newsfirstkannada.com

ಆಪರೇಷನ್ ‘ಹಸ್ತ’: ಆರ್​.ಅಶೋಕ್​ಗೆ ಬಿಗ್ ಶಾಕ್ ಕೊಡಲು ಡಿ.ಕೆ.ಶಿವಕುಮಾರ್ ಪ್ಲಾನ್..!

Share :

15-09-2023

    ಬಿಜೆಪಿ-ಜೆಡಿಎಸ್​ ಮುಖಂಡಗರಿಗೆ ಡಿ.ಕೆ.ಬದರ್ಸ್ ಗಾಳ

    ಭಾರತ್ ಜೋಡೋ ಭವನದಲ್ಲಿ ಇವತ್ತು ಪಕ್ಷ ಸೇರ್ಪಡೆ

    15ಕ್ಕೂ ಹೆಚ್ಚು ಸ್ಥಳೀಯ ಮುಖಂಡರು ಕಾಂಗ್ರೆಸ್​ಗೆ ಸೇರ್ಪಡೆ

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಕಾಂಗ್ರೆಸ್​ ಪಡಸಾಲೆಯಲ್ಲಿ ಆಪರೇಷನ್​ ಪಾಲಿಟಿಕ್ಸ್ ಮುಂದುವರೆದಿದೆ. ಬಿಜೆಪಿ ಹಾಗೂ ಜೆಡಿಎಸ್​ ಮುಖಂಡಗರಿಗೆ ಡಿ.ಕೆ.ಬದರ್ಸ್​ ಗಾಳ ಹಾಕಿದ್ದು, ಕೆಲ ಬಿಜೆಪಿ ಹಾಗೂ ಜೆಡಿಎಸ್​ ಮುಖಂಡರು ಕಾಂಗ್ರೆಸ್​ ಸೆರ್ಪಡೆಯಾಗ್ತಿದ್ದಾರೆ.

ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಇವತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು, ಡಿಸಿಎಂ ಡಿ,ಕೆ ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಆರ್.ಅಶೋಕ್​ ಆಪ್ತರು ಕಾಂಗ್ರೆಸ್​ ಸೇರ್ಪಡೆಯಾಗ್ತಿದ್ದಾರೆ ಎನ್ನಲಾಗ್ತಿದೆ. ಬೆಂಗಳೂರು ದಕ್ಷಿಣ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಕಾರ್ಪೊರೇಟರ್ಸ್ ಸೇರಿದಂತೆ 15ಕ್ಕೂ ಹೆಚ್ಚು ಜನ ಕಮಲ ಬಿಟ್ಟು ಕೈ ಹಿಡಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಬ್ಬಡಿ ಬಾಬು, ಶೋಭಾ ಅಂಜಿನಪ್ಪ ಸೇರಿದಂತೆ 15ಕ್ಕೂ ಹೆಚ್ಚು ಮಾಜಿ‌ ಪಾಲಿಕೆ ಸದಸ್ಯರು ಕಾಂಗ್ರೆಸ್​ಗೆ ಸೇರ್ಪಡೆಯಾಗಲಿದ್ದಾರೆ. ಲೋಕಸಭೆ ಹಾಗೂ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿನ ಅತೃಪ್ತ ನಾಯಕರು ಪಕ್ಷ ಸೇರುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಪರೇಷನ್ ‘ಹಸ್ತ’: ಆರ್​.ಅಶೋಕ್​ಗೆ ಬಿಗ್ ಶಾಕ್ ಕೊಡಲು ಡಿ.ಕೆ.ಶಿವಕುಮಾರ್ ಪ್ಲಾನ್..!

https://newsfirstlive.com/wp-content/uploads/2023/08/DKSASHOK.jpg

Load More