ಅಪಘಾತ ಮಾಡಿ ಪರಾರಿಯಾಗಿರುವ ವಾಹನ ಸವಾರ
ಪೊಲೀಸರಿಂದ ಆರೋಪಿ ಬಂಧನಕ್ಕೆ ಕಾರ್ಯಾಚರಣೆ
ಹಿಂಬದಿಯಿಂದ ವೇಗವಾಗಿ ಬಂದ ವಾಹನ ಬೈಕ್ಗೆ ಡಿಕ್ಕಿ
ಬೆಂಗಳೂರು: ಕೆಂಗೇರಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಹಿಟ್ ಅಂಡ್ ರನ್ ನಡೆದಿದೆ. ಅಪಘಾತ ಪ್ರಕರಣದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
37 ವರ್ಷದ ಪ್ರಸನ್ನ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ. ತುಮಕೂರು ರಸ್ತೆ ಕಡೆಯಿಂದ ಹೊಸೂರು ರಸ್ತೆ ಕಡೆ ಬೈಕ್ನಲ್ಲಿ ಪ್ರಸನ್ನ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದಿದ್ದ ವಾಹನ ಬೈಕ್ನ ಹ್ಯಾಂಡಲ್ಗೆ ಡಿಕ್ಕಿ ಹೊಡೆದಿದೆ.
ಬೈಕ್ನಿಂದ ಕೆಳಗೆ ಬಿದ್ದಿದ್ದ ಪ್ರಸನ್ನ ಮೇಲೆ ವಾಹನದ ಚಕ್ರ ಹರಿದಿದೆ. ಬಳಿಕ ವಾಹನ ಸಮೇತ ಆರೋಪಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಕೆಂಗೇರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ