newsfirstkannada.com

ಬಿಟ್​ ಕಾಯಿನ್​ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಪೊಲೀಸರಿಗೆ ಬೆದರಿಕೆ ಹಾಕಿದ್ರಂತೆ ಶ್ರೀಕಿ!

Share :

08-09-2023

    ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದ್ದ ಬಿಟ್​​ ಕಾಯಿನ್​ ಕೇಸ್​​

    ಹಿಂದಿನ ಸರ್ಕಾರವನ್ನೇ ಗಡ ಗಡ ನಡುಗಿಸಿತ್ತು ಈ ಬಿಟ್​​ ಕಾಯಿನ್​​ ಕೇಸ್​​

    ಪೊಲೀಸರಿಗೆ ಆವಾಜ್​ ಹಾಕಿದ್ರಂತೆ ಶೀಕಿ, ಮತ್ತೆ ಕೇಸ್​​ಗೆ ಮರುಜೀವ..!

ಬಿಟ್​ ಕಾಯಿನ್​… ಬಿಟ್ಟು ಬಿಡದಂತೆ ಕಾಡ್ತಾಯಿರುವ ಪ್ರಕರಣ. ದಿನದಿಂದ ದಿನಕ್ಕೆ ತನಿಖೆ ಚುರುಕುಗೊಂಡಿದ್ದು, ಹೊಸ ಹೊಸ ವಿಚಾರಗಳು ಬೆಳಕಿಗೆ ಬರ್ತಾಯಿದೆ. ಇದೀಗ ಈ ಕೇಸ್​ಗೆ ಅಚ್ಚರಿಯ​ ಟ್ವಿಸ್ಟ್​ ಬಂದಿದೆ. ಪ್ರಕರಣ ಆರೋಪಿಯಾಗಿರೋ ಶ್ರೀಕಿಯಿಂದ ಹಿಂದಿನ ಅಧಿಕಾರಿಗಳಿಗೆ ಬೆದರಿಕೆ ಆರೋಪ ಕೇಳಿಬಂದಿದೆ.

‘ಬಿಟ್​​’ ಟ್ವಿಸ್ಟ್

ಹಿಂದಿನ ಸಿಸಿಬಿ ಪೊಲೀಸರನ್ನ ಕರೆಸಿ ವಿಚಾರಣೆ ನಡೆಸಲಾಗ್ತಾಯಿದ್ದು, ಈ ವಿಚಾರಣೆಗೆ ಮಾಲೂರಿನ ಇನ್ಸ್​ಪೆಕ್ಟರ್ ಚಂದ್ರಾಧರ್ ಹಾಜರಾಗಿದ್ದರು. ಇದೇ ವೇಳೆ ವಿಚಾರಣೆಗೆ ಹ್ಯಾಕರ್​ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣ ಹಾಜರಾಗಿದ್ದನಂತೆ. ಅಲ್ಲಿ ಶ್ರೀಕಿಗೆ ಸಿಐಡಿ ಎಸ್ಐಟಿಯಿಂದ ರಾಜಾತಿಥ್ಯ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಆರೋಪಿ ಶ್ರೀಕಿ ಹಿಂದಿನ ಅಧಿಕಾರಿಗಳಿಗೆ ಎಸ್ಐಟಿ ಅಧಿಕಾರಿಗಳ ಮುಂದೆಯೇ ಬೆದರಿಕೆ ಹಾಕಿದ್ದಾನೆ ಎಂದು ಮಾಲೂರಿನ ಇನ್ಸ್​ಪೆಕ್ಟರ್ ಚಂದ್ರಾಧರ್ ಆರೋಪಿಸಿದ್ದಾರೆ.

ಶ್ರೀಕಿ ಆವಾಜ್

ಈಗ ಸರ್ಕಾರ ನಮ್ಮದು.. ಈಗ ನಮ್ಮದೇ ಆಟ ನಡೆಯುತ್ತೆ. ನಿಮ್ಮನ್ನ ಹೇಗೆ ಮುಗಿಸಬೇಕು ಅಂತ ನನಗೆ ಗೊತ್ತಿದೆ. ಪ್ರತಿಯೊಂದಕ್ಕೂ ಕಾಲವೇ ಉತ್ತರ ನೀಡಲಿದೆ. ಸರ್ಕಾರದ ಪ್ರಮುಖ ನಾಯಕರ ಕೃಪಾಕಟಾಕ್ಷ ನನಗಿದೆ. ಹಿಂದೆ ನನ್ನ ಆರೋಪಿ ಮಾಡಿ ವಿಚಾರಣೆ ನಡೆಸಿದ್ದರು. ಈಗ ನಾನು ಅವರೆಲ್ಲರ ವಿಚಾರಣೆ ಮಾಡುತ್ತೇನೆ. ಎಲ್ಲಾ ಇನ್ಸ್​​ಪೆಕ್ಟರ್​ಗಳನ್ನ ಕರೆಸಿ.

-ಶ್ರೀಕೃಷ್ಣ, ಆರೋಪಿ

ಕಳೆದ ಆಗಸ್ಟ್​ 29 ರಂದು ಇನ್ಸ್ಪೆಕ್ಟರ್ ಚಂದ್ರಾಧರ್​ ಅವ್ರನ್ನ ವಿಚಾರಣೆಗೆ ಕರೆದಿದ್ರು. ಈ ವೇಳೆ ಹೀಗೆ ನಮ್ಮ ಜೊತೆ ನಡೆದುಕೊಂಡಿದ್ದಾರೆ ಅಂತ ಆರೋಪಿಸಿ ಡಿಐಜಿ ವಂಶಿಕೃಷ್ಣ, ಎಸ್ಐಟಿ ಮುಖ್ಯಸ್ಥ ಎಡಿಜಿಪಿ ಮನಿಷ್ ಖರ್ಬೀಕರ್​ಗೆ ಪತ್ರ ರವಾನೆ ಮಾಡಿದ್ದಾರೆ.

ಎಡಿಜಿಪಿಗೆ ಇನ್ಸ್​​ಪೆಕ್ಟರ್ ದೂರು

ಕಳೆದ ಆಗಸ್ಟ್​ 29 ರಂದು ವಿಚಾರಣೆಗೆ ಕರೆಸಿದ್ರು. ಶ್ರೀಕಿ ದರ್ಬಾರ್​ಗೆ ಎಸ್ಐಟಿ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಆತ ಅಷ್ಟು ಆವಾಜ್ ಹಾಕ್ತಿದ್ರೂ ಸಿಐಡಿ ಇನ್ಸ್​ಪೆಕ್ಟರ್ ಸುಮ್ಮನಿದ್ರು. ನಾವು ಇಲಾಖೆಯಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ್ದೇವೆ. ಹಿರಿಯ ಅಧಿಕಾರಿಗಳ ಸೂಚನೆಯಂತೆ ಕೆಲಸ ಮಾಡಿದ್ದೇವೆ. ಆದರೆ ಈ ರೀತಿಯ ನಡವಳಿಕೆ ತೀರಾ ಬೇಸರ ತರಿಸಿದೆ.

-ಚಂದ್ರಾಧರ್​, ಇನ್ಸ್​​​ಪೆಕ್ಟರ್

ಅದೇನೇ ಇರಲಿ ಬಿಟ್​ ಕಾಯಿನ್​ ತನಿಖೆ ರಾಜಕೀಯ ರೂಪ ತಾಳಿದ್ದು, ಹ್ಯಾಕರ್ ಶ್ರೀಕಿ ಮೂಲಕ ಈಗಿನ ಸರ್ಕಾರ ಸೇಡು ತೀರಿಸಿಕೊಳ್ತಿದ್ಯಾ ಎಂಬ ಆರೋಪವೂ ಕೇಳಿ ಬಂದಿದೆ ? ಅಷ್ಟೇ ಅಲ್ಲ ಈ ಎಲ್ಲಾ ಬೆಳವಣಿಗೆಗಳನ್ನ ನೋಡ್ತಾಯಿದ್ರೆ, ಬಿಜೆಪಿ ಪೊಲೀಸ್ V/S ಕಾಂಗ್ರೇಸ್ ಪೊಲೀಸ್ ಫೈಟ್​ ಕೂಡ ನಡಿತಾಯಿದ್ಯಾ ಎಂಬ ಪ್ರಶ್ನೆ ಕಾಡ್ತಾಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಟ್​ ಕಾಯಿನ್​ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಪೊಲೀಸರಿಗೆ ಬೆದರಿಕೆ ಹಾಕಿದ್ರಂತೆ ಶ್ರೀಕಿ!

https://newsfirstlive.com/wp-content/uploads/2023/09/Bit-Coin.jpg

Load More