ಅಧಿಕಾರಕ್ಕೆ ಬಂದ ಕೂಡಲೇ ವಿವಾದಕ್ಕೆ ಸಿಲುಕಿದ ಕಾಂಗ್ರೆಸ್ ಸರ್ಕಾರ
ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದ, ಜೆಡಿಎಸ್, ಬಿಜೆಪಿ!
‘ಬೀದಿಯಲ್ಲಿ ಹೋಗುವವರ ಜೊತೆ ಸರ್ಕಾರ ತೀರ್ಮಾನ’ ಎಂದ HDK
ಬೆಂಗಳೂರು: ಗ್ಯಾರಂಟಿಗಳ ಯೋಜನೆಗಳ ಜಾರಿ ಕುರಿತು ಟೀಕೆಗಳಿಗೆ ಗುರಿಯಾಗಿರುವ ಕಾಂಗ್ರೆಸ್ ಸರ್ಕಾರ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಇತ್ತೀಚೆಗೆ ನಡೆದ ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿಕೆಶಿ ಜೊತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಭಾಗಿಯಾಗಿದ್ದರು. ಕಾಂಗ್ರೆಸ್ ವಿರುದ್ಧ ವಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದ್ದು ಹೋರಾಟಕ್ಕೆ ಸಜ್ಜಾಗಿವೆ.
ಬಿಬಿಎಂಪಿ ಚುನಾವಣೆ ಕುರಿತಂತೆ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಹಾಜರಾಗಿರೋದು ಭಾರಿ ವಿವಾದ ಸೃಷ್ಟಿಸಿದೆ.
ಸಭೆ ನಡೆಸಿ ಇಕ್ಕಟ್ಟಿಗೆ ಸಿಲುಕಿತಾ ಕಾಂಗ್ರೆಸ್ ಸರ್ಕಾರ..?
ಇತ್ತೀಚೆಗೆ ಬಿಬಿಎಂಪಿ ಚುನಾವಣೆ ಸಂಬಂಧ ಅಧಿಕಾರಿಗಳ ಜೊತೆ ಬೆಂಗಳೂರು ಉಸ್ತುವಾರಿ ಸಚಿವ ಡಿಕೆಶಿ ಸಭೆ ನಡೆಸಿದ್ದರು. ಸಭೆಯಲ್ಲಿ ಸಚಿವ ಜಮೀರ್, ಕೆ.ಜೆ.ಜಾರ್ಜ್ ಸೇರಿ ಅಧಿಕಾರಿಗಳು ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಭಾಗಿಯಾಗಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
‘ಬೀದಿಯಲ್ಲಿ ಹೋಗುವವರ ಜೊತೆ ಸರ್ಕಾರ ತೀರ್ಮಾನ’
ಇನ್ನು ಸರ್ಕಾರದ ಸಭೆಯಲ್ಲಿ ಸುರ್ಜೇವಾಲಾ ಭಾಗಿಯಾಗಿದ್ದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರಕ್ಕೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಇದು ಹೈಕಮಾಂಡ್ ಹಂಗಿನಾ ಸರ್ಕಾರ.. ರಾಜ್ಯ ಲೂಟಿ ಮಾಡಲು ದೆಹಲಿಯಿಂದ ಬಂದಿರುವ ಪ್ರತಿನಿಧಿ ಅಂತ ಕಿಡಿಕಾರಿದ್ದಾರೆ.
ಸರ್ಕಾರದ ವಿರುದ್ಧ ಮುಗಿಬಿದ್ದ ಅಶ್ವತ್ಥ್ ನಾರಾಯಣ!
ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲಾ ಭಾಗಿಯಾಗಿದ್ದು ಖಂಡನೀಯ ಅಂತ ಮಾಜಿ ಸಚಿವ ಅಶ್ವತ್ಥ್ ನಾರಾಯಣ್ ಕಿಡಿಕಾರಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಬಿಜೆಪಿ ಕಾಂಗ್ರೆಸ್ ವಿರುದ್ಧ ಟ್ವೀಟಾಸ್ತ್ರ ಪ್ರಯೋಗಿಸಿದೆ. ಅಧಿಕಾರಿಗಳ ಸಭೆಯಲ್ಲಿ ಕಲೆಕ್ಷನ್ ಏಜೆಂಟ್ ಆಗಿ ಸುರ್ಜೇವಾಲಾ ಭಾಗಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ಎಚ್ಚೆತ್ತುಕೊಳ್ಳಿ ಅಂತ ಕುಟುಕಿದೆ.
ರಾಜ್ಯದಲ್ಲಿ ಮುಂಗಾರು ವಿಳಂಬವಾಗಿದೆ, ಜಲಾಶಯಗಳು ಬರಿದಾಗಿವೆ, ಶೇ.25ರಷ್ಟು ಬಿತ್ತನೆಯಾಗಿಲ್ಲ. ಕರ್ನಾಟಕ ಕಾಂಗ್ರೆಸ್ ಕಮಿಷನ್ ಕುದುರಿಸಲು BBMP ಮತ್ತು BDA ಅಧಿಕಾರಿಗಳನ್ನು ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಜತೆ ಸಭೆ ನಡೆಸುತ್ತದೆಯೇ ವಿನಃ ಅನ್ನದಾತನ ಬಗ್ಗೆ ಕಾಂಗ್ರೆಸ್ಗೆ ಅಸಡ್ಡೆ. ಸಿದ್ದರಾಮಯ್ಯನವರೇ ಎಚ್ಚೆತ್ತುಕೊಳ್ಳಿ ಎಂದು ಗುಡುಗಿದೆ.
ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಿಯೋಗ!
ಇನ್ನೂ ಈ ಸಂಬಂಧ ಬಿಜೆಪಿ ನಿಯೋಗ ಮಾಜಿ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ದೂರು ಸಲ್ಲಿಸಿ ಸರ್ಕಾರದ ಕಿವಿ ಹಿಂಡುವಂತೆ ಮನವಿ ಮಾಡಿದೆ. ಒಟ್ನಲ್ಲಿ ಯಾವುದೇ ಪಕ್ಷದ ಪದಾಧಿಕಾರಿಗಳು ಜನಪ್ರತಿನಿಧಿಯಲ್ಲದಿದ್ದಲ್ಲಿ ಸರ್ಕಾರದ ಸಭೆಯಲ್ಲಿ ಭಾಗಿಯಾಗುವಂತಿಲ್ಲ. ಸದ್ಯ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದ್ದು ಏನು ಕ್ರಮ ಆಗುತ್ತೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ