newsfirstkannada.com

ಟಿಟಿ ವಾಹನ, ಬೈಕ್ ನಡುವೆ ಭೀಕರ ಅಪಘಾತ; ಓರ್ವ ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

Share :

02-08-2023

    ಟಿಟಿ ವಾಹನ ಮತ್ತು ದ್ವಿಚಕ್ರ ವಾಹನಗಳ ಮಧ್ಯೆ ಭೀಕರ ಅಪಘಾತ

    ಬೇಲೂರು ಹಳೇಬೀಡು ಹೋಬಳಿ ಕಲ್ಲಹಳ್ಳಿ ಫಾರೆಸ್ಟ್ ಬಳಿ ದುರ್ಘಟನೆ

    ಟಿಟಿ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದ ಹಳೇಬೀಡು ಪೊಲೀಸರು

ಹಾಸನ: ಟಿಟಿ ವಾಹನ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಸವಾರ ಸಾವನ್ನಪ್ಪಿರೋ ಘಟನೆ ಬೇಲೂರು ತಾಲೂಕಿನ ಕಲ್ಲಹಳ್ಳಿ ಫಾರೆಸ್ಟ್ ಬಳಿ ನಡೆದಿದೆ. ಸುರಪುರ ಗ್ರಾಮದ ಶರತ್ (20) ಮೃತ ಯುವಕ.

ಮೃತ ಯುವಕ ಬೈಕ್‌ನಲ್ಲಿ ಬೇಲೂರಿನಿಂದ ಹಳೇಬೀಡು ಕಡೆಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಟಿಟಿ ವಾಹನ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಓರ್ವ ಸವಾರ ಶರತ್ ಸಾವನ್ನಪ್ಪಿದ್ದು, ವೀರೇಶ್ ಎಂಬಾತನಿಗೆ ಗಂಭೀರವಾಗಿ ಗಾಯಗಳಾಗಿವೆ. ಕೂಡಲೇ ಆತನನ್ನು ಹಾಸನದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಹಳೇಬೀಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಟಿಟಿ ವಾಹನ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿಟಿ ವಾಹನ, ಬೈಕ್ ನಡುವೆ ಭೀಕರ ಅಪಘಾತ; ಓರ್ವ ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

https://newsfirstlive.com/wp-content/uploads/2023/08/accident-4.jpg

Load More