newsfirstkannada.com

Cyclone Biporjoy : ಗಂಟೆಗೆ 150 ಕಿ.ಮೀ ವೇಗ.. 20 ಅಡಿ ಎತ್ತರಕ್ಕೆ ಚಿಮ್ಮುತ್ತಿವೆ ಅಲೆಗಳ ಅಬ್ಬರ..!

Share :

Published June 15, 2023 at 7:15am

    ಮುಂದಿನ 7 ಗಂಟೆಗಳಲ್ಲಿ ರಣವೇಗ.. ಸಂಜೆ ಅಟ್ಯಾಕ್!

    ಸೈಕ್ಲೋನ್ ಇವತ್ತು ಎಲ್ಲಿ ಲ್ಯಾಂಡ್​ಫಾಲ್ ಆಗುತ್ತೆ ಗೊತ್ತಾ?

    67 ರೈಲು ಸಂಚಾರ, 30 ವಿಮಾನಗಳ ಹಾರಾಟ ರದ್ದು

ಬಿಪರ್​ಜಾಯ್ ಅಬ್ಬರಕ್ಕೆ ಗುಜರಾತ್ ಅಲರ್ಟ್ ಆಗಿದೆ. ಸಂಜೆ ಹೊತ್ತಿಗೆ ಗುಜರಾತ್-ಪಾಕ್​ ನಡುವೆ ಚಂಡಮಾರುತ ಅಪ್ಪಳಿಸಲಿದೆ. ಅರಬ್ಬಿಯಲ್ಲಿ ರೌದ್ರಾವತಾರ ತಾಳಿದ ಬಿಪರ್​ಜಾಯ್ 150 ಕಿ.ಮೀ ವೇಗದಲ್ಲಿ ಆಗಮಿಸ್ತಿದ್ದು, ಸುಮಾರು 20 ಅಡಿ ಎತ್ತರದ ಅಲೆಗಳನ್ನ ಹೊತ್ತು ತರುತ್ತಿದೆ. ಪರಿಸ್ಥಿತಿ ಎದುರಿಸಲು ಸರ್ಕಾರ ಸರ್ವಸನ್ನದ್ಧವಾಗಿದೆ.

ಬಿಪರ್​ಜಾಯ್ ಎದೆಬಡಿತ ಹೆಚ್ಚಿಸಿದೆ. ಸಂಜೆ 4 ರಿಂದ 8 ಗಂಟೆ ನಡುವೆ ಗುಜರಾತ್​ನ ಕಛ್ ಕಡಲ ಕಿನಾರೆಗೆ ಚಂಡಮಾರುತ ಅಪ್ಪಳಿಸಲಿದೆ. ಈಗಾಗಲೇ ಗುಜರಾತ್​ನ 4 ಜಿಲ್ಲೆಗಳಲ್ಲಿ ಬಿಪರ್​ಜಾಯ್ ಸೈಕ್ಲೋನ್ ಸೈತಾನ್ ಅವತಾರ ತಾಳಿದೆ.

ಗುಜರಾತ್‌ನತ್ತ ಶರವೇಗದಲ್ಲಿ ನುಗ್ಗಿಬರುತ್ತಿದೆ ತೂಫಾನ್

ಮುಂದಿನ 7 ಗಂಟೆಗಳಲ್ಲಿ ಚಂಡಮಾರುತ ರಣವೇಗ ಪಡೆಯಲಿದೆ. ಸುಮಾರು 220 ರಿಂದ 230 ವೇಗದಿಂದ ಆಗಮಿಸ್ತಿದ್ದು, ಗುಜರಾತ್​ನ ಕರಾವಳಿಗೆ ಪ್ರತಿಗಂಟೆಗೆ 125 ರಿಂದ 150 ಕಿ.ಮೀ ಚಂಡಮಾರುತ ಅಪ್ಪಳಿಸಲಿದೆ. ಸಂಜೆ ಮಾಂಡ್ವಿ, ಗುಜರಾತ್‌ನ ಜಖೌ ಬಂದರು ಮೂಲಕ ಕರಾಚಿಯತ್ತ ಸಾಗಲಿದೆ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಲ್ಲದೆ, ಕಛ್​ನಲ್ಲಿ ಗರಿಷ್ಠ ಗಾಳಿಯ ವೇಗ ಇರಲಿದೆ. 150 ಕಿ.ಮೀ ಗಾಳಿ ರಭಸವಾಗಿ ಬೀಸಲಿದೆ.

150 ಕಿ.ಮೀ ವೇಗ.. 20 ಅಡಿ ಎತ್ತರದ ಅಲೆಗಳ ಅಬ್ಬರ

ಗಂಟೆಗೆ 150 ಕಿ.ಮೀ ಶರವೇಗದಲ್ಲಿ ಬೀಸುವ ಗಾಳಿ, ಸಮುದ್ರದಲ್ಲಿ 9 ಅಡಿಯಿಂದ 20 ಅಡಿ ಎತ್ತರದ ಅಲೆಗಳನ್ನ ಎಬ್ಬಿಸಲಿದೆ. ಸಮುದ್ರದಲ್ಲಿ ಉಬ್ಬರವಿಳಿತದ ಅಬ್ಬರ ಹೆಚ್ಚಾಗಿರುವುದರಿಂದ ಕರಾವಳಿ ಭಾಗದಲ್ಲಿ ಭಾರಿ ಹಾನಿಯಾಗುವ ಸಾಧ್ಯತೆ ಇದೆ. ಸಮುದ್ರದಿಂದ ಅಲೆಗಳು ಮತ್ತು ಚಂಡಮಾರುತ ಅಪಾಯ ಮಾತ್ರವಲ್ಲ, ಧಾರಾಕಾರ ಮಳೆಯ ಎಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿದೆ. ಬಿಪರ್‌ಜಾಯ್ ಚಂಡಮಾರುತವು ಗುಜರಾತ್ ಕರಾವಳಿಯನ್ನ ಸಮೀಪಿಸುತ್ತಿದ್ದಂತೆ ಮಳೆಯ ತೀವ್ರತೆಯು ಹೆಚ್ಚಾಗಲಿದೆ.

ಪಶ್ಚಿಮ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಹೈಅಲರ್ಟ್!

ಕಛ್, ದ್ವಾರಕಾ, ಪೋರಬಂದರ್, ಜಾಮ್‌ನಗರ, ರೋಜ್‌ಕೋಟ್, ಜುನಾಗಢ್ ಮತ್ತು ಮೊರ್ಬಿಯಲ್ಲಿ ದಾಖಲೆಯ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಪ್ರದೇಶಗಳಲ್ಲಿ ಮೇಘಸ್ಫೋಟದ ಸಾಧ್ಯತೆಯು ಇದೆ ಅಂತ ಹವಾಮಾನ ಇಲಾಖೆ ಹೇಳಿದೆ. ಇನ್ನು, ಸೈಕ್ಲೋನ್ ಅಬ್ಬರ ಕಾರಣಕ್ಕೆ ಪಶ್ಚಿಮ ಕರಾವಳಿ ಭಾಗದಲ್ಲಿ ಕೇಂದ್ರ ಸರ್ಕಾರ ತೀವ್ರ ಕಟ್ಟೆಚ್ಚರ ವಹಿಸಿದೆ.

ಪರಿಸ್ಥಿತಿ ಎದುರಿಸಲು ರಕ್ಷಣಾ ತಂಡಗಳು ಸರ್ವಸನ್ನದ್ಧ

ಎನ್​ಡಿಆರ್​ಎಫ್​ 18 ತಂಡಗಳು, ಎಸ್‌ಡಿಆರ್‌ಎಫ್ 17 ತಂಡಗಳು, ರಾಜ್ಯ ರಸ್ತೆ ಮತ್ತು ಕಟ್ಟಡ ಇಲಾಖೆಯ 115 ತಂಡಗಳು ಮತ್ತು ರಾಜ್ಯ ವಿದ್ಯುತ್ ಇಲಾಖೆಯ 397 ತಂಡಗಳನ್ನ ನಿಯೋನಿಸಲಾಗಿದೆ. ಭಾರತೀಯ ಸೇನೆಯ 8 ತಂಡಗಳು ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿವೆ. ಇನ್ನು, ಕೇಂದ್ರದಿಂದ ಆರೋಗ್ಯ ತಂಡಗಳನ್ನ ರವಾನಿಸಲಾಗಿದೆ. ಇತ್ತ ಭುಜ್ ಏರ್ಫೋರ್ಸ್ ಸ್ಟೇಷನ್​ನಲ್ಲಿ ಅಲರ್ಟ್ ಆಗಿ ಇರಿಸಲಾಗಿದೆ.

4 ಜಿಲ್ಲೆಗಳಿಂದ 74 ಸಾವಿರ ಜನರ ಸ್ಥಳಾಂತರ!

ಸೈತಾನ್ ಸೈಕ್ಲೋನ್ ಅಬ್ಬರದ ಪರಿಣಾಮ ಗುಜರಾತ್ನ ಕರಾವಳಿಯ 4 ಜಿಲ್ಲೆಗಳ 74 ಸಾವಿರಕ್ಕೂ ಹೆಚ್ಚು ಮಂದಿಯನ್ನ ಸ್ಥಳಾಂತರ ಮಾಡಲಾಗಿದೆ. ವಿಶೇಷ ಬಸ್​ಗಳನ್ನು ಮೂಲಕ ನಿನ್ನೆ ದಿನ 10 ಸಾವಿರ ಮಂದಿಯನ್ನ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಚಂಡಮಾರುತದ ಭೀಕರ ಪರಿಣಾಮ ಸೃಷ್ಟಿಸುವ ಆತಂಕದ ನಡುವೆ ಗುಜರಾತ್​ನಲ್ಲಿ 67 ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, 30ಕ್ಕೂ ಅಧಿಕ ರೈಲುಗಳ ಮಾರ್ಗಗಳ ಮದಲಾವಣೆ ಮಾಡಲಾಗಿದೆ. ಅಲ್ಲದೆ, 30ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನ ಡೈವರ್ಟ್ ಮಾಡಲಾಗಿದೆ.

ಇದನ್ನು ಓದಿ: ಬಿಪರ್​ಜಾಯ್​ ಎಂದು ಹೆಸರನಿಟ್ಟವರ್ಯಾರು? ಇದರ ಅರ್ಥ ತಿಳಿದರೆ ಭಯವಾಗುತ್ತೆ!

ಕೇರಳ, ಕರ್ನಾಟಕದ ಕರಾವಳಿಯಲ್ಲೂ ಕಟ್ಟೆಚ್ಚರ

ಗುಜರಾತ್​ನಲ್ಲಿ ಹಲ್​ಚಲ್ ಎಬ್ಬಿಸುವುದರ ಜೊತೆಗೆ ರಾಜಸ್ಥಾನದ 12 ಜಿಲ್ಲೆಗಳ ಮೇಲೆ ಬಿಪರ್​ಜಾಯ್ ಚಂಡಮಾರುತ ತೀವ್ರ ಪರಿಣಾಮ ಬೀರಲಿದೆ ಅಂತ ತಿಳಿದು ಬಂದಿದೆ. ಅಲ್ಲದೆ, ಗುಜರಾತ್, ಮಹಾರಾಷ್ಟ್ರ ಸೇರಿ 9 ರಾಜ್ಯಗಳಲ್ಲಿ ಚಂಡಮಾರುತ ಎಫೆಕ್ಟ್ ಇರಲಿದೆ. ಕೇರಳ, ಕರ್ನಾಟಕ, ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಲಕ್ಷದ್ವೀಪದಲ್ಲೂ ಆರ್ಭಟ ಇರಲಿದೆ.

ಉಡುಪಿಯ ಕಡಲ ಕಿನಾರೆಗಳಲ್ಲಿ ಆಳೆತ್ತರದ ಅಲೆಗಳು!

ಚಂಡಮಾರುತ ಎಫೆಕ್ಟ್‌ನಿಂದ ರಾಜ್ಯದ ಕರಾವಳಿಯಲ್ಲೂ ಕಡಲು ಅಬ್ಬರಿಸುತ್ತಿದೆ. ಉಡುಪಿಯ ಕಾಪು ಬೀಚ್‌ನಲ್ಲೂ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರನ್ನ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಸಮುದ್ರದ ದಡದಲ್ಲಿ ಹಗ್ಗಗಳನ್ನು ಕಟ್ಟಿ ಕೆಂಪು ಬಾವುಟ ಹಾಕಿ ಸಮುದ್ರಕ್ಕೆ ಎಚ್ಚರಿಕೆ ನೀಡಲಾಗುತ್ತಿದೆ. ಸದ್ಯ ಹೋಮ್​ಗಾರ್ಡ್‌ಗಳು ಲೈಫ್ಗಾರ್ಡ್‌ಗಳು ತೀರದಲ್ಲೇ ಬೀಡುಬಿಟ್ಟಿದ್ದಾರೆ.

ಆಕಸ್ಮಿಕ ಅತಿಥಿ ಆಗಮನಕ್ಕೆ ಬೆಚ್ಚಿಬಿದ್ದ ಪಾಕಿಸ್ತಾನ!

ಇತ್ತ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕರಾವಳಿ ಪ್ರದೇಶಕ್ಕೂ ಬಿಪರ್​ಜಾಯ್ ಅಪ್ಪಳಿಸಲಿದೆ. ಪಾಕಿಸ್ತಾನದ ಕರಾವಳಿ ಪಟ್ಟಣಗಳಾದ ಕರಾಚಿ ಸೇರಿ ಇತರ ಸಣ್ಣ ಪಟ್ಟಣಗಳಲ್ಲಿ ವಾಸಿಸುವ ಸುಮಾರು 66 ಸಾವಿರ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ಆಕಸ್ಮಿಕ ಅತಿಥಿಯಿಂದ ಬೆಚ್ಚಿಬಿದ್ದಿರುವ ಪಾಕಿಸ್ತಾನ ಪರಿಸ್ಥಿತಿ ನಿಭಾಯಿಸಲು ಪರದಾಡ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cyclone Biporjoy : ಗಂಟೆಗೆ 150 ಕಿ.ಮೀ ವೇಗ.. 20 ಅಡಿ ಎತ್ತರಕ್ಕೆ ಚಿಮ್ಮುತ್ತಿವೆ ಅಲೆಗಳ ಅಬ್ಬರ..!

https://newsfirstlive.com/wp-content/uploads/2023/06/BIPARJOY_1.jpg

Load More