newsfirstkannada.com

‘ವಿಶ್ವಕ್ಕೆ ಭಾರತವೇ ಮಾದರಿ, ಭಾರತವೇ ಭರವಸೆ’- ದೇಶದ ಪ್ರಗತಿ ಕೊಂಡಾಡಿದ ಬಿಲ್ ಗೇಟ್ಸ್‌

Share :

25-02-2023

    ಭಾರತವು ಭವಿಷ್ಯದ ಭರವಸೆಯನ್ನು ನೀಡುತ್ತದೆ-ಬಿಲ್‌ ಗೇಟ್ಸ್‌

    ಮುಂದಿನ ವಾರ ಭಾರತಕ್ಕೆ ಬರಲಿರುವ ಬಿಲ್‌ ಗೇಟ್ಸ್‌

    ಭಾರತದಲ್ಲಿನ ಆರೋಗ್ಯ ಸೇವೆಗಳ ಬಗ್ಗೆ ಹೊಗಳಿದ ಬಿಲಿಯನೇರ್

ಕ್ಯಾಲಿಫೋರ್ನಿಯಾ: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ಬಿಲಿಯನೇರ್ ಬಿಲ್‌ ಗೇಟ್ಸ್‌ ಭಾರತವನ್ನು ಹಾಡಿ ಹೊಗಳಿದ್ದಾರೆ. ಭವಿಷ್ಯದಲ್ಲಿ ಭಾರತ ಭರವಸೆ ಮೂಡಿಸಿರುವ ಅತ್ಯಂತ ಪ್ರಮುಖ ದೇಶವಾಗಿದೆ. ಭಾರತ ಯಾವುದೇ ದೊಡ್ಡ, ದೊಡ್ಡ ಸವಾಲುಗಳನ್ನು ನಿಭಾಯಿಸೋ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ.

ಇದನ್ನೂ ಓದಿ: ಬೈಡನ್ ಉಕ್ರೇನ್ ಭೇಟಿ ಬೆನ್ನಲ್ಲೇ ಅಮೆರಿಕಾಗೆ ಪುಟಿನ್ ಕೌಂಟರ್​.. ಜಿನ್​​ ಪಿಂಗ್ ಸ್ವಾಗತಕ್ಕೆ ರಷ್ಯಾ ಸಿದ್ಧತೆ
ಭಾರತ ಇಡೀ ವಿಶ್ವಕ್ಕೆ ಮಾದರಿಯಾದ ದೇಶ. ಜಗತ್ತು ಅನೇಕ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಭಾರತ ಅದನ್ನ ಪರಿಹರಿಸೋ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನ ಸಾಬೀತುಪಡಿಸಿದೆ. ಹೀಗಾಗಿ ಭಾರತವು ಭವಿಷ್ಯದ ಭರವಸೆಯನ್ನು ನೀಡುತ್ತದೆ ಎಂದು ಬಿಲ್ ಗೇಟ್ಸ್‌ ಹೇಳಿದ್ದಾರೆ.  ಮುಂದಿನ ವಾರ ಬಿಲ್‌ ಗೇಟ್ಸ್ ಭಾರತಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ತನ್ನ “ಗೇಟ್ಸ್‌ ನೋಟ್ಸ್‌” ಅನ್ನೋ ಬ್ಲಾಗ್‌ನಲ್ಲಿ ಬಿಲ್‌ ಗೇಟ್ಸ್‌ ಭಾರತದ ಪ್ರಗತಿ ಮತ್ತು ಅಭಿವೃದ್ಧಿಯ ವೇಗವನ್ನ ಕೊಂಡಾಡಿದ್ದಾರೆ. ನಾನು ಭಾರತಕ್ಕೆ ಭೇಟಿ ನೀಡಲು ಅತ್ಯಂತ ಉತ್ಸುಕನಾಗಿದ್ದೇನೆ. ಭಾರತದ ಆವಿಷ್ಕಾರ, ನವ ಉದ್ಯಮಿಗಳು ಅತ್ಯಂತ ದೊಡ್ಡ ಸಮಸ್ಯೆಗಳನ್ನು ಬಗೆಹರಿಸೋ ಕೆಲಸ ಮಾಡುತ್ತಿದ್ದಾರೆ. ಹವಮಾನ ವೈಪರೀತ್ಯ, ಆರೋಗ್ಯ ಮತ್ತು ಹಸಿವು ನಿರ್ಮೂಲನೆಯ ಸಮಸ್ಯೆ ಬಗೆಹರಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ.

ಇದನ್ನೂ ಓದಿ: ಸಾವು ಗೆದ್ದ 20 ತಿಂಗಳ ಕಂದ! 3 ಗಂಟೆ ಉಸಿರು ನಿಲ್ಲಿಸಿ ಯಮಲೋಕ ಸುತ್ತಿ ಬಂದಿದ್ದ ಈ ಪುಟಾಣಿ
ಭಾರತವು ಪೋಲಿಯೊವನ್ನು ನಿರ್ಮೂಲನೆ ಮಾಡಿದೆ. HIV ಸೋಂಕಿನ ಹರಡುವಿಕೆಯನ್ನು ಕಡಿಮೆ ಮಾಡಿದೆ. ಬಡತನ, ಶಿಶುಗಳ ಮರಣದ ಪ್ರಮಾಣವನ್ನು ಕಡಿಮೆ ಮಾಡಿದೆ. ಆರೋಗ್ಯ, ಸ್ವಚ್ಛತೆಗೆ ಅತಿ ಹೆಚ್ಚಿನ ಆದ್ಯತೆ ನೀಡಿದೆ. ಇದರ ಜೊತೆಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲು ಭಾರತ ಹೊರಟಿದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. ಮಾಧ್ಯಮದಲ್ಲಿ ಪ್ರಕಟವಾದ ಬಿಲ್‌ ಗೇಟ್ಸ್ ಅವರ ಬ್ಲಾಗ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯವು ಹಂಚಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ವಿಶ್ವಕ್ಕೆ ಭಾರತವೇ ಮಾದರಿ, ಭಾರತವೇ ಭರವಸೆ’- ದೇಶದ ಪ್ರಗತಿ ಕೊಂಡಾಡಿದ ಬಿಲ್ ಗೇಟ್ಸ್‌

https://newsfirstlive.com/wp-content/uploads/2023/02/New-Project-2023-02-23T120408.568.jpg

Load More