲ್ಲಿ ಯಾರೂ ನಿರೀಕ್ಷಿಸಿದ ದುರ್ಘಟನೆ ನಡೆದಿದೆ. ಬೆಂಗಳೂರು ಮೂಲದ 13 ವರ್ಷದ ಯುವ ರೇಸರ್‌ ಶ್ರೇಯಸ್‌ ಹರೀಶ್‌, ಟ್ರ್ಯಾಕ್‌ ರೇಸ್‌ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾನೆ.

View this post on Instagram

A post shared by Formula Tamil (@f1tamil)

ಯಾರು ಈ ಶ್ರೇಯಸ್​?

  • 2010ರ ಜು.26ರಂದು ಬೆಂಗಳೂರಿನಲ್ಲಿ ಶ್ರೇಯಸ್‌ ಹರೀಶ್‌ ಜನನ
  • 6ನೇ ವಯಸ್ಸಿನಲ್ಲೇ ಬೈಕ್‌ ಓಡಿಸುವುದನ್ನು ಆರಂಭಿಸಿದ್ದ ಶ್ರೇಯಸ್​
  • ಪ್ರತಿಭಾನ್ವಿತ ಯುವ ರೇಸರ್‌ ಶ್ರೇಯಸ್​ಗೆ ಒಲಿದಿವೆ ಹಲವು ಪ್ರಶಸ್ತಿ
  • 2022ರಲ್ಲಿ ಮೊದಲ ಬಾರಿ ಶ್ರೇಯಸ್‌ ರಾಷ್ಟ್ರೀಯ ಮಟ್ಟದಲ್ಲಿ ಸದ್ದು
  • IMF ಮಿನಿ ಜಿಪಿ ವರ್ಲ್ಡ್‌ ಸೀರೀಸ್‌ನಲ್ಲಿ ಟ್ರೋಫಿ ಎತ್ತಿ ಹಿಡಿದಿದ್ದ
  • ಸ್ಪೇನ್‌ನಲ್ಲಿ ನಡೆದ ಮಿನಿ ಜಿಪಿ ಸ್ಪರ್ಧೆಯ ಫೈನಲ್‌ನಲ್ಲಿ ಗಮನ ಸೆಳೆದಿದ್ದ
  • ಭಾರತವನ್ನು ಪ್ರತಿನಿಧಿಸಿದ್ದ ಶ್ರೇಯಸ್ 2 ಸುತ್ತಿನ ರೇಸ್ನಲ್ಲಿ​​ 4ನೇ ಸ್ಥಾನ
  • ಅಂತಾರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಛಾಪು ಮೂಡಿಸಿದ್ದರು
  • 2023ರ ಸಾಲಿನ TVS ಒನ್‌ ಮೇಕ್‌ ಚಾಂಪಿಯನ್‌ಷಿಷ್​ಗೆ ಎಂಟ್ರಿ
  • ಮಲೇಷ್ಯಾ ಸೂಪರ್‌ಬೈಕ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ

View this post on Instagram

A post shared by Anil Reddy💫 (@mr_roadhunter_9779)

ಶನಿವಾರ 5ನೇ ಸುತ್ತಿನ ರೇಸ್‌ನ ಮೊದಲ ತಿರುವಿನಲ್ಲೇ ಸಂಭವಿಸಿದ ಅಪಘಾತದಲ್ಲಿ ಶ್ರೇಯಸ್‌ ತಲೆಗೆ ಪೆಟ್ಟುಬಿದ್ದಿತ್ತು. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಅಷ್ಟರಲ್ಲಾಗಲೇ ಶ್ರೇಯಸ್​ ಹರೀಶ್​ನ ಉಸಿರು ನಿಂತಿತ್ತು.. ಈ ದುರಂತದ ಬಳಿಕ ಚಾಂಪಿಯನ್‌ಷಿಪ್‌ನ ಉಳಿದ ರೇಸ್‌ಗಳನ್ನು ಕೂಡ ರದ್ದುಪಡಿಸಲಾಯಿತು.

ಅಮೋಘ ಪ್ರತಿಭೆ ಮೂಲಕ ಶ್ರೇಯಸ್‌ ತಮ್ಮದೇ ಛಾಪು ಮೂಡಿಸಿದ್ದ. ಯುವ ಹಾಗೂ ಪ್ರತಿಭಾನ್ವಿತ ರೇಸರ್‌ನ ಕಳೆದುಕೊಂಡಿರುವುದು ನಿಜಕ್ಕೂ ದುರಂತದ ಸಂಗತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ರೀಡಾ ಜಗತ್ತಿನಲ್ಲಿ ಹೆಸರು ಮಾಡಬೇಕು ಎಂದಿದ್ದ ಕನ್ನಡಿಗ; ಬೈಕ್​​ ರೇಸ್​ನಲ್ಲೇ ದುರಂತ ಅಂತ್ಯ ಕಂಡ!

https://newsfirstlive.com/wp-content/uploads/2023/08/Harish-Shreyas.jpg

Load More