newsfirstkannada.com

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಸೋಲಿಸಲು ಪಣ; ಬಿಜೆಪಿ, ಜೆಡಿಎಸ್​​ ಮೈತ್ರಿ; ಪ್ಲಾನ್​ ಏನು?

Share :

12-09-2023

    ಮತಯುದ್ಧಕ್ಕೂ ಮುನ್ನವೇ ‘ಕಮಲ-ದಳ’ ಮೈತ್ರಿ ಮಂಥನ

    ಕೇಸರಿ-ಹಸಿರಿನ ದೋಸ್ತಿ.. ಕೈಗೆ ಜಟೀಲ ಕುಸ್ತಿಯ ಭೀತಿ

    ‘ಹಳೇ ಪರಿವಾರ’ದ ಹೊಸ ಸವಾಲು ಸ್ವೀಕರಿಸಿದ ಹಸ್ತ

ವಿಧಾನಸಭೆ ಚುನಾವಣೆ ಸೋಲು ಬಿಜೆಪಿ ಮತ್ತು ಜೆಡಿಎಸ್​ ಪಕ್ಷವನ್ನ ಹತ್ತಿರವಾಗಿಸಿದೆ. ಶತ್ರುವಿನ ಶತ್ರು ಮಿತ್ರ ಅನ್ನೋ ಹಾಗೇ ಎರಡು ಪಕ್ಷಗಳ ಟಾರ್ಗೆಟ್​​, ಕಾಂಗ್ರೆಸ್​ ಆಗಿದೆ. ಇನ್ನು, ಭಿನ್ನ ಲೆಕ್ಕಾಚಾರದಲ್ಲಿದ್ದ ಕಾಂಗ್ರೆಸ್​​, ಲೋಕ ಕದನಕ್ಕೆ ತನ್ನ ಫಾರ್ಮೂಲಾ ಬದಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಇತ್ತ, ಮೈತ್ರಿ ವಿಚಾರವಾಗಿ ಕೈ-ಕಮಲ ನಾಯಕರ ಮಾತಿನ ವಾಗ್ಯುದ್ಧವೂ ಜೋರಾಗಿದೆ. ಲೋಕಸಭೆ ಎಲೆಕ್ಷನ್​​ಗೆ ರಾಜ್ಯದಲ್ಲಿ ಮೂರು ಪಕ್ಷಗಳು ಭರ್ಜರಿ ತಯಾರಿ ಆರಂಭಿಸಿವೆ. ಮತ ಕದನಕ್ಕೂ ಮುನ್ನವೇ ಕಮಲ-ತೆನೆ ಪಾರ್ಟಿಗಳು ಮೈತ್ರಿ ಮಂಥನಕ್ಕೆ ಕುಳಿತಿವೆ. ವಿಧಾನಸಭೆ ಸೋಲಿಗೆ ಸೇಡು ತೀರಿಸಿಕೊಳ್ಳಲು ತಾಲೀಮು ನಡೆಸ್ತಿರುವ ಎರಡು ಪಕ್ಷಗಳಿಗೂ ಸಾಮರ್ಥ್ಯದ ಜೊತೆಗೆ ಅಸ್ತಿತ್ವದ ಹೋರಾಟವೂ ಅನಿವಾರ್ಯ ಆಗಿಸಿದೆ. ಕೇಸರಿ-ಹಸಿರಿನ ದೋಸ್ತಿ, ಕೈಗೆ ಜಟೀಲ ಕುಸ್ತಿಯ ಭೀತಿ ಇದೆ.

ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಜೆಡಿ ಯೆಸ್​​!
‘ಹಳೇ ಪರಿವಾರ’ದ ಹೊಸ ಸವಾಲು ಸ್ವೀಕರಿಸಿದ ಹಸ್ತ

2024ರ ಲೋಕಸಭೆ ಎಲೆಕ್ಷನ್​​​ಗೆ ನಮೋ ಟೀಂ ಮೈತ್ರಿ ವಿಸ್ತರಣೆಯಲ್ಲಿ ತೊಡಗಿದೆ. ಮಿಷನ್​​ ಸೌಥ್​ನ ಭಾಗವಾಗಿ ಜೆಡಿಎಸ್​​ಗೆ ಗಾಳ ಹಾಕಿದ ಕಮಲ, ಕಳೆದ ಬಾರಿಯ ಫಲಿತಾಂಶ ಮರುಕಳಿಸುವ ಲೆಕ್ಕಾಚಾರದಲ್ಲಿದೆ. ದಳಕ್ಕೂ ಆಸರೆಯ ಆಶ್ರಯ ಬೇಕಿದ್ದು, ಕಾಂಗ್ರೆಸ್​​ ವಿರುದ್ಧ ಸೆಡ್ಡು ಹೊಡೆದಿದೆ. ಈ ಮೈತ್ರಿ ವಿಚಾರವಾಗಿ ಎರಡು ಪಕ್ಷಗಳನ್ನ ಕೈಪಡೆ ಕುಟುಕಿದ್ದು, ಸವಾಲು ಗೆಲ್ಲುವ ವಿಶ್ವಾಸದಲ್ಲಿದೆ.

ಮೈತ್ರಿ ಮನಸ್ಸು ಮಾಡಿದ ಬಿಜೆಪಿ ರಾಜ್ಯದಲ್ಲಿ ವೀಕು!
ಕಾಂಗ್ರೆಸ್​​ ಓಟ ತಡೆದುನೋಡಿ ಎಂದು ಪರಂ ಸೆಡ್ಡು!

ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್​​, ಕಳೆದ ಬಾರಿ ಬಿಜೆಪಿ ಯಾರ ಜೊತೆಗೂ ಮೈತ್ರಿ ಮಾಡ್ಕೊಂಡಿಲ್ಲ. ಈಗ ಮೈತ್ರಿ ಅಂತಿದ್ದಾರೆ. ಅಂದ್ರೆ ಬಿಜೆಪಿ ವೀಕ್ ಆಗಿದೆ ಅಂತ ಅಲ್ವಾ ಅಂತ ಪರಮೇಶ್ವರ್​​​​ ಲಾಜಿಕ್​​​​ ಪ್ರಶ್ನೆ. ಮೈತ್ರಿಯಿಂದ ಕಾಂಗ್ರೆಸ್ ಹೆದರಿಸಲು ಹೊರಟಿದ್ದಾರೆ. ಆದ್ರೆ, ಇದಕ್ಕೆಲ್ಲಾ ನಾವು ರೆಡಿ ಅಂತ ಸೆಡ್ಡು ಹೊಡೆದಿದ್ದಾರೆ.

ನನ್ನ ಹೆಣವೂ ಕೂಡ ಬಿಜೆಪಿ ಪಕ್ಷದತ್ತ ಹೋಗಲ್ಲ!
ಹೆಚ್​ಡಿಕೆ ಆರೋಪಕ್ಕೆ ಸಿದ್ದು ಭರ್ಜರಿ ಕೌಂಟರ್​​!

ಬಿಜೆಪಿ ಸೇರಲು ಅಡ್ವಾಣಿ ಭೇಟಿ ಮಾಡಿದ್ದರು ಎಂಬ ಮಾಜಿ ಸಿಎಂ ಹೆಚ್​ಡಿಕೆ ಆರೋಪಕ್ಕೆ ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಕೋಮುವಾದಿಗಳ ಜೊತೆ ರಾಜಿ ಇಲ್ಲವೇ ಇಲ್ಲ. ನನ್ನ ಹೆಣವೂ ಕೂಡ ಬಿಜೆಪಿಗೆ ಹೋಗಲ್ಲ. ನಾನು ಸಿದ್ಧಾಂತಕ್ಕಾಗಿ ಬದುಕಿರುವ ವ್ಯಕ್ತಿ ಅಂತ ಕೌಂಟರ್​​ ಮಾಡಿದ್ದಾರೆ.

ಜೆಡಿಎಸ್​​​ ಬಿಜೆಪಿ ‘ಬಿ’ ಟೀಂ ಸಾಬೀತು ಎಂದ ಖರ್ಗೆ
ಗೊಂದಲದಲ್ಲಿ ಗೌಡರಿಂದ ತಪ್ಪು ಹೆಜ್ಜೆ ಎಂದ ಖಂಡ್ರೆ!

ಕಮಲ ದಳ ಮೈತ್ರಿಯನ್ನ ಕುಟುಕಿದ ಸಚಿವ ಪ್ರಿಯಾಂಕ್​​​​ ಖರ್ಗೆ, ಜೆಡಿಎಸ್​ ಬಿಜೆಪಿಯ ‘ಬಿ’ ಟೀಂ ಅನ್ನೋದು ಸಾಬೀತಾಗಿದೆ. ಮೋದಿ ಪಾಪ್ಯುಲಾರಿಟಿ ಇಳಿಯುತ್ತಿರೋದಕ್ಕೆ ಸಾಕ್ಷಿ ಎಂದರು. ಇತ್ತ ಈಶ್ವರ್​​​ ಖಂಡ್ರೆ ವ್ಯಾಖ್ಯಾನ ಭಿನ್ನವಾಗಿದೆ. ಹಿರಿಯ ನಾಯಕ ಗೌಡರ ಗೊಂದಲವೇ ಮೈತ್ರಿ ತೀರ್ಮಾನ ಅಂತ ಹೇಳಿದ್ದಾರೆ.

ಕಮಲ ದಳ ಒಂದಾದ್ರೆ ಕಾಂಗ್ರೆಸ್​​ಗೆ ಅಡ್ರೆಸ್​​​ ಇರಲ್ಲ
ಮೈತ್ರಿ ಪರವಾಗಿ ಬಿಜೆಪಿ ನಾಯಕರಿಂದ ಬ್ಯಾಟಿಂಗ್​​!

ದೆಹಲಿಯಲ್ಲಿ ಮೈತ್ರಿ ಪಲ್ಲವಿಸ್ತಿರುವ ಹೊತ್ತಲ್ಲೆ ರಾಜ್ಯ ಬಿಜೆಪಿಯಲ್ಲಿ ಫುಲ್​​ ಖುಷ್​ ಆದಂತಿದೆ. ಮೈತ್ರಿ ಎಂಬುದು ಸಿಹಿಸುದ್ದಿ ಎಂದ ಈಶ್ವರಪ್ಪ, ರಾಜ್ಯದಲ್ಲಿ ಕಾಂಗ್ರೆಸ್‌ ಅಡ್ರೆಸ್ ಇಲ್ಲದಂತಾಗಲಿದೆ ಅಂತ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್​ ಮಣಿಸಲು ಈ ದೋಸ್ತಿ ಅಗತ್ಯ ಅಂತ ಮಾಜಿ ಸಿಎಂ ಬೊಮ್ಮಾಯಿ ಸಮರ್ಥಿಸಿದ್ದಾರೆ. ಒಟ್ಟಾರೆ, ಸದ್ಯ ಮೈತ್ರಿ ಸುಳಿವು ಸಿಕ್ಕಿದ್ದು ಸೀಟ್​​ ಶೇರಿಂಗ್​​ ಫೈನಲ್​​ ಆಗಬೇಕಿದೆ. 2 ಪಕ್ಷಗಳಿಗೂ ಬೇರೆ ಬೇರೆ ಕಾರಣಕ್ಕೆ ದೋಸ್ತಿ ಅನಿವಾರ್ಯ ಆಗಿದ್ದು, ಕಾಂಗ್ರೆಸ್​​ ಮಣಿಸಲು ಟೊಂಕಕಟ್ಟಿ ನಿಂತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಸೋಲಿಸಲು ಪಣ; ಬಿಜೆಪಿ, ಜೆಡಿಎಸ್​​ ಮೈತ್ರಿ; ಪ್ಲಾನ್​ ಏನು?

https://newsfirstlive.com/wp-content/uploads/2023/09/congress.jpg

Load More