newsfirstkannada.com

ರಾಜ್ಯದ ಜನರಿಗೆ ಕರೆಂಟ್​​ ಶಾಕ್​​.. ವಿದ್ಯುತ್​ ಬಿಲ್​​ ಏರಿಸಿದ್ದು ಕಾಂಗ್ರೆಸ್ಸೋ, ಬಿಜೆಪಿ ಸರ್ಕಾರವೋ?

Share :

14-06-2023

    ಉಚಿತ ಗ್ಯಾರಂಟಿಗಳ ಮಧ್ಯೆ ರಾಜ್ಯದ ಜನರಿಗೆ ಕರೆಂಟ್​ ಶಾಕ್​​

    ಆತ್ಮಸಾಕ್ಷಿ ಇದ್ರೆ ಕರೆಂಟ್​​ ಬಿಲ್​ ಏರಿಸಿದ್ದಕ್ಕೆ BJP ಕ್ಷಮೆಯಾಚಿಸಲಿ

    ನಾವು ಕರೆಂಟ್​ ಬಿಲ್​ ಏರಿಕೆ ಮಾಡಿಲ್ಲ- ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜನರಿಗೆ ಕರೆಂಟ್ ಶಾಕ್ ಹೊಡೆದಿದೆ. ವಿದ್ಯುತ್ ದರ ಏರಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ಅವಧಿಯಲ್ಲೇ ಕರೆಂಟ್ ಬಿಲ್ ಏರಿಕೆ ಎಂದು ಕಾಂಗ್ರೆಸ್​ ಹೇಳುತ್ತಿದೆ. ನಮ್ಮ ಅವಧಿಯಲ್ಲಿ ವಿದ್ಯುತ್ ಬಿಲ್ ಏರಿಸಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಬಿಜೆಪಿ-ಕಾಂಗ್ರೆಸ್ ಮಧ್ಯೆ ಕರೆಂಟ್ ಫೈಟ್ ಜೋರಾಗಿದೆ.

ಸಿದ್ದರಾಮಯ್ಯ ಒಂದೆಡೆ ಗೃಹಜ್ಯೋತಿ ಗ್ಯಾರಂಟಿ ಅನುಷ್ಠಾನಕ್ಕೆ ಒದ್ದಾಡುತ್ತಿದೆ. ಮತ್ತೊಂದೆಡೆ ಜೂನ್ ತಿಂಗಳಲ್ಲಿ ವಿದ್ಯುತ್ ಬಿಲ್ ಡಬ್ಕಿ ಡಬಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದ್ರೆ ವಿದ್ಯುತ್ ಬಿಲ್ ಏರಿಸಿರೋದು ನಾವಲ್ಲ ಎನ್ನುತ್ತಿದ್ದಾರೆ ಕಾಂಗ್ರೆಸ್, ಬಿಜೆಪಿ ನಾಯಕರು!

ವಿದ್ಯುತ್ ಬಿಲ್ ಏರಿಸಿದ್ದು ಬಿಜೆಪಿನಾ, ಕಾಂಗ್ರೆಸ್ ಸರ್ಕಾರನಾ?

ರಾಜ್ಯದಲ್ಲೀಗ ವಿದ್ಯುತ್ ಬಿಲ್ ಏರಿಕೆ ಜಟಾಪಟಿ ಶುರುವಾಗಿದೆ. ವಿದ್ಯುತ್ ಬಿಲ್ ಬಿಜೆಪಿ ಅವಧಿಯಲ್ಲೇ ಏರಿಕೆಯಾಗಿದೆ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿತ್ತು. ಆದ್ರೆ ವಿದ್ಯುತ್​ ದರ ಏರಿಕೆ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಎಲ್ಲಾ ಬಿಲ್ ತಡೆ ಹಿಡಿಯೋ ನೀವು ವಿದ್ಯುತ್ ಬಿಲ್ ಯಾಕೆ ತಡೀಬಾರದು ಅಂತ ಸಂಸದ ಪ್ರತಾಪ ಸಿಂಹ ಕಾಂಗ್ರೆಸ್​​ಗೆ ತಿವಿದಿದ್ದಾರೆ.

ಕಾಂಗ್ರೆಸ್ ಆರೋಪಕ್ಕೆ ಮಾಜಿ ಸಿಎಂ ಬೊಮ್ಮಾಯಿ‌ ತಿರುಗೇಟು

ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್‌ ಬಿಲ್‌ ಏರಿಸಲು ಒಪ್ಪಿರಲಿಲ್ಲ ಎಂದು ಮಾಜಿ ಸಿಎಂ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್​, ಬಿಜೆಪಿ ಜಟಾಪಟಿ ನಡುವೆ ವಿದ್ಯುತ್ ಏರಿಕೆಯನ್ನು ಪರಿಶೀಲಿಸುವಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮೊದಲೇ ಬೆಲೆ ಏರಿಕೆಯ ಬಿಸಿಯಲ್ಲಿದ್ದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗೃಹಜ್ಯೋತಿ ನೀಡಿ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಂಡಂತಾಗಿದೆ, ದಯವಿಟ್ಟು ಮರುಪರಿಶೀಲಿಸಿ ಅಂತ ಮನವಿ ಮಾಡಿದ್ದಾರೆ.

ಇಂಧನ ದರ ಏರಿಕೆ ಬಗ್ಗೆ ಸಚಿವ ಜಾರ್ಜ್‌ ಪರಿಶೀಲನೆ!

ಇನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಏರಿಕೆ ಆಗಿದೆ ಅಂತ ಇಂಧನ ಸಚಿವ ಕೆ.ಜೆ.ಜಾರ್ಜ್​ ಮತ್ತೆ ಸ್ಪಷ್ಟನೆ ನೀಡಿದ್ದಾರೆ. ವಿದ್ಯುತ್ ದರ ಏರಿಕೆ ಕೇಂದ್ರದ ಅಡಿಯಲ್ಲಿ ಬರುತ್ತದೆ. ಹೀಗಾಗಿ ಕೆಇಆರ್‌ಸಿ ದರ ಏರಿಸಿತ್ತು. ಚುನಾವಣೆ ನೀತಿ ಸಂಹಿತೆ ಇದ್ದಿದ್ದರಿಂದ ತಡವಾಗಿತ್ತು ಅಂತ ಹೇಳಿದ್ದಾರೆ.

ಬಿಜೆಪಿಗೆ ಆತ್ಮ ಇದ್ರೆ ಆತ್ಮಸಾಕ್ಷಿಯಿಂದ ವಿದ್ಯುತ್ ದರ ಏರಿಕೆ ಮಾಡಿದ್ದನ್ನ ಒಪ್ಪಿಕೊಂಡು ಕ್ಷಮೆಯಾಚಿಸಲಿ ಎಂದು ಕಾಂಗ್ರೆಸ್ ಆಗ್ರಹಿಸಿದೆ. ದರ ಏರಿಕೆ ಮಾಡಿ ಚುನಾವಣೆ ನಂತರ ಜಾರಿಗೆ ಬರುವಂತೆ ತಂತ್ರ ರೂಪಿಸಿದ ಬಿಜೆಪಿಗೆ ಈಗ ವಿದ್ಯುತ್ ದರ ಏರಿಕೆ ಬಗ್ಗೆ ಆತ್ಮವಂಚನೆಯ ಮಾತಾಡುತ್ತಿದೆ ಅಂತ ಟ್ವೀಟ್ ಮೂಲಕ ಕಿಡಿಕಾರಿದೆ. ಒಟ್ಟಿನಲ್ಲಿ ವಿದ್ಯುತ್ ದರ ಏರಿಸಿದ್ದು ನಾವಲ್ಲ ಎಂದು ಕಾಂಗ್ರೆಸ್-ಬಿಜೆಪಿ ಹೇಳುತ್ತಿರುವುದು ರಾಜ್ಯದ ಜನರಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಜನರಿಗೆ ಕರೆಂಟ್​​ ಶಾಕ್​​.. ವಿದ್ಯುತ್​ ಬಿಲ್​​ ಏರಿಸಿದ್ದು ಕಾಂಗ್ರೆಸ್ಸೋ, ಬಿಜೆಪಿ ಸರ್ಕಾರವೋ?

https://newsfirstlive.com/wp-content/uploads/2023/06/Bommai_Siddu.jpg

Load More