newsfirstkannada.com

ಅದಿತಿ ಆರ್ಯರನ್ನು ವರಿಸಿದ ಬಿಲಿಯನೇರ್ ಬ್ಯಾಂಕರ್ ಜಯ್‌ ಕೋಟಕ್; ಯಾರು ಈ ಮಿಸ್ ಇಂಡಿಯಾ?

Share :

10-11-2023

    ಬಿಲಿಯನೇರ್ ಉದಯ್ ಕೋಟಕ್ ಅವರ ಪುತ್ರ ಜಯ್ ಕೋಟಕ್

    ಫೆಮಿನಾ ಮಿಸ್ ಇಂಡಿಯ್ ಕಿರೀಟ ಮುಡಿಗೇರಿಸಿಕೊಂಡ ಅದಿತಿ ಆರ್ಯ

    ಸದ್ದಿಲ್ಲದೇ ಆಗಸ್ಟ್ 2022ರಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು

ಮುಂಬೈ: ಬಿಲಿಯನೇರ್ ಬ್ಯಾಂಕರ್ ಉದಯ್ ಕೋಟಕ್ ಅವರ ಪುತ್ರ ಜಯ್ ಕೋಟಕ್ ತನ್ನ ಬಹುಕಾಲದ ಗೆಳತಿ ಅದಿತಿ ಆರ್ಯರನ್ನು ವರಿಸಿದ್ದಾರೆ. ಮುಂಬೈನ ಜಿಯೋ ಕನ್ವೆನ್ಷನ್‌ ಸೆಂಟರ್‌ನಲ್ಲಿ ಅದ್ಧೂರಿ ಕಲ್ಯಾಣ ನೆರವೇರಿದೆ.

ಜಯ್ ಕೋಟಕ್ ಹಾಗೂ ಅದಿತಿ ಆರ್ಯ ಮದುವೆಗೆ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿಯಾಗಿದ್ದರು. ಜಯ್ ಕೋಟಕ್ ಮದುವೆಯ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಿಲಿಯನೇರ್ ಅದ್ಧೂರಿ ಮದುವೆಯ ಫೋಟೋಗಳು ವೈರಲ್ ಆಗಿದ್ದು, ಯಾರು ಈ ಅದಿತಿ ಆರ್ಯ ಅನ್ನೋ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.

ಅದಿತಿ ಆರ್ಯ ಅವರು 2015ರಲ್ಲಿ ಫೆಮಿನಾ ಮಿಸ್ ಇಂಡಿಯ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಚೀನಾದಲ್ಲಿ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲೂ ಅದಿತಿ ಆರ್ಯ ಭಾರತವನ್ನು ಪ್ರತಿನಿಧಿಸಿದ್ದಾರೆ. 30 ವರ್ಷದ ಅದಿತಿ ಆರ್ಯ ಛತ್ತೀಸ್‌ಗಢ ಮೂಲದವರಾಗಿದ್ದು, ಸಿನಿಮಾ ನಿರ್ದೇಶಕ ಪುರಿ ಜಗನ್ನಾಥ್ ಅವರ ಇಸ್ಮ್‌ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 2021 ರಲ್ಲಿ ಬಿಡುಗಡೆಯಾದ ರಣವೀರ್ ಸಿಂಗ್ ಅಭಿನಯದ 83 ಸಿನಿಮಾದಲ್ಲೂ ಅದಿತಿ ಆರ್ಯ ಅಭಿನಯಿಸಿದ್ದಾರೆ.

ಪ್ಯಾರಿಸ್‌ ಐಫೆಲ್ ಟವರ್‌ನ ಮುಂದೆ ಜಯ್ ಕೋಟಕ್ ಮತ್ತು ಅದಿತಿ ಆರ್ಯ ಪೋಸ್ ಕೊಟ್ಟ ಫೋಟೋ ವೈರಲ್ ಆದ ಬಳಿಕ ಇವರಿಬ್ಬರ ಲವ್ ಕಹಾನಿ ಬಯಲಾಗಿತ್ತು. ಇವರಿಬ್ಬರು ಸದ್ದಿಲ್ಲದೇ ಆಗಸ್ಟ್ 2022 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅದಿತಿ ಆರ್ಯರನ್ನು ವರಿಸಿದ ಬಿಲಿಯನೇರ್ ಬ್ಯಾಂಕರ್ ಜಯ್‌ ಕೋಟಕ್; ಯಾರು ಈ ಮಿಸ್ ಇಂಡಿಯಾ?

https://newsfirstlive.com/wp-content/uploads/2023/11/Jay-Kotak-Aditi.jpg

Load More