newsfirstkannada.com

PHOTOS: ಬಿಪರ್‌ಜಾಯ್‌ನಿಂದ ಬಚಾವ್ ಆದ್ರೂ ತಪ್ಪದ ಸಂಕಷ್ಟ; ಚಂಡಮಾರುತಕ್ಕೆ ತತ್ತರಿಸಿದ ಕಛ್‌ನಿಂದ ನ್ಯೂಸ್‌ ಫಸ್ಟ್‌ ಪ್ರತ್ಯಕ್ಷವರದಿ

Share :

17-06-2023

    ಗುಜರಾತ್​ನಲ್ಲಿ ನೆಲಕ್ಕೆ ಉರುಳಿದ ಬೃಹತ್​ ಮನೆ, ಮರ, ವಿದ್ಯುತ್​ ಕಂಬಗಳು

    ಮೂರು ದಿನಗಳಿಂದ ಗುಜರಾತ್​ನ 8 ಜಿಲ್ಲೆಗಳಲ್ಲಿ ವಿದ್ಯುತ್​ ಸಂಪರ್ಕ ಕಡಿತ

    ಟಾಪ್ 10 ಫೋಟೋಗಳು ಹೇಳ್ತಿವೆ ಬಿಪಾರ್‌ಜಾಯ್‌ ಸಂಪೂರ್ಣ ವಿವರ

ಕಛ್‌: ಜೋರಾಗಿ ಮಳೆ ಬಂದ್ರೆ ಅದರ ಹೊಡೆತ ತಡೆದುಕೊಳ್ಳೋದಕ್ಕೆ ಎಷ್ಟೋ ಸಮಯ ಬೇಕಾಗುತ್ತೆ. ಇನ್ನು ಚಂಡಮಾರುತವೇ ಬಂದ್ರೆ ಅಬ್ಬಾ.. ಹೇಳೋದೇ ಬೇಡ. ಅರಬ್ಬಿ ಸಮುದ್ರದಲ್ಲಿ ಅಬ್ಬರಿಸಿದ ಬಿಪರ್‌ಜಾಯ್‌ ಚಂಡಮಾರುತವೂ ಅಷ್ಟೇ ಬಹಳಷ್ಟು ರಣ ಭೀಕರ ಅನಾಹುತಗಳನ್ನ ಸೃಷ್ಟಿಸಿದೆ.

ಬಿಪರ್‌ಜಾಯ್‌ ಅಬ್ಬರದ ಹೊಡೆತಕ್ಕೆ ಗುಜರಾತ್‌ನ ಹಲವು ಜಿಲ್ಲೆಗಳು ಅಕ್ಷರಶಃ ಕತ್ತಲಲ್ಲಿ ಮುಳುಗಿವೆ. ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಚಂಡಮಾರುತಕ್ಕೆ ಹೆಚ್ಚು ತತ್ತರಿಸಿದ ಕಛ್‌ ಜಿಲ್ಲೆಯಲ್ಲಿ ನಮ್ಮ ಪ್ರತಿನಿಧಿ ಚಂದ್ರಮೋಹನ್ ಗ್ರೌಂಡ್ ರಿಪೋರ್ಟ್ ಕೊಟ್ಟಿದ್ದಾರೆ. ಕಛ್‌ ಜಿಲ್ಲೆ ಮಾಡ್ವಿ ಟೌನ್‌ನಲ್ಲಿ ನ್ಯೂಸ್‌ ಫಸ್ಟ್ ಕಂಡ ಒಂದೊಂದು ದೃಶ್ಯಗಳು ಚಂಡಮಾರುತದ ಭೀಕರತೆಗೆ ಸಾಕ್ಷಿಯಾಗಿದೆ.

ಗುಜರಾತ್​​ ರಾಜ್ಯದ 8 ಜಿಲ್ಲೆಗಳಲ್ಲಿ 1,127 ತಂಡಗಳು ದೌಡಾಯಿಸಿ ವಿದ್ಯುತ್​​ ಸಂಪರ್ಕವನ್ನು ಮರು ಸ್ಥಾಪನೆ ಮಾಡಲು ಎಲ್ಲಾ ರೀತಿಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ. 8 ಜಿಲ್ಲೆಗಳಲ್ಲಿ ವಿದ್ಯುತ್​​ ಸಂಪರ್ಕ​ ಕಡಿತಗೊಂಡ ಪರಿಣಾಮ ನೀರಿನ ಪೂರೈಕೆ ಕೂಡ ಸ್ಥಗಿತಗೊಂಡಿದೆ. ಹೀಗಾಗಿ ಅಲ್ಲಿನ ಜನರ ಜೀವನ ಅಸ್ತವ್ಯಸ್ತಗೊಂಡಿದೆ.

ಕಳೆದ ಮೂರು ದಿನಗಳಿಂದ ಮಾಂಡವಿ ಪಟ್ಟಣದಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ತಮ್ಮ ತಮ್ಮ ಪೋನ್​ಗಳಿಗೆ ಜಾರ್ಜ್​ ಮಾಡಲು ಸ್ಥಳೀಯ ಸ್ವಾಮಿ ನಾರಾಯಣ ಮಂದಿರಕ್ಕೆ ಜನರು ಹಿಂಡು ಹಿಂಡಾಗಿ ಬರುತ್ತಿದ್ದಾರೆ. ಒಂದೇ ಸ್ಥಳದಲ್ಲಿ ಕುಳಿತುಕೊಂಡು ಜನರೇಟರ್​ ಮೂಲಕ ವಿದ್ಯುತ್​​ ಸಂಪರ್ಕವನ್ನು ಪಡೆದುಕೊಂಡು ಮೊಬೈಲ್​ಗಳಿಗೆ ಚಾರ್ಜ್​ ಮಾಡುತ್ತಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಅಬ್ಬರಿಸಿದ ಬಿಪರ್‌ಜಾಯ್‌ ರಣ ಭೀಕರ ಚಂಡಮಾರುತಕ್ಕೆ ಸಾಕಷ್ಟು ಅನಾಹುತಗಳು ಸೃಷ್ಟಿಯಾಗಿವೆ. ಭೀಕರ ಚಂಡಮಾರುತದಿಂದ ಹಲವು ಕಡೆ ಬೃಹತ್​​ ಗಾತ್ರದ ಮರಗಳು ಹಾಗೂ ವಿದ್ಯುತ್​​ ಕಂಬಗಳು ನೆಲಕಚ್ಚಿವೆ.

ಭೀಕರ ಮಳೆಯಿಂದ ರಸ್ತೆಗಳು ನೀರಿನಿಂದ ಜಲಾವೃತಗೊಂಡಿವೆ. ಹೀಗಾಗಿ ರಸ್ತೆಗಳಲ್ಲಿ ನೀರು ತುಂಬಿದ್ದರಿಂದ ಸ್ಥಳೀಯ ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗುಜರಾತ್​ನ ಕರಾವಳಿ ಪ್ರದೇಶದಲ್ಲಿ ಅಪ್ಪಳಿಸಿ ಬೊಬ್ಬೆರಿದಿರುವ ಬಿಪರ್​ಜಾಯ್​ ತೂಫಾನ್​ ಹೊಡೆತಕ್ಕೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ರಸ್ತೆಗಳಲ್ಲಿ ನಿಂತ ನೀರು ಸಂಚಾರಕ್ಕೆ ಆಗಮಿಸ್ತಿರುವ ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ.

ರಣ ಭೀಕರ ಚಂಡಮಾರುತದ ಏಟು ಸಮುದ್ರ ದಡದಲ್ಲಿದ್ದ ಅಂಗಡಿ ಮುಂಗಟ್ಟುಗಳಿಗೂ ಹಾನಿಯುಂಟಾಗಿದೆ. ವಿಪರೀತ ಗಾಳಿ ಅಂಗಡಿ ಟೆಂಟ್​ ಸಹ ಹಾರಿ ಹೋಗಿದೆ.

ಗುಜರಾತ್​ನ ಬಿದಿ ಬಿದಿಗಳಲ್ಲಿ ಬಿರುಗಾಳಿಗೆ ಸಾಕಷ್ಟು ಮರಗಳು ಧರೆಗುರುಳಿವೆ. ಹೀಗಾಗಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಭಾರೀ ತೊಂದರೆ ಆಗಿದೆ. ವಿಪರೀತ ಮಳೆಯಿಂದ ಗುಜರಾತ್​​ ಸುತ್ತಮುತ್ತಲಿನ ಜಿಲ್ಲೆಗಳು ತತ್ತರಿಸಿ ಹೋಗುತ್ತಿವೆ.

ಭೀಕರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಜನರನ್ನ ನಿರಾಶ್ರಿತರನ್ನಾಗಿ ಮಾಡಿದೆ. ಹಲವು ಮನೆಗಳು, ಆಸ್ಪತ್ರೆ, ಕಟ್ಟಡಗಳಲ್ಲಿ ನೀರು ತುಂಬಿದ್ದರಿಂದ, ಮನೆಯಿಂದ ಹೊರ ಬರಲು ಆಗದೇ ಸ್ಥಳೀಯ ನಿವಾಸಿಗಳು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.

ಬಿಪರ್​ಜಾಯ್​ದಿಂದ ಗುಜರಾತ್ ಕರಾವಳಿಯಲ್ಲಿ 23 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜಸ್ಥಾನದ ಕೆಲವು ಭಾಗಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS: ಬಿಪರ್‌ಜಾಯ್‌ನಿಂದ ಬಚಾವ್ ಆದ್ರೂ ತಪ್ಪದ ಸಂಕಷ್ಟ; ಚಂಡಮಾರುತಕ್ಕೆ ತತ್ತರಿಸಿದ ಕಛ್‌ನಿಂದ ನ್ಯೂಸ್‌ ಫಸ್ಟ್‌ ಪ್ರತ್ಯಕ್ಷವರದಿ

https://newsfirstlive.com/wp-content/uploads/2023/06/biporjoy-cyclone-12.jpg

Load More