ಕಳೆದುಕೊಂಡ ಸಂಗಾತಿಗಾಗಿ ಹಕ್ಕಿಯ ಮೂಕ ರೋದನೆ
ವಿಡಿಯೋದ ಕೊನೆಯ ಕ್ಷಣ ವೀಕ್ಷಕರ ಹೃದಯವೇ ಒಡೆದು ಹೋಗುವಂತಿದೆ
ಭಾವನಾತ್ಮಕವಾಗಿರುವ ಈ ವಿಡಿಯೋ ನೋಡಿದ್ರೆ ನೀವೂ ಅಳಬಹುದು
ಸಂಗಾತಿ ಕಳೆದುಕೊಂಡು ಬದುಕೋದು ಸುಲಭವಲ್ಲ. ನಮ್ಮ ಪ್ರೀತಿ, ಪಾತ್ರರಾದವರು ತೀರಿಹೋದಾಗ ಕಣ್ಣೀರು ಇಡುತ್ತೇವೆ. ಅವರ ಉಸಿರ ನೆರಳಿಗಾಗಿ ಚಡಪಡಿಸುತ್ತೇವೆ. ಬದುಕಿನ ಕೊನೆಯವರೆಗೂ ನೆನೆನೆದು ದುಃಖಿಸುತ್ತೇವೆ. ಇದು ಮನುಷ್ಯರ ಕಥೆಯಾದರೆ, ಪ್ರಾಣಿ, ಪಕ್ಷಿಗಳ ವ್ಯಥೆ ಕೂಡ ಅಷ್ಟೇ.
ಅವು ಮೂಕ ಪ್ರಾಣಿಗಳು, ಮೂಕ ಪಕ್ಷಿಗಳು ಅಂತಾ ನಮಗೆ ಅನಿಸಬಹುದು. ಅವುಗಳೂ ಕೂಡ ಪರಸ್ಪರ ಬಿಡಿಸಲಾಗದ ಸಂಬಂಧವನ್ನು ಇಟ್ಕೊಂಡಿರುತ್ತವೆ. ಅದರಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗ್ತಿದೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ, ಈ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದು, ದೃಶ್ಯದ ಕೊನೆಯ ಕ್ಷಣ ವೀಕ್ಷಕರ ಹೃದಯ ಒಡೆಯುವಂತಿದೆ.
ಹೃದಯ ವಿದ್ರಾವಕ ವಿಡಿಯೋದಲ್ಲಿ ಏನಿದೆ?
ಸಂಗಾತಿಯನ್ನು ಕಳೆದುಕೊಂಡ ಹಕ್ಕಿಯೊಂದು ಕಣ್ಣೀರು ಇಡುತ್ತಿದೆ. ತುಂಬಾ ಆಘಾತಕ್ಕೆ ಒಳಗಾದ ಆ ಹಕ್ಕಿ, ಸಂಗಾತಿ ಬಿಟ್ಟು ಹೋಗಲಾಗದೇ ಚಡಪಡಿಸುತ್ತದೆ. ತನ್ನ ಕೊಕ್ಕಿನಿಂದ ಮೇಲೆತ್ತಲು ಪ್ರಯತ್ನಿಸಿ, ಪ್ರಯತ್ನಿಸಿ ಸುಸ್ತಾಗಿದೆ. ಅಷ್ಟೊತ್ತಿಗೆ ಅಲ್ಲಿದ್ದ ವ್ಯಕ್ತಿ ಮೃತ ಹಕ್ಕಿಯನ್ನು ನಿಧಾನಕ್ಕೆ ಎಳೆಯುತ್ತಾರೆ. ಆಗ ಅದು ಸಂಗಾತಿಯತ್ತ ಬಂದಿದೆ. ಮಾತ್ರವಲ್ಲ, ಮೃತ ಸಂಗಾತಿಯನ್ನು ಯಾರಿಗೂ ಕೊಡದ ರೀತಿಯಲ್ಲಿ ತನ್ನ ಎದೆಯ ಭಾಗವನ್ನಿಟ್ಟು ಅಪ್ಪಿಕೊಂಡಿದೆ. ಹೀಗೆ ಸಂಗಾತಿಗಾಗಿ ಚಡಪಡಿಸಿ ನಿತ್ರಾಣಗೊಂಡ ಆ ಹಕ್ಕಿಯೂ ಕುಸಿದು ಸಾವನ್ನಪ್ಪಿದೆ. ಪ್ರಾಣ ಕಳೆದುಕೊಂಡ ಸಂಗಾತಿ ಜೊತೆಯಲ್ಲಿ ಇನ್ನೊಂದು ಹಕ್ಕಿಯೂ ಉಸಿರು ಚೆಲ್ಲಿದೆ. ವಿಡಿಯೋದ ಕೊನೆಯ ಕ್ಷಣ ಗಟ್ಟಿ ಹೃದಯವೂ ಒಡೆದು ಹೋಗುವಂತಿದೆ.
Care & loveಗೆ ರಿಪ್ಲೇಸ್ ಇಲ್ಲ
ಪ್ರೀತಿ ಅಂದರೇನು? ಬಹುಶಃ ಈ ಪ್ರಶ್ನೆಯನ್ನು ಕೇಳಿದರೆ ಒಬ್ಬೊಬ್ಬರಿಂದ ಒಂದು ರೀತಿಯ ಉತ್ತರವನ್ನು ನಿರೀಕ್ಷೆ ಮಾಡಬಹುದು. ಆದರೆ ಸಂಗಾತಿಯನ್ನು ಕಳೆದುಕೊಂಡ ಹಕ್ಕಿಯ ರೋದನೆಯೇ ಹೇಳುತ್ತಿದೆ ಪ್ರೀತಿ ಅಂದ್ರೆ ಇದೆನೇ ಅಂತಾ.
Love & Loyality 💕💕
If you have a heart, it will surely bleed at the end 😔😔 pic.twitter.com/FqnwThjOpi— Susanta Nanda (@susantananda3) June 21, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ