ಬೆಂಗಳೂರಿನ ಬಿಜೆಪಿ ಶಾಸಕರಿಗೆ ಕಟೀಲ್ ಎಚ್ಚರಿಕೆ!
ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಲಹೆ
ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ಕೇಸರಿ ಪಡೆ ಕಣ್ಣು
ಬೆಂಗಳೂರು: ಲೋಕ ಕದನದಲ್ಲಿ ಹ್ಯಾಟ್ರಿಕ್ ಗೆಲವು ಸಾಧಿಸಲು ಕೇಸರಿ ಪಾಳಯ ಟೊಂಕಕಟ್ಟಿ ನಿಂತಿದೆ. ಆದರೆ ಕರುನಾಡಿನ ಗ್ಯಾರಂಟಿ ಸೋಲಿನಿಂದ ಸಣ್ಣ ಆತಂಕವೂ ಎದುರಾಗಿದೆ. ಲೋಕಸಭೆ ಚುನಾವಣೆಯಲ್ಲೂ ಗ್ಯಾರಂಟಿ ಗೇಮ್ಪ್ಲಾನ್ ಮಾಡಿದರೆ, ಕಥೆ ಹೇಗಪ್ಪ ಎಂಬ ಚಿಂತೆ ಬಿಜೆಪಿ ಹೈಕಮಾಂಡ್ ತಲೆಯನ್ನು ಒಕ್ಕಿದೆ. ಹೀಗಾಗಿ ಗ್ಯಾರಂಟಿಗಳ ಮೇಲೆ ಕಣ್ಣಿಡಲು ಸಂತೋಷ್ಗೆ ಬಿಜೆಪಿ ಹೈಕಮಾಂಡ್ ಹೈ ಟಾಸ್ಕ್ ನೀಡಿದ್ದು, ಮೈಯನ್ನೆಲ್ಲ ಕಣ್ಣಾಗಿಸಿಕೊಂಡಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ನ ಕೈ ಹಿಡಿದಿದ್ದೇ ಗ್ಯಾರಂಟಿ ಘೋಷಣೆಗಳು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಗ್ಯಾರಂಟಿ ಘೋಷಣೆಗಳ ಮೂಲಕ ಕಮಾಲ್ ಮಾಡಿದ್ದ ಕಾಂಗ್ರೆಸ್ ಪಡೆ 135 ಸ್ಥಾನಗಳ ಪ್ರಚಂಡ ಬಹುಮತದೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ಅಧಿಕಾರದಲ್ಲಿದ್ದ ಬಿಜೆಪಿ ಕಾಂಗ್ರೆಸ್ನ ಗ್ಯಾರಂಟಿಗಳ ಸುನಾಮಿಗೆ ಕೊಚ್ಚಿ ಹೋಗಿದೆ. ಇದೀಗ ಲೋಕಸಭೆ ಚುನಾವಣೆಯಲ್ಲೂ ಗೆಲುವಿಗಾಗಿ ಕಾಂಗ್ರೆಸ್ ರಣವ್ಯೂಹ ರಚಿಸೋದು ಗ್ಯಾರಂಟಿ. ಹೀಗಾಗಿ ಕರ್ನಾಟಕದ ಗ್ಯಾರಂಟಿ ಸೋಲಿನಿಂದ ಪಾಠ ಕಲಿತಿರುವ ಕೇಸರಿ ಪಡೆ ಫುಲ್ ಅಲರ್ಟ್ ಆಗಿದೆ.
ಲೋಕಸಭೆಗೆ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ಪ್ಲಾನ್

2024ರ ಲೋಕಸಭೆ ಚುನಾವಣೆಗೆ ಇನ್ನು ಬೆರಳೆಣಿಕೆಯಷ್ಟು ತಿಂಗಳು ಮಾತ್ರ ಬಾಕಿ ಇದೆ. ಹೀಗಾಗಿ ಬಿಜೆಪಿ ಪಡೆ, ಹ್ಯಾಟ್ರಿಕ್ ಜಯದ ಕನಸು ಕಾಣ್ತಿದೆ. ಆದ್ರೆ, ಕಾಂಗ್ರೆಸ್ನ ಗ್ಯಾರಂಟಿ ಅಸ್ತ್ರದಿಂದ ಕೇಸರಿ ಪಡೆಯ ನಿದ್ರಾಭಂಗವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರು ಗೆದ್ದರು. ಆದ್ರೀಗ ಕಾಂಗ್ರೆಸ್ನ ಗ್ಯಾರಂಟಿಗಳಿಂದಾಗಿ ಸಣ್ಣ ಆತಂಕ ಶುರುವಾಗಿದೆ. ಹೆಚ್ಚು ಸ್ಥಾನ ಗೆಲ್ಲಲು ಪಣತೊಟ್ಟಿರುವ ಕೇಸರಿ ಪಡೆ, ಕಾಂಗ್ರೆಸ್ನ ರಣತಂತ್ರಗಳ ಬಗ್ಗೆ ಹದ್ದಿನ ಕಣ್ಣಿಡಲು ನಿರ್ಧರಿಸಿದೆ. ಕಾಂಗ್ರೆಸ್ ಗ್ಯಾರಂಟಿ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈಕಮಾಂಡ್, ಸಮಗ್ರ ಮಾಹಿತಿ ತರಿಸಿಕೊಂಡು, ತಂತ್ರ ರೂಪಿಸಲು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ಗೆ ಟಾಸ್ಕ್ ನೀಡಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಈಗಿನ ವಾತಾವರಣ ಹೇಗಿದೆ? ವಿಧಾನಸಭೆ ಎಲೆಕ್ಷನ್ನಲ್ಲಿ 7 ಜಿಲ್ಲೆಗಳಲ್ಲಿ ಬಿಜೆಪಿ ಖಾತೆಯನ್ನೇ ತೆರೆದಿಲ್ಲ. ಏಳು ಜಿಲ್ಲೆಗಳಲ್ಲಿ ಬಿಜೆಪಿಯ ಸಂಸದರುಗಳ ಇಂದಿನ ಪರಿಸ್ಥಿತಿ ಹೇಗಿದೆ. ರಾಜ್ಯ ಸರ್ಕಾರದಲ್ಲಿದ್ದ 20 ಸಚಿವರು ಪರಾಭವಗೊಂಡಿದ್ದು ಹೇಗೆ ಎಂಬ ಮಾಹಿತಿ ತರಿಸಿಕೊಂಡು, ತಂತ್ರ ರೂಪಿಸಲು ನಿರ್ಧರಿಸಿದೆ.
ಬೆಂಗಳೂರಿನ ಬಿಜೆಪಿ ಶಾಸಕರಿಗೆ ಕಟೀಲ್ ಎಚ್ಚರಿಕೆ
ಇನ್ನು ಬೆಂಗಳೂರಿನ 3 ಸಂಸದ ಕ್ಷೇತ್ರಗಳಲ್ಲಿ ಬಿಜೆಪಿಯೇ ಗೆದ್ದಿದೆ. ಹೀಗಾಗಿ ಆ ಕ್ಷೇತ್ರಗಳನ್ನು 2024ರ ಚುನಾವಣೆಯಲ್ಲೂ ತಮ್ಮ ಬಳಿಯೇ ಉಳಿಸಿಕೊಳ್ಳಬೇಕಾಗಿದೆ. ಈಗಾಗಲೇ ಡಿಸಿಎಂ ಡಿಕೆ.ಶಿವಕುಮಾರ್, ಬಿಜೆಪಿಯಲ್ಲಿ ಗುರುಸಿಕೊಂಡಿರುವ ಹಲವು ಮುಖಂಡರನ್ನು ಸೆಳೆಯುತ್ತಿದ್ದಾರೆ. ಇತ್ತೀಚಿಗೆ ಆರ್ಆರ್ ನಗರ ಕ್ಷೇತ್ರದ ವೇಲು ನಾಯ್ಕರ್ ಕಾಂಗ್ರೆಸ್ ಸೇರ್ಪಡೆಯಾಗಿದ್ರು. ಈ ವಿಷ್ಯ ಪ್ರಸ್ತಾಪಿಸಿ, ಬೆಂಗಳೂರು ವ್ಯಾಪ್ತಿಯ 16 ಶಾಸಕರಿಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್, ಪಕ್ಷದ ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.
ಸಿದ್ದು ಗ್ಯಾರಂಟಿ ಸವಾಲ್ಗೆ ಅಶ್ವತ್ಥ್ನಾರಾಯಣ್ ಟಾಂಗ್
ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯ ಮಾಡಿದ್ರು. ಇದಕ್ಕೆ ತಿರುಗೇಟು ನೀಡಿದ್ದ ಸಿಎಂ ಸಿದ್ದರಾಮಯ್ಯ, ಲೋಕಸಭೆ ಚುನಾವಣೆ ವೇಳೆ, ಗ್ಯಾರಂಟಿ ಯೋಜನೆಗಳನ್ನೇ ಚರ್ಚಿಸಿ ಎಂದು ಪ್ರಧಾನಿಗೆ ಸವಾಲು ಹಾಕಿದ್ರು. ಸಿದ್ದರಾಮಯ್ಯನವರ ಈ ಹೇಳಿಕೆ ಮಾಜಿ ಸಚಿವ ಅಶ್ವತ್ಥ್ನಾರಾಯಣ್ ಎದಿರೇಟು ನೀಡಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿ ತಾಕತ್ತು ತೋರಿಸಿ ಎಂದು ಕಿಡಿಕಾರಿದ್ದಾರೆ. ಒಟ್ಟಾರೆ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳಿ ಬಾಕಿ ಇರುವಂತೆ, ಕಾಂಗ್ರೆಸ್ ಬಿಜೆಪಿ ಮಧ್ಯೆ, ಆರೋಪ-ಪ್ರತ್ಯಾರೋಪ, ಸವಾಲು ಪ್ರತಿಸವಾಲು. ತಂತ್ರ-ರಣತಂತ್ರಗಳು ಜೋರಾಗಿಯೇ ನಡೆಯುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ