newsfirstkannada.com

ನಾಯಕನಿಲ್ಲದ ಬಿಜೆಪಿಗೆ ಈಗ ಹೆಚ್​ಡಿಕೆ ಲೀಡರ್​​; ಲೋಕಸಭಾ ಚುನಾವಣೆಗೆ ಮೈತ್ರಿ ಪಕ್ಕಾ!

Share :

22-07-2023

  ‘ಕೈ’ ವಿರುದ್ಧ ಬಿಜೆಪಿ-ಜೆಡಿಎಸ್ ಒಟ್ಟಾಗಿ ಸಮರ

  ಮೈತ್ರಿ ಗೊಂದಲದ ನಡುವೆ ದೋಸ್ತಿ ಪಾಲಿಟಿಕ್ಸ್​​​

  ಬೊಮ್ಮಾಯಿ-ಹೆಚ್‌ಡಿಕೆ ಒಗ್ಗಟ್ಟಿನ ಹೋರಾಟ!

ಬೆಂಗಳೂರು: ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಒಟ್ಟಾಗಿ ಸಮರ ಸಾರಿವೆ. ಇದರ ಬೆನ್ನಲ್ಲೇ ಇಬ್ಬರು ಮಾಜಿ ಮುಖ್ಯಮಂತ್ರಿಗಳು ನಡೆಸಿದ ಜಂಟಿ ಸುದ್ದಿಗೋಷ್ಠಿ ಭಾರೀ ಕುತೂಹಲ ಮೂಡಿಸಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್‌-ಬಿಜೆಪಿ ಮೈತ್ರಿ ನಡೆಸಲಿದೆ ಎಂಬ ಚರ್ಚೆ ಮಧ್ಯೆಯೇ ಇಬ್ಬರು ಪದೇ ಪದೇ ಒಟ್ಟಿಗೆ ಕಾಣಿಸಿಕೊಳ್ತಿರೋದು ಮೈತ್ರಿ ವಿಚಾರಕ್ಕೆ ಇಂಬು ನೀಡ್ತಿದೆ. ಇನ್ನು, ಜೆಡಿಎಸ್​​​ನ ನಿಲುವನ್ನ ನಾಗವಲ್ಲಿಗೆ ಹೋಲಿಸಿ ಕಾಂಗ್ರೆಸ್​​​ ಗೇಲಿ ಮಾಡಿದೆ.

ಆಡಳಿತ ಪಕ್ಷದ ನಿರೀಕ್ಷಿತ ಗ್ಯಾರಂಟಿ ಅಸ್ತ್ರಕ್ಕೆ ವಿಪಕ್ಷಗಳು ಪ್ರತ್ಯಸ್ತ್ರವಿಲ್ಲದೇ ಬರಿದಾಗಿವೆ. ವಿಧಾನಸಭೆ ಒಳಗೆ ಇತ್ತೀಚಿನ ವರ್ಷಗಳಲ್ಲೇ ಎದುರಿಸದ ಮುಜುಗರವನ್ನ ಕೇಸರಿ ಸೇನೆ ಎದುರಿಸಿದೆ. ಸಿದ್ದು-ಡಿಕೆಶಿ ಜುಗಲ್​ಬಂದಿಯ ಗಾನಮೇಳಕ್ಕೆ ಕಮಲ-ದಳದ ನಾದಸ್ವರ ದಿಕ್ಕು ತಪ್ಪಿದೆ. ಹೀಗಾಗಿ ಸರ್ಕಾರದ ವೈಫಲ್ಯ ಜಾಲಾಡಲು ಇಬ್ಬರಿಗೂ ಮೈತ್ರಿ ಅಂಪೈರಿಂಗ್​​​​ ಅನಿವಾರ್ಯ ಆಗಿಸಿದೆ.

ಲೋಕಸಭೆ ಮೈತ್ರಿ ಗೊಂದಲದ ನಡುವೆ ದೋಸ್ತಿ ಪಾಲಿಟಿಕ್ಸ್​​​!

ಮೊನ್ನೆ ವಿಷಯವಲ್ಲದ ವಿಷಯಕ್ಕೆ ಕಾಲ್ಕೆರೆದು ಗಲಾಟೆಗೆ ನಿಂತ ಬಿಜೆಪಿ, ಭಂಡ ಧೈರ್ಯದಿಂದ ಸದನದಲ್ಲಿ ಹಿಟ್ ವಿಕೆಟ್ ಆಗಿದೆ. ಅನಿರೀಕ್ಷಿತ ಈ ರಾಜಕೀಯ ಗೆರಿಲ್ಲಾ ದಾಳಿಗೆ ಮೊಟ್ಟ ಮೊದಲ ಬಾರಿಗೆ ತಬ್ಬಿಬ್ಬಾಗಿ ಧರಣಿಗೆ ಶರಣು ಹೋಗಿದೆ. ಕಮಲಕ್ಕೆ ನಾಟಿದ ಈ ಏಟು ಸದನವೀರರು ಚೇತರಿಕೆ ಕಂಡಿಲ್ಲ. ಅಗ್ರೆಸ್ಸಿವ್ ಪೊಲಿಟಿಕಲ್ ಬ್ಯಾಟ್ಸ್​ಮನ್​, ದಳದ ಕ್ಯಾಪ್ಟನ್​​​ ಹೆಚ್​ಡಿಕೆ, ದೋಸ್ತಿ ಬಯಸಿದೆ. ಅನ್ನ-ನಾಯಿ ಗಾದೆ ರೀತಿ ಹೆಚ್​​ಡಿಕೆ ಕೂಡ ಭವಿಷ್ಯದ ಮೈತ್ರಿಗೆ ಶಂಕು ಸ್ಥಾಪನೆ ಮಾಡಿದ್ದಾರೆ.

ಸರ್ಕಾರದ ತಪ್ಪುಗಳ ವಿರುದ್ಧ ಒಟ್ಟಾಗಿ ಹೋರಾಟ!

ಬಿಜೆಪಿ ಸದಸ್ಯರ ಅಮಾನತು ಬಳಿಕ ಕಮಲ-ದಳ ಮೈತ್ರಿಗೆ ಹೊಸ ಬೆಸುಗೆ ಬೆಸೆದಿದೆ. ಜಂಟಿ ಹೋರಾಟ ನಡೆಸಿದ್ದ ಹಳೇ ದೋಸ್ತಿಗಳು, ಈಗ ಜಂಟಿ ಸುದ್ದಿಗೋಷ್ಠಿ ನಡೆಸಿವೆ. ಸರ್ಕಾರದ ವಿರುದ್ಧ ನಾವು ಒಟ್ಟಾಗಿ ಕೆಲಸ ಮಾಡುವ ನಿರ್ಣಯ ಮಾಡಿದ್ದೇವೆ. ಇದೆಲ್ಲವೂ ರಾಜ್ಯದ ಜನರ ಹಿತದೃಷ್ಟಿಯಿಂದಾಗಿ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಆದ್ರೆ, ಲೋಕಸಭಾ ಚುನಾವಣೆ ಪೂರ್ವ ಮೈತ್ರಿ ಬಗ್ಗೆ ಹಾರಿಕೆ ಉತ್ತರ ನೀಡಿದ್ದಾರೆ.

ಇನ್ನು, ನ್ಯೂಸ್​ಫಸ್ಟ್​ ಜತೆ ಮಾತನಾಡಿದ ಕುಮಾರಸ್ವಾಮಿ, ಚುನಾವಣೆ ಪೂರ್ವ ಹೊಂದಾಣಿಕೆ ಪ್ರಶ್ನೆಗೆ ಯಾವುದೇ ಗುಟ್ಟು ಬಿಟ್ಟುಕೊಡಲಿಲ್ಲ. ಚುನಾವಣೆ ಹೊತ್ತಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತೆ ಅಂತ ಸಸ್ಪೆನ್ಸ್​ ಇಟ್ರು.

ನಾಯಕತ್ವವಿಲ್ಲದ ಬಿಜೆಪಿ, ದಳದಿಂದ ನಾಯಕತ್ವ ಎರವಲು!

ಬಿಜೆಪಿ – ಜೆಡಿಎಸ್ ಮೈತ್ರಿ ಹೋರಾಟಕ್ಕೆ ಕಾಂಗ್ರೆಸ್​​​ ವಾಗ್ದಾಳಿ ನಡೆಸಿದೆ. ಜೆಡಿಎಸ್ ಹಾಗೂ ಬಿಜೆಪಿಯ ಹೊಂದಾಣಿಕೆಯು ಕುರುಡನ ಹೆಗಲ ಮೇಲೆ ಕುಂಟನ ಸವಾರಿಯಂತಿದೆ ಅಂತ ಗೇಲಿ ಮಾಡಿದೆ. ಅಲ್ಲದೆ, ಜೆಡಿಎಸ್​​ ನಾಗವಲ್ಲಿಯಾಗಿ ಬದಲಾಗ್ತಿದೆ ಅಂತ ಛೇಡಿಸಿದೆ.

‘ಕುರುಡನ ಹೆಗಲ ಮೇಲೆ ಕುಂಟನ ಸವಾರಿ’

ಜೆಡಿಎಸ್-ಬಿಜೆಪಿಯ ಹೊಂದಾಣಿಕೆಯು ಕುರುಡನ ಹೆಗಲ ಮೇಲೆ ಕುಂಟನ ಸವಾರಿಯಂತಿದೆ. ಒಬ್ಬರಿಗೆ ನಡೆಯಲಾಗದು, ಮತ್ತೊಬ್ಬರಿಗೆ ಕಣ್ಣು ಕಾಣದು. ಒಟ್ಟಿನಲ್ಲಿ ಈ ಸವಾರಿಯು ದಾರಿ ತಪ್ಪಿ ಪ್ರಪಾತಕ್ಕೆ ಬೀಳುವುದು ನಿಶ್ಚಿತ. ನಾಯಕತ್ವವಿಲ್ಲದ ಬಿಜೆಪಿ, ಜೆಡಿಎಸ್​ನಿಂದ ನಾಯಕತ್ವದ ಎರವಲು ಪಡೆಯಲು ಮುಂದಾಗಿದ್ದು ನಾಚಿಕೆಗೇಡು. ಇತ್ತ ಜೆಡಿಎಸ್ ಕೋಮುವಾದಿಗಳ ಸಂಘ ಮಾಡಿದ್ದು ಮತಿಗೇಡಿತನ. ಈ ಬೆಳವಣಿಗೆ ನೋಡ್ತಿದ್ರೆ, ಜೆಡಿಎಸ್ ಕೋಮುವಾದ ಸಿದ್ಧಾಂತಕ್ಕೆ ಬದಲಾಗ್ತಿರೋದು ಕಾಣುತ್ತಿದೆ. ಥೇಟ್ ನಾಗವಲ್ಲಿಯ ತರ ಎಂದಿದೆ ಕಾಂಗ್ರೆಸ್​.

2024 ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಲಿದೆ ಎನ್ನುವ ಚರ್ಚೆ ಜೋರಾಗಿದೆ. ಈ ಹೊತ್ತಲ್ಲೇ ಜೆಡಿಎಸ್‌ ನಾಯಕ ಕುಮಾರಸ್ವಾಮಿ, ಮಾಜಿ ಸಿಎಂ ಬೊಮ್ಮಾಯಿ ಜಂಟಿ ಸುದ್ದಿಗೋಷ್ಠಿ, ರಾಜ್ಯದಲ್ಲಿ ಮೈತ್ರಿಯ ಸುಳಿವಿಗೆ ಪುಷ್ಠಿ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಯಕನಿಲ್ಲದ ಬಿಜೆಪಿಗೆ ಈಗ ಹೆಚ್​ಡಿಕೆ ಲೀಡರ್​​; ಲೋಕಸಭಾ ಚುನಾವಣೆಗೆ ಮೈತ್ರಿ ಪಕ್ಕಾ!

https://newsfirstlive.com/wp-content/uploads/2023/07/HDK_Bommai.jpg

Load More