ಟೋಲ್ ಸಿಬ್ಬಂದಿಯ ಮೇಲೆ ಬೈಕ್ ಸವಾರನಿಂದ ತೀವ್ರ ಹಲ್ಲೆ
ಪೊಲೀಸ್ ಅಂತ ಹೇಳಿ ಟೋಲ್ ಸಿಬ್ಬಂದಿ ಮೇಲೆ ಗಲಾಟೆ
ಬೆಂಗಳೂರು, ಹೊಸೂರು ಸಿಟಿ ಟೋಲ್ ಬಳಿ ಘಟನೆ..!
ಬೆಂಗಳೂರು: ಬೈಕ್ ಮೇಲಿದ್ದ ಈತ ದಿಢೀರ್ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆ ನಡೆದಿದ್ದು ಮತ್ತೆಲ್ಲೂ ಅಲ್ಲ, ಬದಲಿಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ BETPL ಎಲಿವೇಟೆಡ್ ಟೋಲ್ ಬಳಿ. ಇದಕ್ಕೆ ಕಾರಣ ಟೋಲ್ ಕಟ್ಟುವಂತೆ ಸಿಬ್ಬಂದಿ ಹೇಳಿದ್ದು.
ಟೋಲ್ ಸಿಬ್ಬಂದಿ ಪವನ್ ಕುಮಾರ್ ಎಂಬಾತ ಬೈಕೊಂದನ್ನ ತಡೆದು ಟೋಲ್ ಹಣ ಕಟ್ಟುವಂತೆ ಕೇಳಿದ್ದಾನೆ. ಇದ್ರಿಂದ ಕೋಪಗೊಂಡ ಬೈಕ್ ಸವಾರ ನಾನು ಪೊಲೀಸ್, ನನ್ನ ಹತ್ರಾನೇ ಹಣ ಕೇಳ್ತೀಯಾ ಅಂತ ಆವಾಜ್ ಹಾಕಿದ್ದಾನೆ. ಆಗ ಟೋಲ್ ಸಿಬ್ಬಂದಿ ಪೊಲೀಸ್ ಐಡಿ ಕಾರ್ಡ್ ತೋರಿಸುವಂತೆ ಕೇಳಿದ್ದಾನೆ. ಅದಕ್ಕೆ ಕೋಪಗೊಂಡ ಬೈಕ್ ಸವಾರ ಇಳಿದು ಬಂದು ಹಲ್ಲೆ ಮಾಡಿ ಹೆಲ್ಮೆಟ್ನಿಂದ ಮಾರಣಾಂತಿಕವಾಗಿ ಹೊಡೆದಿದ್ದಾನೆ.
ಇನ್ನು, ಘಟನೆಯಲ್ಲಿ ಟೋಲ್ ಸಿಬ್ಬಂದಿ ಪವನ್ ಕುಮಾರ್ಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ