ಸಾಲಿಸಿಟರ್ ನಾದರ್ ಮೋದಿಯವರ ಮಗಳು ನವಾಜ್ ಮೋದಿ
ಪತ್ನಿ ಜತೆಗಿನ 32 ವರ್ಷಗಳ ಸುಂದರ ಸಂಬಂಧಕ್ಕೆ ನೋವಿನ ವಿದಾಯ
ಹೆಂಡತಿ ಜತೆ ಸಂಬಂಧ ಕಡಿದುಕೊಳ್ಳುತ್ತಿರುವುದೇಕೆ ರೇಮಂಡ್ ಚೇರ್ಮನ್
ಪ್ರತಿಷ್ಠಿತ ಕಂಪನಿ ರೇಮಂಡ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಅವರು ತನ್ನ ಪತ್ನಿಗೆ ಡಿವೋರ್ಸ್ ನೀಡುವುದಾಗಿ ಎಕ್ಸ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಈ ದೀಪಾವಳಿಯು ಈ ಹಿಂದಿನ ದೀಪಾವಳಿಯಂತೆ ಇರುವುದಿಲ್ಲ ಎಂದು ಹೇಳುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಗೌತಮ್ ಸಿಂಘಾನಿಯಾ (58) ಅವರು ತನ್ನ ಪತ್ನಿ ನವಾಜ್ ಮೋದಿಯವರೊಂದಿಗಿನ 32 ವರ್ಷಗಳ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ. ಪತ್ನಿ ನವಾಜ್ ಮೋದಿ ಸಾಲಿಸಿಟರ್ ನಾದರ್ ಮೋದಿಯವರ ಪುತ್ರಿಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇನ್ಮುಂದೆ ನವಾಜ್ ಮೋದಿ ಹಾಗೂ ನಾನು ವಿಭಿನ್ನ ಹಾದಿಯಲ್ಲಿ ಸಾಗುತ್ತೇವೆ. ಆದರೆ ಇಬ್ಬರ ಮಕ್ಕಳ ಜೀವನ ಇನ್ನಷ್ಟು ಸುಂದರವಾಗಿ ಇರುವಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
— Gautam Singhania (@SinghaniaGautam) November 13, 2023
ಬದ್ಧತೆ, ಸಂಕಲ್ಪ, ನಂಬಿಕೆಯೊಂದಿಗೆ ಇಷ್ಟು ವರ್ಷ ದಂಪತಿಯಾಗಿ ಒಟ್ಟಿಗೆ ಇದ್ದೆವು. ಪೋಷಕರಾಗಿಯು ಯಾವಾಗಲೂ ಒಬ್ಬರಿಗೊಬ್ಬರು ಉತ್ತಮ ರೀತಿಯಲ್ಲಿ ಜೀವನ ನಡೆಸಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ವದಂತಿಗಳು ನಮ್ಮಿಬ್ಬರನ್ನು ಸಾಕಷ್ಟು ನೋಯಿಸಿವೆ. ನಮ್ಮ ಜೀವನವನ್ನು ಸುತ್ತುವರೆದಿರುವ ಗಾಸಿಪ್ಗಳು ಚೆನ್ನಾಗಿರಲಿಲ್ಲ. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ರೇಮಂಡ್ ಕಂಪನಿ ಚೇರ್ಮನ್ ಗೌತಮ್ ಸಿಂಘಾನಿಯಾ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ