newsfirstkannada.com

VIDEO: ಬಿಪರ್‌ಜಾಯ್ ಚಂಡಮಾರುತದ ಅಬ್ಬರ; ಗುಜರಾತ್‌, ಸೌರಾಷ್ಟ್ರದಲ್ಲಿ ಭಯಾನಕ ಸೈಕ್ಲೋನ್ ದೃಶ್ಯಗಳು

Share :

13-06-2023

  ಸೈಕ್ಲೋನ್‌ಗೆ ಗುಜರಾತ್​ನಲ್ಲಿ ಈವರೆಗೆ ನಾಲ್ವರ ಸಾವು

  ಚಂಡಮಾರುತದ ಒಂದೊಂದು ದೃಶ್ಯವೂ ರಣಭೀಕರ

  ಅಪಾಯದಲ್ಲಿರುವ ಸಾವಿರಾರು ಜನರ ಸ್ಥಳಾಂತರ

ಬಿಪರ್‌ಜಾಯ್ ಚಂಡಮಾರುತದ ಆತಂಕ ಗುಜರಾತ್, ಸೌರಾಷ್ಟ್ರ ಪ್ರಾಂತ್ಯದಲ್ಲಿ ಕ್ಷಣ, ಕ್ಷಣಕ್ಕೂ ಹೆಚ್ಚಾಗುತ್ತಿದೆ. ಕಡಲತೀರದಲ್ಲಿ ಅಪ್ಪಳಿಸುತ್ತಿರುವ ಅಲೆಗಳು, ಬಿರುಗಾಳಿಯ ವೇಗ, ಮಳೆಯ ಆರ್ಭಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಚಂಡಮಾರುತದ ಒಂದೊಂದು ದೃಶ್ಯವೂ ಭೀಕರ, ಭಯಂಕರವಾಗಿದ್ದು, ಅಲೆಗಳ ರಣಾರ್ಭಟಕ್ಕೆ ಸಮುದ್ರ ತೀರದ ಮಂದಿ ಬೆಚ್ಚಿಬಿದ್ದಿದ್ದಾರೆ. ಈಗಷ್ಟೇ ಆರಂಭವಾಗಿರುವ ಸೈಕ್ಲೋನ್ ಸಾವಿನ ಸೈಕ್ಲೋನ್ ಆಗಿ ಬದಲಾಗುವ ಮುನ್ಸೂಚನೆ ನೀಡುತ್ತಿದೆ.

ಬಿಪರ್‌ಜಾಯ್ ಸೈಕ್ಲೋನ್ ಸದ್ಯ ಗುಜರಾತ್ ಕಡಲತೀರದಿಂದ ಹಾದು ಹೋಗುತ್ತಿದೆ. ಆರಂಭದಲ್ಲೇ ಅಬ್ಬರಿಸುತ್ತಿರುವ ಚಂಡಮಾರುತ ಹಲವು ಅವಾಂತರಗಳನ್ನೇ ಸೃಷ್ಟಿಸುತ್ತಿದೆ. ಸದ್ಯ ಬಿಪರ್‌ಜಾಯ್‌ ಬಿರುಗಾಳಿ ಗಂಟೆಗೆ 45 ರಿಂದ 55 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದೆ. ಸೈಕ್ಲೋನ್​ನಿಂದ ಗುಜರಾತ್​ನಲ್ಲಿ ಈವರೆಗೆ ನಾಲ್ವರ ಸಾವನ್ನಪ್ಪಿದ್ದಾರೆ. ಗೋಡೆ ಕುಸಿದು ಮೂವರು, ಪೋರಬಂದರ್​ನ ಜುಹು ಬೀಚ್​​ನಲ್ಲಿ ಸಮುದ್ರಕ್ಕೆ ಇಳಿದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಅಬ್ಬರಿಸುತ್ತಿರುವ ಬಿಪರ್‌ಜಾಯ್, ಜೂನ್ 15 ರಂದು ಗುಜರಾತ್‌ನ ಜಾಕವು ಬಂದರಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಮುನ್ನೆಚ್ಚರಿಕೆಯ ಹಿನ್ನೆಲೆ ಗುಜರಾತ್ ರಾಜ್ಯದ ಕರಾವಳಿ ಪ್ರದೇಶದಲ್ಲಿ NDRF, SDRF ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಸೌರಾಷ್ಟ್ರ, ಕಛ್ ಭಾಗದ ತಗ್ಗು ಪ್ರದೇಶಗಳ ಸಾವಿರಾರು ಜನರ ಸ್ಥಳಾಂತರ ಮಾಡಲಾಗಿದ್ದು, ಗುಜರಾತ್ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಮುಂಬೈನ ವರ್ಲಿ ಸಮುದ್ರ ತೀರದಲ್ಲಿ ದೊಡ್ಡ ದೊಡ್ಡ ಅಲೆಗಳ ರಣಾರ್ಭಟ ಜೋರಾಗಿದೆ. ಗಂಟೆಗೆ 45-55 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ರತ್ನಗಿರಿ ಜಿಲ್ಲೆಯ ಗಣಪತಿಬ್ಲೂ ಬೀಚ್‌ನಲ್ಲಿ ಸಮುದ್ರದ ಅಲೆಯ ಅಬ್ಬರ ಜೋರಾಗಿತ್ತು. ಬಿಪರಜಾಯ್ ಸೈಕ್ಲೋನ್ ಇದ್ದರೂ ಲೆಕ್ಕಿಸದೇ ಸಮುದ್ರದ ದಡಕ್ಕೆ ಜನರು ಹೋಗಿದ್ದರು. ಮೋಜು‌ಮಸ್ತಿ ಮಾಡಲು ಬೀಚ್‌ಗೆ ಜನರು ಹೋಗಿದ್ದರು. ನಿನ್ನೆ ಸಮುದ್ರಕ್ಕೆ ಇಳಿದ ಐವರ ಪೈಕಿ ಓರ್ವ ಸಾವನ್ನಪ್ಪಿದ್ರೆ, ಇಬ್ಬರನ್ನ ರಕ್ಷಣೆ ಮಾಡಲಾಗಿದೆ. ಭಾನುವಾರ, ಸೋಮವಾರ ರತ್ನಗಿರಿ ಜಿಲ್ಲೆಯ ಗಣಪತಿ ಬೀಚ್ ನಲ್ಲಿ ಸಮುದ್ರದ ಅಲೆಯ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಬಿಪರ್‌ಜಾಯ್ ಚಂಡಮಾರುತದ ಅಬ್ಬರ; ಗುಜರಾತ್‌, ಸೌರಾಷ್ಟ್ರದಲ್ಲಿ ಭಯಾನಕ ಸೈಕ್ಲೋನ್ ದೃಶ್ಯಗಳು

https://newsfirstlive.com/wp-content/uploads/2023/06/Biparjoy-1.jpg

Load More