newsfirstkannada.com

ವೀಲ್ಹಿಂಗ್​ ಮಾಡುತ್ತಾ ಯುವತಿಯರಿಗೆ ಗುದ್ದಿದ ಬೈಕ್​; ಇಬ್ಬರು ಗಂಭೀರ

Share :

29-06-2023

    ಹಾಸನದಲ್ಲಿ ವೀಲ್ಹಿಂಗ್​ ಪುಂಡರ ಅಟ್ಟಹಾಸ

    ರಸ್ತೆ ಬದಿ ನಡೆಯುತ್ತಿದ್ದ ಯುವತಿಯರಿಗೆ ಗುದ್ದಿದ ಬೈಕ್​

    ಬೈಕ್​ ಸವಾರನಿಗೆ ಸಾರ್ವಜನಿಕರಿಂದ ಬಿತ್ತು ಸರಿಯಾದ ಗೂಸಾ

ಹಾಸನ: ಸಂಚಾರಿ ಪೊಲೀಸರು ಎಷ್ಟೇ ಬಿಸಿ ಮುಟ್ಟಿಸಿದರು ಬೈಕ್ ವೀಲ್ಹಿಂಗ್ ಮಾಡುವವರ ಸಂಖ್ಯೆ ಏನೂ ಕಡಿಮೆಯಾಗುತ್ತಿಲ್ಲ. ಅಂದಹಾಗೆಯೇ, ಹಾಸನದಲ್ಲಿ ಬೈಕ್ ವೀಲ್ಹಿಂಗ್ ಮಾಡುವ ಪುಂಡರ ಅಟ್ಟಹಾಸ ಜೋರಾಗಿದ್ದು, ವೀಲ್ಹಿಂಗ್ ಮಾಡುತ್ತಿದ್ದ ವೇಳೆ ಬೈಕ್​ ಯುವತಿಯರಿಗೆ ಗುದ್ದಿದ ಘಟನೆ ಬೆಳಕಿಗೆ ಬಂದಿದೆ.

ನಗರದ ಸಾಲಗಾಮೆ ರಸ್ತೆಯ ಕನ್ನಡ ಸಾಹಿತ್ಯ ಪರಿಷತ್ ಭವನದ ಎದುರು ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಪಲ್ಸರ್​ ಬೈಕ್​ನಲ್ಲಿ ಶಾಕೀರ್  ಮತ್ತು ಆತನ ಸ್ನೇಹಿತ ವೀಲ್ಹಿಂಗ್ ಮಾಡಿಕೊಂಡು ಬಂದಿದ್ದಾರೆ. ಈ ವೇಳೆ ರಸ್ತೆ ಬದಿ ನಡೆಯುತ್ತಿದ್ದ ಇಬ್ಬರು ಯುವತಿಯರಿಗೆ ಗುದ್ದಿದ್ದಾರೆ. ಗುದ್ದಿದ ಪರಿಣಾಮ ಯುವತಿಯರು ಗಂಭೀರ ಗಾಯಗೊಂಡಿದ್ದಾರೆ.

ಬೈಕ್​ ವೀಲ್ಹಿಂಗ್​ನಿಂದಾಗಿ ಪಾದಚಾರಿಗಳಾದ ಭೂಮಿಕಾ, ಸಿಂಚನ ಎಂಬ ಯುವತಿಯರಿಗೆ ಗಂಭೀರ ಗಾಯವಾಗಿದೆ. ಈ ಪ್ರದೇಶ ಜನನಿಬಿಡವಾಗಿದ್ದು, ವೀಲ್ಹಿಂಗ್ ಮಾಡಿಕೊಂಡು ಬರುವ ಜೋಶ್​​ನಲ್ಲಿ ಪುಂಡರು ಗುದ್ದಿದ್ದಾರೆ. ಭೂಮಿಕಾ ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಬೆಂಗಳೂರಿಗೆ ನಿಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನು ಅಪಘಾತದ ಬಳಿಕ ಶಾಕೀರ್ ಹಾಗೂ ಆತನ ಸ್ನೇಹಿತನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಟ್ಟೆ ಬಿಚ್ಚಿ ಗೂಸಾ ಕೊಟ್ಟಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೀಲ್ಹಿಂಗ್​ ಮಾಡುತ್ತಾ ಯುವತಿಯರಿಗೆ ಗುದ್ದಿದ ಬೈಕ್​; ಇಬ್ಬರು ಗಂಭೀರ

https://newsfirstlive.com/wp-content/uploads/2023/06/Bike-Wheeling.jpg

Load More