newsfirstkannada.com

ದೇಶಾದ್ಯಂತ ಬಿಪರ್‌ಜಾಯ್ ಚಂಡಮಾರುತದ ಎಫೆಕ್ಟ್​​.. ಮುಂದಿನ 24 ಗಂಟೆ ಭಾರೀ ಮಳೆ; ಕಟ್ಟೆಚ್ಚರ!

Share :

12-06-2023

    ಗುಜರಾತ್​, ಮಹಾರಾಷ್ಟ್ರದಲ್ಲಿ ಬಿಪರಜಾಯ್ ಸೈಕ್ಲೋನ್ ಆರ್ಭಟ

    ರಾಜ್ಯದ ಹಲವೆಡೆ ಕೂಡ ಬಿರುಗಾಳಿ ಸಮೇತ ಭಾರೀ ಮಳೆ ಸಾಧ್ಯತೆ

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ..!

ದೆಹಲಿ: ಗುಜರಾತ್​ನ ಕಡಲ ತೀರದಲ್ಲಿ ಬಿಪರ್‌ಜಾಯ್ ಸೈಕ್ಲೋನ್ ಅಬ್ಬರಿಸುತ್ತಿದ್ದು ಇದರ ಎಫೆಕ್ಟ್​ ಕರ್ನಾಟಕಕ್ಕೂ ತಟ್ಟಲಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಹಾಸನ, ಕೊಡಗು ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕರಾವಳಿ ಭಾಗದಲ್ಲಿ ವರುಣಾರ್ಭಟ ಜೋರಾಗಿರುವ ನಿರೀಕ್ಷೆ ಇದ್ದು ದಕ್ಷಿಣ ಒಳನಾಡು, ಕರಾವಳಿಯಲ್ಲಿ ಇಂದಿನಿಂದ 4 ದಿನ ಭಾರೀ ಮಳೆಯಾಗಲಿದೆ. ಬಿರುಗಾಳಿ, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಕರಾವಳಿ ಭಾಗದಲ್ಲಿ ಬಿಪರ್‌ಜಾಯ್ ಚಂಡಮಾರುತ ಆರ್ಭಟಿಸುತ್ತಿದ್ದು ಅರಬ್ಬಿ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಜೋರಾಗಿ ಬಂದು ದಡಕ್ಕೆ ಅಪ್ಪಳಿಸುತ್ತಿವೆ. ಅಲೆಗಳ ಹೊಡೆತಕ್ಕೆ ತೆಂಗಿನ ಮರಗಳು ಧರೆಗುರುಳುತ್ತಿವೆ. ಕಡಲ ಅಂಚಿನ ಮನೆಗಳು ಭಾಗಶಃ ಕುಸಿತವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮಲ್ಪೆ ಕಡಲ ಕಿನಾರೆಯಲ್ಲೂ ಸೈಕ್ಲೋನ್​ ಬಿಸಿ ಹೆಚ್ಚಾಗಿದೆ. ಹೀಗಾಗಿ ಜನರಿಗೆ ಸಮುದ್ರಕ್ಕೆ ಇಳಿಬೇಡಿ ಎಂದು ಜಿಲ್ಲಾಡಳಿತವು ಸುಮಾರು 1 ಕಿ.ಮೀ ಉದ್ದ ಬಲೆಯಿಂದ ಬೇಲಿ ನಿರ್ಮಾಣ ಮಾಡಿದೆ. ಆದ್ರೂ ಜನರು ಇದನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನಲಾಗಿದೆ. ಬೇಲಿ ದಾಟಿ ಒಳಗೆ ಬಂದ್ರೆ ಪ್ರವಾಸಿಗರಿಗೆ ದಂಡದ ಎಚ್ಚರಿಕೆ ನೀಡಲಾಗಿದ್ದು ಹೀಗಾಗಿ ದಡದಲ್ಲೇ ನಿಂತು ಪ್ರವಾಸಿಗರು ಹಿಂದಕ್ಕೆ ತೆರಳುತ್ತಿದ್ದಾರೆ.

ಗುಜರಾತ್ ಕರಾವಳಿ ಪ್ರದೇಶಗಳಲ್ಲಿ ಬಿಪರ್‌ಜಾಯ್ ಸೈಕ್ಲೋನ್ ತೀವ್ರ ಸ್ವರೂಪ ತಾಳಿದೆ. ದ್ವಾರಕದಿಂದ 510 ಕಿ.ಮೀ ದೂರದಲ್ಲಿರುವ ಸೈಕ್ಲೋನ್, ಪೋರಬಂದರ್‌ನಿಂದ 480 ಕಿ.ಮೀ ದೂರದಲ್ಲಿದೆ. ಸೌರಾಷ್ಟ್ರ, ಕಛ್ ಭಾಗದಲ್ಲಿ ಆರೆಂಜ್​ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಣೆ ಮಾಡಿದೆ. ಕಚ್ ಜಿಲ್ಲೆಯ ಕರಾವಳಿ ಭಾಗದ ಊರುಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು ಜನರು ಹೊರ ಬರದಂತೆ ಎಚ್ಚರಿಕೆ ವಹಿಸಲಾಗಿದೆ.

ಬಿಪರ್‌ಜಾಯ್ ಸೈಕ್ಲೋನ್ ದೇಶದ ಕರಾವಳಿ ತೀರಕ್ಕೆ ಎಫೆಕ್ಟ್​ ಕೊಡುವ ಕಾರಣದಿಂದ ಇಂದು ಮಧ್ಯಾಹ್ನ 1 ಗಂಟೆಗೆ ಉನ್ನತ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ಕರೆದಿದ್ದರು. ಸಭೆಯಲ್ಲಿ ಸೈಕ್ಲೋನ್ ಪರಿಣಾಮ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದಾರೆ. ಅಲ್ಲದೇ ಇದೇ ವೇಳೆ ಪ್ರಧಾನಿಯವರು ಹಿರಿಯ ಅಧಿಕಾರಿಗಳಿಂದ ಕೆಲ ಮಾಹಿತಿ ಪಡೆದಿದ್ದಾರೆ ಎಂದು ಹೇಳಲಾಗಿದೆ. ಇನ್ನು ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗಿಯಾಗಿದ್ದರು.

ಇನ್ನು ಮಹಾರಾಷ್ಟ್ರದ ಮುಂಬೈ ಸಮುದ್ರ ತೀರದಲ್ಲೂ ಅಲೆಗಳ ತೀವ್ರತೆ ಜೋರಾಗಿದೆ. ಪರಿಣಾಮ 2-3 ಅಡಿ ಎತ್ತರದವರೆಗೆ ಅಲೆಗಳು ಮೇಲೆಳುತ್ತಿವೆ. ಸಮುದ್ರದಲ್ಲಿ ಬಿರುಗಾಳಿ ಬೀಸುವುದರಿಂದ ಭಾರೀ ಗಾಳಿ ಜೊತೆ ಮಳೆ ಕೂಡ ಬೀಳಲಿದೆ. ಹೀಗಾಗಿ ಅರಬ್ಬಿ ಸಮುದ್ರದಲ್ಲಿ ಜೂನ್ 15 ರವರೆಗೆ ಮೀನುಗಾರಿಕೆ ನಡೆಸದಂತೆ ಸೂಚನೆ ನೀಡಲಾಗಿದೆ. ಈ ಸೈಕ್ಲೋನ್​ನಿಂದ ಮೋಡ ಮುಸುಕಿದ ವಾತಾವರಣ ಇರುವುದರಿಂದ ಮುಂಬೈನಲ್ಲಿ ವಿಮಾನ ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ ವಿಮಾನ ಯಾನ ಸಂಸ್ಥೆಗಳು ಸಂಚಾರ ಸ್ಥಗಿತಗೊಳಿಸಿದೆ.

ಈ ಸೈಕ್ಲೋನ್​ನಿಂದಾಗಿ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಮಹಾ ಮಳೆಯಾಗುತ್ತಿದೆ. ಬಿರುಗಾಳಿಯಿಂದ ಮರಗಳು ನೆಲಕ್ಕಪ್ಪಳಿಸುತ್ತಿವೆ. ಮರೀನ್ ಡ್ರೈವ್ ಸೇರಿದಂತೆ ಸಮುದ್ರದಲ್ಲಿ ಅಲೆಗಳು ಮೇಲೆಳುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಶಾದ್ಯಂತ ಬಿಪರ್‌ಜಾಯ್ ಚಂಡಮಾರುತದ ಎಫೆಕ್ಟ್​​.. ಮುಂದಿನ 24 ಗಂಟೆ ಭಾರೀ ಮಳೆ; ಕಟ್ಟೆಚ್ಚರ!

https://newsfirstlive.com/wp-content/uploads/2023/06/BIPARAJOY.jpg

Load More